ಬರ್ತಡೇ ಪಾರ್ಟಿಯ ಸಂದರ್ಭ ಕುಡಿದ ಅಮಲಿನಲ್ಲಿ ಮರದ ಮೇಲೆ ಹತ್ತಿ ಸೆಲ್ಫಿ ವಿಡಿಯೋ ಹುಚ್ಚಾಟ | ಜಕ್ಕಲಮಡಗು ಜಲಾಶಯದ ಹಿನ್ನೀರಿನಲ್ಲಿ ಬೆಂಗಳೂರಿನ ಟೆಕ್ಕಿ ಮಾಯ

Share the Article

ಚಿಕ್ಕಬಳ್ಳಾಪುರ: ಬರ್ತ್​​ ಡೇ ಪಾರ್ಟಿ ಮಾಡಿ ಸಂಭ್ರಮಿಸಿದ ಬೆಂಗಳೂರು ಮೂಲದ ಟೆಕ್ಕಿ ಓರ್ವ ಚಿಕ್ಕಬಳ್ಳಾಪುರ ತಾಲೂಕಿನ ಜಕ್ಕಲಮಡಗು ಜಲಾಶಯದ ಹಿನ್ನೀರಿನಲ್ಲಿ ಜಲಸಮಾಧಿಯಾಗಿದ್ದಾರೆ. ಕಾರಣ ಹುಡುಕಿದರೆ ಸೆಲ್ಫಿ ಹುಚ್ಚು ಹೊರಬಂದಿದೆ.

ಮೃತಪಟ್ಟ ಯುವಕನನ್ನು ಬೆಂಗಳೂರಿನ ಸುಂಕದಕಟ್ಟೆಯ ನಿವಾಸಿ ರೋಹಿತ್(24) ಎಂದು ಗುರುತಿಸಲಾಗಿದೆ.

ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದ ರೋಹಿತ್ ಮತ್ತು ಅವನ ಇತರ ಗೆಳೆಯರು ಚಿಕ್ಕಬಳ್ಳಾಪುರದಲ್ಲಿರುವ ಸ್ನೇಹಿತ ಸಂತೋಷನ ಬರ್ತ್​​ ಡೇ ಪಾರ್ಟಿ ಆಚರಣೆಗೆ ಐವರು ಸ್ನೇಹಿತರೊಂದಿಗೆ ಜಕ್ಕಲಮಡಗು ಜಲಾಶಯಕ್ಕೆ ಬಂದಿದ್ದರು. ಈಜು ಬಾರದಿದ್ದರೂ ನೀರಿಗೆ ಇಳಿದಿದ್ದ ಸ್ನೇಹಿತರು ನೀರಿನಲ್ಲಿ ಮಂಗನಾಆಟ ಆಡುತ್ತಿದ್ದರು. ಆಗ ಜಲಾಶಯದ ಹಿನ್ನೀರಿನಲ್ಲಿರುವ ಒಂದು ಮರದ ಮೇಲೆ ಹತ್ತಿ ಸೆಲ್ಫಿ ವಿಡಿಯೋ ಮಾಡಿಕೊಳ್ಳಲು ಮರ ಹತ್ತಿದ್ದಾನೆ ರೋಹಿತ್. ಈ ವೇಳೆ ಕೆಳಗೆಬಿದ್ದ ರೋಹಿತ್ ನೀರಿನಲ್ಲಿ ಮುುಳುಗಿ ಸಾವನ್ನಪ್ಪಿದ್ದಾನೆ.

ಕುಡಿದ ಅಮಲಿನಲ್ಲಿ ಮರದ ಮೇಲೆ ಹತ್ತಿದ ರೋಹಿತ್ ಆಯತಪ್ಪಿ ನೀರಿಗೆ ಬಿದ್ದಿದ್ದಾರೆ ಎಂದು ನಂದಿಗಿರಿಧಾಮ ಠಾಣೆ ಪೊಲೀಸರು ತಿಳಿಸಿದ್ದಾರೆ.

Leave A Reply