ಸರ್ವೆ : ದೀನ್ ದಯಾಳ್ ಉಪಾಧ್ಯಾಯ ಜನ್ಮದಿನಾಚರಣೆ

Share the Article

ಭಾರತೀಯ ಜನತಾ ಪಾರ್ಟಿ ಸರ್ವೆ ಬೂತ್ ಸಂಖ್ಯೆ 191 ರ ವತಿಯಿಂದ ದೀನ್ ದಯಾಳ್ ಉಪಾಧ್ಯಾಯ ಇವರ ಜನ್ಮ ದಿನದ ಆಚರಣೆಯು ಮುಂಡೂರು ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಶೇಖರ್ ಎನ್‌.ಎಸ್.ಡಿ ಯವರ ಮನೆಯಲ್ಲಿ ನಡೆಯಿತು.

ದೀನ್ ದಯಾಳ್ ಇವರ ಭಾವಚಿತ್ರ ಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ದೀನ್ ದಯಾಳ್ ಉಪಾದ್ಯಾಯ ಅವರ ಜೀವನ ಚರಿತ್ರೆಯನ್ನು ಚಂದ್ರಶೇಖರ್ ಎನ್‌.ಎಸ್.ಡಿ ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಶಕ್ತಿ ಕೇಂದ್ರ ಸರ್ವೆ ಇದರ ಅಧ್ಯಕ್ಷರಾದ ಅಶೋಕ್ ರೈ ಸೊರಕೆ ,ಪುತ್ತೂರು ತಾಲ್ಲೂಕು ಬಿಜೆಪಿ ಎಸ್‌.ಸಿ.ಮೋರ್ಚಾದ ಪ್ರಧಾನ ಕಾರ್ಯದರ್ಶಿ ಜನಾರ್ಧನ ಸರ್ವೆ , 191 ರ ಬಿಜೆಪಿ ಬೂತ್ ಅಧ್ಯಕ್ಷರಾದ ಗೌತಮ್ ರೈ ಸರ್ವೆ, ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಶೇಖರ್ ಎನ್‌.ಎಸ್.ಡಿ,ಪ್ರವೀಣ್ ನಾಯ್ಕ್ ನೆಕ್ಕಿತಡ್ಕ,191ರ ಬೂತ್ ಕಾರ್ಯದರ್ಶಿ ಗಣೇಶ್ ಭಕ್ತಕೋಡಿ, ಸರ್ವೆ ಯುವ ಮೋರ್ಚಾ ದ ಸಂಚಾಲಕರಾದ ಅಸ್ತಿಕ್ ಭಂಡಾರಿ ಮೇಗಿನಗುತ್ತು, ಸಹ ಸಂಚಾಲಕರಾದ ಶರತ್ ಭಕ್ತಕೋಡಿ,ಸಂದೀಪ್ ಪಾಲೆತ್ತಗುರಿ , ಹರ್ಷಿತ್ ಸರ್ವೆ,ಬಾಲಚಂದ್ರ ಉಪಸ್ಥಿತರಿದ್ದರು.

Leave A Reply