ಸೇನೆ ಸೇರಬಯಸುವವರಿಗೆ ಸಿಹಿಸುದ್ದಿ!!ಎನ್ ಡಿ ಎ ಪರೀಕ್ಷೆ ಬರೆಯಲು ಮಹಿಳೆಯರಿಗೂ ಅವಕಾಶ ಕಲ್ಪಿಸಿದ ಸುಪ್ರೀಂ ಕೋರ್ಟ್
ರಾಷ್ಟ್ರೀಯ ಭಧ್ರತಾ ಅಕಾಡೆಮಿ NDA ಪರೀಕ್ಷೆ ಬರೆಯಲು ನಾರಿಯರು ಕೂಡಾ ಅರ್ಹರು ಎಂದು ಅವಕಾಶ ನೀಡಿದ ಬೆನ್ನಲ್ಲೇ, ಭಾರತದ ಮಡಿಲ ಧೀರೆಯರು ಇದೇ ಮೊದಲ ಪರೀಕ್ಷೆ ಬರೆಯಲು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಪರೀಕ್ಷೆಗೆ ಎಲ್ಲಾ ಸಿದ್ಧತೆಗಳು ನಡೆದಿದ್ದು,ಮುಂದಿನ ವರ್ಷ ಪರೀಕ್ಷೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸುಪ್ರೀಂ ಕೋರ್ಟ್ ಗೆ ಅಫಿಡವಿತ್ ಸಲ್ಲಿಸಿರುವ ಕೇಂದ್ರವು, ಪುರುಷರಿಗಿಂತ ಮಹಿಳೆಯರ ನೇಮಕಾತಿ ಪ್ರಕ್ರಿಯೆಯಲ್ಲಿ ಕೊಂಚ ಸಡಿಲಿಕೆಯಿರಲಿದ್ದು ಫೈರಿಂಗ್, ಸಹಿಷ್ಣುತೆ ತರಬೇತಿ, ಮೈದಾನದ ತರಬೇತಿ ಸೇರಿದಂತೆ ಯುದ್ಧಭೂಮಿಯಲ್ಲಿ ನಿರಂತರ ಪರಿಣಾಮ ಬೀರುವಂತಹ ಹಲವು ವಿಚಾರಗಳು ಸೇರಿಕೊಂಡಿವೆ.
ಅದಲ್ಲದೇ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ವೈದ್ಯಕೀಯ ಜೊತೆಗೆ ಹಲವಾರು ಸೌಲಭ್ಯಗಳನ್ನು ಹೆಚ್ಚಿಸುವುದಲ್ಲದೇ, ಸ್ತ್ರೀ ರೋಗ ತಜ್ಞರು, ಶುಶ್ರುಷಕ ಸಿಬ್ಬಂದಿಗಳ ಸಹಿತ ಮಹಿಳಾ ಸೇವಕರನ್ನು ಮೊದಲು ಸೇರಿಸಿಕೊಳ್ಳುವ ಅಗತ್ಯವಿದೆ.