ಕಡಬ : ಕೊಯಿಲದಲ್ಲಿ ನದಿಗೆ ಸ್ನಾನಕ್ಕಿಳಿದು ಕಣ್ಮರೆಯಾದ ವ್ಯಕ್ತಿಯ ಮೃತದೇಹ ಪತ್ತೆ

Share the Article

ಕಡಬ : ಮಂಗಳವಾರ ಕುಮಾರಧಾರ ನದಿಯಲ್ಲಿ ಸ್ನಾನಕ್ಕೆ ತೆರಳಿ ನಾಪತ್ತೆಯಾದ ವ್ಯಕ್ತಿಯ ಮೃತದೇಹ ಗುರುವಾರ ಪತ್ತೆಯಾಗಿದೆ.ಈ ಘಟನೆ ಕಡಬ ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮದಲ್ಲಿ ನಡೆದಿದೆ.

ಕೊಯಿಲ ಗ್ರಾಮದ ಪರಂಗಾಜೆ ನಿವಾಸಿ ಚಂದಪ್ಪ ಗೌಡ(67ವ.) ನಾಪತ್ತೆಯಾದವರು. ಇವರು ಸೆ. 21ರಂದು ಮಧ್ಯಾಹ್ನ 12.30ಕ್ಕೆ ಕುಮಾರಧಾರ ನದಿಯಲ್ಲಿ ಸ್ನಾನಕ್ಕೆಂದು ಹೇಳಿ ಹೋದವರು ಹಿಂತಿರುಗಿ ಬಾರದ ಹಿನ್ನೆಲೆಯಲ್ಲಿ ನದಿಯಲ್ಲಿ ಹುಡುಕಾಟ ನಡೆಸಲಾಗಿತ್ತು.

ಜತೆಗಿದ್ದ ವ್ಯಕ್ತಿ ನೀಡಿದ ಮಾಹಿತಿಯಂತೆ ಚಂದಪ್ಪ ಗೌಡರ ಪತ್ತೆಗಾಗಿ ಅಗ್ನಿಶಾಮಕ ದಳ ಹಾಗೂ ಮುಳುಗುತಜ್ಞರು ನೀರಿನಲ್ಲಿ ಬುಧವಾರ ಸಂಜೆಯವರೆಗೂ ಹುಡುಕಾಡಿದರೂ ಯಾವುದೇ ಸುಳಿವು ಪತ್ತೆಯಾಗಲಿಲ್ಲ.ಕತ್ತಲಾದ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.

ಗುರುವಾರ ಇವರ ಮೃತದೇಹ ಪತ್ತೆಯಾಗಿದೆ.

Leave A Reply