ಬೆಂಗಳೂರು – ಲೇಕ್ ಕೆಮಿಕಲ್ ಪ್ರೈವೇಟ್ ಕಂಪೆನಿಯಲ್ಲಿ ಅಗ್ನಿದುರಂತ
ಬೆಂಗಳೂರಿನ ಅತ್ತಿಬೆಲೆಯ ಸಮೀಪದಲ್ಲಿರುವ ಲೇಕ್ ಕೆಮಿಕಲ್ ಪ್ರೈವೇಟ್ ಕಾರ್ಖಾನೆಯಲ್ಲಿ ನಿನ್ನೆ ಮಧ್ಯಾಹ್ನ(24 ಸೆಪ್ಟೆಂಬರ್) ಸುಮಾರು ಒಂದು ಗಂಟೆಯ ಹೊತ್ತಿಗೆ ಬಾಯ್ಲರ್ ಸ್ಫೋಟ ಸಂಭವಿಸಿದೆ.
ಕೆಮಿಕಲ್ ಸ್ಪೋಟದಿಂದ ಕಂಪೆನಿಯ ಮೇಲ್ಛಾವಣಿ ಬಿರುಕು ಬಿಟ್ಟಿದೆ. ಭೀಕರವಾದ ಸ್ಫೋಟದಲ್ಲಿ ಏಳು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಕತ್ತು ಹಾಗೂ ಕೈಗಳಿಗೆ ವಿಪರೀತವಾದ ಗಾಯಗಳಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಲಾಗಿದೆ. ಸ್ಪೋಟದಿಂದ ಊರಿನ ಸುತ್ತಮುತ್ತ ಕೆಟ್ಟ ವಾಸನೆ ಹರಡಿದ್ದು, ಸ್ಥಳೀಯರಿಗೆ ತಮಗೇನಾದರೂ ಆರೋಗ್ಯ ಸಮಸ್ಯೆ ಬರಬಹುದು ಎಂದು ಆತಂಕವಾಗಿದೆ.
ಲೇಕ್ ಕೆಮಿಕಲ್ ಪ್ರೈವೇಟ್ ಕಾರ್ಖಾನೆಯು ಒಂದು ಫಾರ್ಮಸಿಟಿಕಲ್ ಕಂಪನಿಯಾಗಿದೆ. ಅಂದರೆ ಇದು ಔಷಧಿ ತಯಾರಿಸುವ ಕಾರ್ಖಾನೆ ಯಾಗಿದೆ. ಇದು 25 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಸ್ಥಳೀಯರು ಹೇಳುವ ಪ್ರಕಾರ ಹತ್ತು ವರ್ಷಗಳ ಹಿಂದೆ ಇದೇ ರೀತಿಯ ಅವಘಡ ಈ ಕಂಪನಿಯಲ್ಲಿ ಸಂಭವಿಸಿದ್ದು 15 ಜನರು ಸಾವನ್ನಪ್ಪಿದ್ದಾರೆ. ಹಾಗಾದರೆ ಈ ಕಂಪನಿಯಲ್ಲಿ ಯಾವ ರೀತಿಯ ಸೇಫ್ಟಿ ಮೇಜರ್ ತೆಗೆದುಕೊಳ್ಳುತ್ತಿಲ್ಲ ವೇ?
ಊರಿನ ಪಂಚಾಯಿತಿ ಉಪಾಧ್ಯಕ್ಷರ ಹೇಳುವ ಪ್ರಕಾರ ಊರಿನ ಬೋರ್ವೆಲ್ ಗಳಲ್ಲಿ ಟಿಡಿಎಸ್ 24000 ಆಗಿತ್ತು ಎಂದು ಊರಿನ ಜನರು ಪಂಚಾಯಿತಿಯಲ್ಲಿ ದೂರು ಸಲ್ಲಿಸಿದ್ದರು. ಆದ್ದರಿಂದ ಊರು ಪಕ್ಕದಲ್ಲಿರುವುದರಿಂದ ಈ ಕಂಪನಿಯನ್ನು ಸ್ಥಳಾಂತರಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಊರಿನ ಪಂಚಾಯಿತಿ ಉಪಾಧ್ಯಕ್ಷರು ದೂರು ಸಲ್ಲಿಸಿದ್ದಾರೆ.
ಈ ಕಂಪೆನಿಯಲ್ಲಿ ಈ ರೀತಿಯ ಸ್ಫೋಟವು ಎರಡು ಬಾರಿ ನಡೆದಿದೆ. ಆದ್ದರಿಂದ ಇಂತಹ ಅವಘಡಗಳು ನಡೆಯದಂತೆ ಕಂಪೆನಿಯು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಲ್ಲವಾದರೆ ಹಲವಾರು ಕಾರ್ಮಿಕರು ತಮ್ಮ ಜೀವವನ್ನು ಕಳೆದುಕೊಳ್ಳಬೇಕಾಗುತ್ತದೆ.