ರಾತ್ರೋರಾತ್ರಿ ಕೋಟ್ಯಾಧಿಪತಿಯಾದ ಆಟೋ ಚಾಲಕ!!!|ಓಣಂ ಬಂಪರ್ ಲಾಟರಿಯಲ್ಲಿ ಆತನಿಗೆ ಸಿಕ್ಕಿದ್ದು ಬರೋಬ್ಬರಿ 12 ಕೋಟಿ ಬಹುಮಾನ

ಕೊಚ್ಚಿ(ಕೇರಳ): ಆಟೋಚಾಲಕ ರೋರ್ವರು ಕೇರಳದ ಓಣಂ ಬಂಪರ್ ಲಾಟರಿಯಲ್ಲಿ 12 ಕೋಟಿ ರೂ. ಜಾಕ್‌ಪಾಟ್ ಹೊಡೆದಿದ್ದು,ಇದೀಗ ಒಂದೇ ದಿನದಲ್ಲಿ ಕೋಟ್ಯಾಧಿಪತಿ ಆಗಿದ್ದಾರೆ.

ಕೇರಳದ ಮರಡು ಮೂಲದ ಆಟೋ ಚಾಲಕ ಜಯಪಾಲನ್ 12 ಕೋಟಿ ರೂ. ಜಾಕ್ ಪಾಟ್ ಹೊಡೆದವರು ಆಗಿದ್ದಾರೆ.

ಜಯಪಾಲನ್ TE 645465 ಸಂಖ್ಯೆಯ ಓಣಂ ಬಂಪರ್ ಲಾಟರಿ ಟಿಕೆಟ್ ಖರೀದಿ ಮಾಡಿದ್ದರು. ಇದೀಗ ಅದರ ಫಲಿತಾಂಶ ಪ್ರಕಟಗೊಂಡಿದ್ದು, ಇವರು ಖರೀದಿಸಿರುವ ಟಿಕೆಟ್‌ಗೆ 12 ಕೋಟಿ ರೂ. ಬಂಪರ್ ಬಹುಮಾನ ಲಭಿಸಿದೆ.

Ad Widget / / Ad Widget

ಬಂಪರ್ ಬಹುಮಾನ ಬಂದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿರುವ ಜಯಪಾಲನ್, ಸೆ.10ರಂದು ತಾನು ಫ್ಯಾನ್ಸಿ ನಂಬರ್ ಎಂದು ಈ ಟಿಕೆಟ್ ಖರೀದಿಸಿದ್ದೆ. ನಾನು ಖರೀದಿಸಿರುವ ನಂಬರ್ ಗೆ ಬಂಪರ್ ಬಹುಮಾನ ಲಭಿಸಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ಇದೀಗ ಕೆನರಾ ಬ್ಯಾಂಕಿನ ಕೊಚ್ಚಿ ಶಾಖೆಗೆ ಟಿಕೆಟ್
ಸಲ್ಲಿಕೆ ಮಾಡಲಾಗಿದೆ ಎಂದಿದ್ದಾರೆ.ಜಯಪಾಲನ್ ಅವರಿಗೆ ತೆರಿಗೆ ಕಡಿತಗೊಂಡು 7.56 ಕೋಟಿ ರೂ. ಹಣ ದೊರೆಯಲಿದೆ. ಓಣಂ ಹಬ್ಬದ ಈ ಬಂಪರ್ ಲಾಟರಿಯ 54 ಲಕ್ಷ ಟಿಕೆಟ್ ಮಾರಾಟವಾಗಿದ್ದು, ಅದರಲ್ಲಿ ಇವರ ಟಿಕೆಟ್ ಗೆ ಬಂಪರ್ ಬಹುಮಾನ ಲಭಿಸಿದೆ ಎಂದು ತಿಳಿದು ಬಂದಿದೆ.

Leave a Reply

error: Content is protected !!
Scroll to Top
%d bloggers like this: