ಉಪ್ಪಿನಂಗಡಿ : ಬಾಲಕನ ಅಪಹರಣ ಯತ್ನ | ಕೊಸರಾಡಿಕೊಂಡು ಅಪಹರಣಕಾರರಿಂದ ತಪ್ಪಿಸಿದ ಬಾಲಕ

Share the Article

ಉಪ್ಪಿನಂಗಡಿ: ಓಮ್ಮಿ ಕಾರಿನಲ್ಲಿ ಬಂದವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬಾಲಕನನ್ನು ಹಿಡಿದೆಳೆದು ಅಪಹರಣ ಮಾಡಲು ಯತ್ನಿಸಿದ ಘಟನೆ ಉಪ್ಪಿನಂಗಡಿ ಬಳಿಯ ಮಠ ಹಿರ್ತಡ್ಕ ಎಂಬಲ್ಲಿ ಮಂಗಳವಾರ ಸಂಜೆ ನಡೆದಿದೆ

ಹಿರ್ತಡ್ಕದ ಜನತಾ ಕಾಲನಿ ನಿವಾಸಿ 14ರ ಬಾಲಕ ಸಿಫಾನ್ ಎಂಬಾತನೇ ಅಪಹರಣಕಾರರಿಂದ ಬಿಡಿಸಿಕೊಂಡು ಬಂದ ಬಾಲಕ. ಈತ ಇಂದು ಸಂಜೆ ಬೀಡಿ ಕೊಡಲೆಂದು ಬೀಡಿ ಬ್ರಾಂಚ್‌ಗೆ ತೆರಳಿದ್ದು, ಈ ಸಂದರ್ಭ ಬೆಂಗಳೂರು ಕಡೆಗೆ ತೆರಳುತ್ತಿದ್ದ ಓಮ್ಮಿ ಕಾರೊಂದು ಇವನ ಹಿಂದಿನಿಂದ ಇವನಿಗೆ ಗೊತ್ತಿಲ್ಲದಂತೆ ಬಂದಿದ್ದು, ಇದರಿಂದ ಇಳಿದ ಓರ್ವ ಬಾಲಕನನ್ನು ಬಂದು ಹಿಂದಿನಿಂದ ಹಿಡಿದಿದ್ದ ಅಲ್ಲದೇ, ಅದೇ ಸಮಯದಲ್ಲಿ ಓಮ್ಮಿ ಕಾರು ಇವನಿಗೆ ಅಡ್ಡಲಾಗಿ ಬಂದು ನಿಂತಿತ್ತು ಎನ್ನಲಾಗಿದೆ. ಆಗ ಈ ಬಾಲಕ ಕೊಸರಾಡಿಕೊಂಡು ಅಪರಿಚಿತನಿಂದ ಬಿಡಿಸಿಕೊಂಡು ಹೋಗಿದ್ದು, ಓಮ್ಮಿ ಪರಾರಿಯಾಗಿದೆ ಎನ್ನಲಾಗಿದೆ.

Leave A Reply