ಫುಡ್ ಸಪ್ಲೈ ಮಾಡುತ್ತಿದ್ದ ಡ್ರೋನ್ ಮತ್ತು ಕಾಗೆ ನಡುವೆ ಬಿಗ್ ಫೈಟ್ | ಅತ್ತ ಕಾಗೆಗೆ ಆಹಾರವನ್ನೂ ನೀಡದೆ, ಇತ್ತ ನೆಲಕ್ಕೂ ಬೀಳದೆ ರೋಚಕವಾಗಿ ಹೋರಾಡಿದ ಡ್ರೋನ್ !!
ಈಗಿನ ಕಾಲದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವವರ ಸಂಖ್ಯೆ ಹೆಚ್ಚಾಗಿಯೇ ಇದೆ. ಅದರಲ್ಲಿ ಬರುವ ಫನ್ನಿ ವೀಡಿಯೊಗಳು, ಮೇಮ್ಸ್ ಗಳನ್ನು ನೋಡುತ್ತಾ ಮನೋರಂಜನೆ ಪಡೆಯುವರು ಅದೆಷ್ಟೋ ಮಂದಿ. ಸಾಮಾಜಿಕ ಜಾಲತಾಣದಲ್ಲಿ ದಿನನಿತ್ಯ ಹತ್ತಾರು ಫನ್ನಿ ವಿಡಿಯೋಗಳು ಹರಿದಾಡುತ್ತಲೆ ಇರುತ್ತವೆ. ಅಂತಹ ವಿಡಿಯೋಗಳು ಅಚ್ಚರಿಯನ್ನೂ ಮೂಡಿಸುತ್ತವೆ.
ಬೇಕೆನಿಸುವ ಫುಡ್ಗಳನ್ನು ಮನೆಯಲ್ಲಿ ತಯಾರಿಸಿ ತಿನ್ನುವುದು ತಡವಾಗಬಹುದು. ಕೆಲಸ ಮುಗಿಸಿ ಮನೆಗೆ ಬಂದ ಕೂಡಲೇ ಸ್ವಲ್ಪ ರೆಸ್ಟ್ ಬೇಕು ಅಂತ ಅನಿಸುವುದು ಸಹಜ. ಆಗ ತಲೆಗೆ ತಕ್ಷಣ ಬರುವುದೇ ಫುಡ್ ಆರ್ಡರ್ ಮಾಡೋಣ ಅಂತ. ಹೀಗೆ ಆರ್ಡರ್ ಮಾಡಿದ್ದ ಫುಡ್ನ ಆಸ್ಟ್ರೇಲಿಯಾದ ರಾಜಧಾನಿ ಕ್ಯಾನ್ಬೆರಾದಲ್ಲಿ ಡ್ರೋನ್ ಗ್ರಾಹಕನಿಗೆ ನೀಡಲು ಹೋಗುತ್ತಿತ್ತು. ಆಗ ಕಾಗೆಯೊಂದು ಬಂದು ಡ್ರೋನ್ ಜೊತೆ ಫೈಟ್ ಮಾಡಿದೆ. ಸದ್ಯ ಡ್ರೋನ್ ಮತ್ತು ಕಾಗೆ ನಡುವಿನ ಜಗಳ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿರುವ ಫನ್ನಿ ವಿಡಿಯೋ ಅಂದರೆ ಆಸ್ಟ್ರೇಲಿಯಾದ ರಾಜಧಾನಿ ಕ್ಯಾನ್ಬೆರಾದಲ್ಲಿ ನಡೆದ ಘಟನೆ. ಆರ್ಡರ್ ಫುಡ್ನ ಹೊತ್ತು ತರುತ್ತಿದ್ದ ಡ್ರೋನ್ ಮತ್ತು ಕಾಗೆ ನಡುವೆ ಜಗಳವಾಗಿದೆ. ಇದು ಹೇಗೆ ಸಾಧ್ಯ ಎಂದೊಮ್ಮೆ ಅನಿಸಬಹುದು. ಆದರೆ ಇದು ನಿಜ. ಡ್ರೋನೊಂದು ಆಹಾರವನ್ನು ಆರ್ಡರ್ ಮಾಡಿದ್ದ ಗ್ರಾಹಕನಿಗೆ ತಲುಪಿಸಲು ಹೋಗುತ್ತಿತ್ತು. ಆಗ ಹಾರಿಬಂದ ಕಾಗೆಯೊಂದು ಡ್ರೋನ್ ಕಂಡು ತನ್ನ ಮೂತಿಯಿಂದ ಕುಕ್ಕಿ, ಎಳೆದಾಡಿದೆ.
ಗಾಳಿಯಲ್ಲಿ ಹಾರುವಾಗ ಡ್ರೋನ್ಗೆ ಏನಾದರೂ ಅಡಚಣೆಯಾದರೆ ತಕ್ಷಣ ನೆಲಕ್ಕೆ ಬೀಳುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಕಾಗೆಯೊಂದಿಗೆ ಫೈಟ್ ಮಾಡಿದ ಡ್ರೋನ್ ಕೆಳಗೆ ಬೀಳುವುದಿಲ್ಲ. ತಾನು ಹೊತ್ತೊಯ್ಯುತ್ತಿದ್ದ ಆಹಾರ ಮಾತ್ರ ನೆಲಕ್ಕೆ ಬಿದ್ದಿದೆ. ಕಾಗೆ ಸ್ವಲ್ಪ ಹೊತ್ತು ಡ್ರೋನ್ ಜೊತೆ ಜಗಳವಾಡಿ ಮತ್ತೆ ಹಾರಿ ಹೋಗುತ್ತದೆ. ಕಾಗೆ ಹಾರಿ ಹೋದ ಕೆಲವೇ ಸೆಕೆಂಡುಗಳಲ್ಲಿ ಡ್ರೋನ್ ಬಳಿಯಿದ್ದ ಆಹಾರ ನೆಲಕ್ಕೆ ಬೀಳುತ್ತದೆ. ಈ ಎಲ್ಲ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಫುಡ್ ಆರ್ಡರ್ ಮಾಡಿದ್ದ ಬೆನ್ ರಾಬರ್ಟ್ಸ್ ಎಂಬುವವರು ಕಾಗೆ ಮತ್ತು ಡ್ರೋನ್ ನಡುವಿನ ಜಗಳವನ್ನು ನೋಡಿ, ಈ ಅಪರೂಪದ ದೃಶ್ಯವನ್ನು ಸೆರೆಹಿಡಿದಿದ್ದಾರೆ. ಜೊತೆಗೆ ಈ ದೃಶ್ಯವನ್ನು ಯೂಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಇನ್ನು ಈ ವಿಡಿಯೋವನ್ನು ವೀಕ್ಷಿಸಿದ ಹಲವರು ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಇದು ಕೆಲವರಿಗೆ ಅಚ್ಚರಿ ಅನಿಸಿದರೆ, ಇನ್ನು ಕೆಲವರಿಗೆ ಫನ್ನಿ ಅಂತ ಅನಿಸಿದೆ. ಮನುಷ್ಯರು ಡ್ರೋನ್ಗಳ ಮೂಲಕ ಪಕ್ಷಿಗಳಿಗೆ ತೊಂದರೆ ನೀಡುತ್ತಿದ್ದಾರೆ. ಪಕ್ಷಿಗಳಿಗೆ ಹಾರಲು ಜಾಗವನ್ನು ನೀಡುತ್ತಿಲ್ಲ ಅಂತ ಕಾಮೆಂಟ್ ಕೂಡಾ ಮಾಡಿದ್ದಾರೆ.