ಸೆ.25 :ದ.ಕ. ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಟದ ವತಿಯಿಂದ ಅಂತ್ಯೋದಯ ಕಾರ್ಯಕ್ರಮ, ಬಡ ಕುಟುಂಬಗಳಿಗೆ ಎಲ್‌ಇಡಿ ಬಲ್ಬ್ ವಿತರಣೆ

Share the Article

ಮಂಗಳೂರು : ಭಾರತೀಯ ಜನತಾ ಸಾಮಾಜಿಕ ಜಾಲತಾಣ ಪ್ರಕೋಷ್ಠ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಂಗಳೂರು ನಗರ ಉತ್ತರ ಮಂಡಲ ಇದರ ಆಶ್ರಯದಲ್ಲಿ ಸೇವೆ ಮತ್ತು ಸಮರ್ಪಣಾ ಅಭಿಯಾನದ ಅಂಗವಾಗಿ ಅಂತ್ಯೋದಯ ಕಾರ್ಯಕ್ರಮ ಸೆ.25ರಂದು ಕೋಡಿಕಲ್‌ನ ಕುದ್ಮಲ್ ರಂಗರಾವ್ ಸಮುದಾಯ ಭವನದಲ್ಲಿ ನಡೆಯಲಿದೆ.

ಅಂತ್ಯೋದಯದ ಪ್ರತಿಪಾದಕ “ಪಂಡಿತ್ ದೀನದಯಾಳ್ ಉಪಾಧ್ಯಾಯರ” ಜನ್ಮ ಜಯಂತಿಯ ಪ್ರಯುಕ್ತ ಬಡ ಕುಟುಂಬಗಳಿಗೆ LED ಬಲ್‌ಗಳ ವಿತರಣಾ ಕಾರ್ಯಕ್ರಮ ನಡೆಯಲಿದೆ.

Leave A Reply