ಹಿಂದೂ ಧರ್ಮಕ್ಕೆ ಅಪಾಯವಿದೆ ಎಂಬುದು ಕೇವಲ ಕಾಲ್ಪನಿಕ | ಕೇಂದ್ರ ಸರ್ಕಾರ ಸ್ಪಷ್ಟನೆ
ನವದೆಹಲಿ: ಹಿಂದೂ ಧರ್ಮಕ್ಕೆ ಬೆದರಿಕೆ ಇದೆ ಎಂಬ ಮಾತು ಕೇವಲ ಕಾಲ್ಪನಿಕ ಎಂದು ಕೇಂದ್ರ ಸರ್ಕಾರ ಹೇಳಿದ್ದು, ಹಿಂದೂ ಧರ್ಮ ಅಪಾಯದಲ್ಲಿದೆ ಎಂಬ ಮಾತನ್ನು ತಳ್ಳಿಹಾಕಿದ್ದು, ಇದಕ್ಕೆ ಯಾವುದೇ ಸಾಕ್ಷಿಗಳಿಲ್ಲ ಎಂದು ಹೇಳಿದೆ. ಮಾಹಿತ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಕೇಂದ್ರ ಸರ್ಕಾರ ಈ ಉತ್ತರವನ್ನು ನೀಡಿದ್ದು, ಹಿಂದೂ ಧರ್ಮಕ್ಕೆ ಬೆದರಿಕೆಯಿದೆ ಎಂದು ಕಳವಳ ವ್ಯಕ್ತಪಡಿಸುವ ಯಾವುದೇ ದಾಖಲೆಗಳಾಗಲಿ, ಸಾಕ್ಷಿಗಳಾಗಲಿ ಸಿಕ್ಕಿಲ್ಲ. ಈ ಆಪಾದನೆಯನ್ನು ಪುಷ್ಟಿಕರಿಸುವ ಯಾವುದೇ ಸಾಕ್ಷಿಗಳಿಲ್ಲ ಎಂದು ಹೇಳಿದೆ.
ನಾಗುರದ ಕಾರ್ಯಕರ್ತ ಮೊಶ್ ಜಬಲ್ ಪುರೆ ಅವರು ಕಳೆದ ಆಗಸ್ಟ್ 31 ರಂದು ಸಲ್ಲಿಸಿದ ಆರ್ ಟಿಐ ಅರ್ಜಿಗೆ ಸಚಿವಾಲಯ ಈ ಉತ್ತರ ನೀಡಿದೆ. ಹಿಂದೂ ಧರ್ಮದ ಬೆದರಿಕೆಗಳಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆಯು ಕಾಲ್ಪನಿಕ ಎಂದು ಹೇಳಿರುವುದು ಇದೇ ಮೊದಲು. ಅಂತಹ ಯಾವುದೇ ಊಹೆಯನ್ನು ಬೆಂಬಲಿಸಲು ಯಾವುದೇ ದಾಖಲೆಗಳಿಲ್ಲ ಎಂದು ಒಪ್ಪಿಕೊಂಡಿದ್ದಾರೆ ಎಂದು ಜಬಲ್‌ಪುರ ಸರ್ಕಾರದ ಪ್ರತಿಕ್ರಿಯೆ ಪಡೆದ ಬಳಿಕ ಹೇಳಿದ್ದಾರೆ.
ಬಿಜೆಪಿ ಅಂಗವಾಗಿ ಕಾರ್ಯಾಚರಿಸುತ್ತಿರುವ ಕೆಲವು ಸಂಘಟನೆಗಳ ನಾಯಕರು, ರಾಜಕೀಯ ಸಮಾವೇಶಗಳು ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಹಿಂದೂ ಧರ್ಮಕ್ಕೆ ಅಪಾಯವಿದೆ ಎಂದು ಹೇಳಿಕೆ ನೀಡುತ್ತಿದ್ದು, ಈ ಸಂಬಂಧ ಕೇಂದ್ರ ಗೃಹ ಸಚಿವಾಲಯಕ್ಕೆ ಕೇಳಿರುವ ಪ್ರಶ್ನೆಗೆ ಸಚಿವಾಲಯವು ಇದು ಕಾಲ್ಪನಿಕ, ಇದಕ್ಕೆ ಯಾವುದೇ ಸಾಕ್ಷಿಗಳಿಲ್ಲ ಎಂದು ಹೇಳಿದೆ.