ಗೂಗಲ್ ಎಡವಟ್ಟು,ಮುಚ್ಚಿದ ರಸ್ತೆಯಲ್ಲಿ ಸಾಗಿದ ಲಾರಿ | ಲಾರಿಗೆ ಡಿಕ್ಕಿಯಾದ ಎಕ್ಸ್‌ಪ್ರೆಸ್ ರೈಲು, ಲಾರಿ ಪೀಸ್ ಪೀಸ್

ಮೈಸೂರು – ಪುದುಕೋಟೈ ಪ್ಯಾಸೆಂಜರ್ ಎಕ್ಸ್ ಪ್ರೆಸ್ ರೈಲು ಆನೇಕಲ್ ತಾಲೂಕಿನ ಆವಲಹಳ್ಳಿ ಬಳಿ ಲಾರಿಯೊಂದಕ್ಕೆ ಡಿಕ್ಕಿ ಹೊಡೆದಿದೆ.

ಸಾವಿರಾರು ಪ್ರಯಾಣಿಕರಿದ್ದ ರೈಲು ಹಾಗೂ ಟಿಪ್ಪರ್ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಲಾರಿ ಛಿದ್ರಛಿದ್ರಗೊಂಡಿದ್ದರೂ ಅದೃಷ್ಟವಶಾತ್ ಪ್ರಾಣಹಾನಿ ಸಂಭವಿಸಿಲ್ಲ.

ಅಪಘಾತಕ್ಕೆ ಕಾರಣ ಏನೆಂದು ಪರಿಶೀಲನೆ ನಡೆಸಿದಾಗ ಉತ್ತರವಾಗಿ ‘ಗೂಗಲ್’ ಕೂಡ ಗೋಚರಿಸಿದೆ. ಅರ್ಥಾತ್, ಚಾಲಕ ಗೂಗಲ್ ಮ್ಯಾಪನ್ನೇ ನಂಬಿಕೊಂಡು ಚಾಲನೆ ಮಾಡಿ ಅಪಘಾತಕ್ಕೆ ಕಾರಣವಾಗಿದ್ದಾನೆ.

ಗೂಗಲ್ ಮ್ಯಾಪ್ ತೋರಿಸಿದ್ದ ರಸ್ತೆಯಲ್ಲೇ ಚಾಲಕ ಟಿಪ್ಪರ್ ಚಲಾಯಿಸಿಕೊಂಡು ಹೋಗಿದ್ದರೂ ಎರಡು ವರ್ಷಗಳ ಹಿಂದೆಯೇ ಆ ರಸ್ತೆಯನ್ನು ರೈಲ್ವೇ ಇಲಾಖೆ ಮುಚ್ಚಿಸಿತ್ತು. ಅದು ಗೂಗಲ್ ಗಮನಕ್ಕೆ ಬಂದಿತ್ತೋ ಇಲ್ಲವೋ ಅಥವಾ ಬಂದಿದ್ದೂ ಅಪ್‌ಡೇಟ್ ಮಾಡಿಲ್ಲವೋ ಎಂಬ ಬಗ್ಗೆ ಇದೀಗ ಚರ್ಚೆ ಹುಟ್ಟಿಕೊಂಡಿದೆ. ಮತ್ತೊಂದೆಡೆ ರಸ್ತೆ ಮುಚ್ಚಿರುವ ಬಗ್ಗೆ ಸೂಚನೆಗಳನ್ನು ರೈಲ್ವೇ ಇಲಾಖೆ ಹಾಕಿತ್ತೇ ಇಲ್ಲವೇ ಎಂಬ ನಿಟ್ಟಿನಲ್ಲೂ ಪ್ರಶ್ನೆಗಳೂ ಮೂಡಿವೆ.

Leave A Reply

Your email address will not be published.