ಸಾಮಾನ್ಯವಾಗಿ ಎಲ್ಲಾ ಮದುವೆಗಳಲ್ಲಿ ವಧು ಅತ್ತರೆ ಇಲ್ಲಿ ವರ ಅತ್ತ !!? | ವಧುವನ್ನು ಕರೆದುಕೊಂಡು ಹೋಗುವ ವೇಳೆ ಬಿಕ್ಕಿ ಬಿಕ್ಕಿ ಅತ್ತ ವರನ ವಿಡಿಯೋ ವೈರಲ್!! ಅಳಲು ಕಾರಣ..?

ಸಾಮಾನ್ಯವಾಗಿ ಮದುವೆಯಾಗಿ ಗಂಡನ ಮನೆಗೆ ಹೋಗುವ ಹೆಣ್ಣು ಅಳುವುದು ಸಂಪ್ರದಾಯ. ಆದರೆ, ಇಲ್ಲೊಬ್ಬ ವರ ಮದುವೆಯಾಗಿ ತನ್ನ ಮನೆಗೆ ವಧುವನ್ನು ಕರೆದೊಯ್ಯುತ್ತಿದ್ದ ವೇಳೆ ಕಾರಿನಲ್ಲಿ ಅಳುತ್ತಿರುವ ದೃಶ್ಯ ಒಂದು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಲಾಗಿದೆ.

 

ಆತ ಅಳಲು ಕಾರಣ ಏನು ಎಂಬುದು ಪ್ರಶ್ನೆಯೇ?ಮದುವೆಯ ಸಂದರ್ಭದಲ್ಲಿ ವಧುವಿನ ಕಾಲೆಳೆಯಲು ವರ ಈ ತಮಾಷೆ ಮಾಡಿದ್ದು, ವಧುವರರು ಮದುವೆಯ ಬಳಿಕ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಕ್ಯಾಮರಾ ಮ್ಯಾನ್ ಅವರ ವಿಡಿಯೋ ಶೂಟ್ ಮಾಡುತ್ತಿರುತ್ತಾನೆ. ವರನ ಬಳಿಗೆ ಕ್ಯಾಮರಾ ಬರುತ್ತಿದ್ದಂತೆಯೇ ವರ ಜೋರಾಗಿ ಅಳುತ್ತಾ ಸೀನ್ ಕ್ರಿಯೇಟ್ ಮಾಡಿದ್ದಾನೆ.

ವರನ ಈ ಹೈಡ್ರಾಮಾವನ್ನು ವಧು ಆರಂಭದಲ್ಲಿ ನೋಡಿರಲಿಲ್ಲ. ಆದರೆ ಎಲ್ಲರೂ ನಗುವುದನ್ನು ಕಂಡು ವರನ ಕಡೆಗೆ ತಿರುಗಿ ನೀಡಿದಾಗ ವರ ಅಳುತ್ತಾ ಡ್ರಾಮಾ ಮಾಡುವುದು ಕಂಡು ಬಂದಿದೆ. ಈ ವೇಳೆ ವರನ ಡ್ರಾಮ ನೋಡಲಾಗದೇ, ಆತನ ಕೆನ್ನೆಗೆ ಕೈಯಿಂದ ತಟ್ಟುತ್ತಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿದೆ.

Leave A Reply

Your email address will not be published.