ಕೋವಿಡ್ ನಂತರ ಆರ್.ಎಸ್.ಎಸ್.ಶಾಖೆಗಳ ಸಂಖ್ಯೆ ಹೆಚ್ಚಳ | ಸಂಘಕ್ಕೆ ಸೇರುವವರ ಸಂಖ್ಯೆ ಏರಿಕೆ
ಬೆಂಗಳೂರು : ಕೊವಿಡ್ ಸಂದರ್ಭದಲ್ಲಿ ಶಾಲೆಗಳನ್ನು ಮುಚ್ಚಿದ ಕಾರಣ ತಮ್ಮ ಶಾಖೆಗಳನ್ನು ಸೇರುವ ಮಕ್ಕಳ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ಆರ್‌ಎಸ್‌ಎಸ್ ಹೇಳಿದೆ. ಹತ್ತರಿಂದ ಹದಿನಾರು ವರ್ಷಗಳ ನಡುವಿನ ಮಕ್ಕಳು ದೊಡ್ಡ ಸಂಖ್ಯೆಯಲ್ಲಿ ಶಾಖೆಗಳನ್ನು ಸೇರಿರುವುದರಿಂದ ಸದಸ್ಯರ ಪ್ರಮಾಣ ಎರಡು ವರ್ಷಗಳಲ್ಲಿ ಶೇ 5ರಷ್ಟು ಹೆಚ್ಚಾಗಿದೆ ಎಂದು ಆರ್ ಎಸ್ಎಸ್ ಹೇಳಿದೆ.
ಲಾಕ್ ಡೌನ್ ನಂತರ ಶಾಖೆಗಳು ಉಚಿತ ಪಾಠಗಳನ್ನು ಆಯೋಜಿಸುವ ಜೊತೆಗೆ ಕ್ರೀಡೆಗಳಿಗೆ ಪೂರಕ ವಾತಾವರಣ ಕಲ್ಪಿಸಿಕೊಟ್ಟಿರುವುದರಿಂದ 2019ರಲ್ಲಿ ರಾಜ್ಯದಲ್ಲಿ4404ರಷ್ಟಿದ್ದಆರ್‌ಎಸ್‌ಎಸ್ ಶಾಖೆಗಳ ಸಂಖ್ಯೆ 2021ರಲ್ಲಿ4614ಕ್ಕೇರಿದೆ.
ಉತ್ತರ ಕರ್ನಾಟಕದಲ್ಲಿ ಶಾಖೆಗಳ ಸಂ ಖ್ಯೆ 1108ರಿಂದ 1363ಕ್ಕೆ ಏರಿದರೆ, ದಕ್ಷಿಣದ ಪ್ರಾಂತದಲ್ಲಿ 2019ರಲ್ಲಿ 3269ಗಳಿದ್ದ ಶಾಖೆಗಳ ಸಂಖ್ಯೆ 2021ರಲ್ಲಿ 3255ಕ್ಕೆ ಇಳಿದಿದೆ. ಆದರೆ ಮಕ್ಕಳ ಸಂಖ್ಯೆ ಗಣನೀಯವಾಗಿ ಏರಿದೆ ಎಂದು ಆರ್‌ಎಸ್‌ಎಸ್ ಹೇಳಿದೆ. ಸಂಜೆ ವೇಳೆ ಕನಿಷ್ಠ 25 ಮಕ್ಕಳು ಶಾಖೆಗೆ ಹಾಜರಾಗುತ್ತಾರೆ.
ಮಕ್ಕಳ ಬೇಡಿಕೆ ಈಡೇರಿಸಲು ಆರ್‌ಎಸ್‌ಎಸ್ 33 ದೈನಂದಿಕ ಮತ್ತು 18 ಸಾಪ್ತಾಹಿಕ ಶಾಖೆಗಳನ್ನು ಹೆಚ್ಚುವರಿಯಾಗಿ ಆರಂಭಿಸಿದೆ.