ತನ್ನ ಅಕೌಂಟ್ ಗೆ ತಪ್ಪಾಗಿ ಜಮೆ ಆದ ಹಣವನ್ನು ಮೋದಿ ಹಾಕಿದ್ದು ಎಂದು ತಿಳಿದು ಎಂಜಾಯ್ ಮಾಡಿದ ವ್ಯಕ್ತಿ!!|ಕೊನೆಗೆ ಈತನಿಂದ 5.5 ಲಕ್ಷ ರೂ. ಪಂಗ ನಾಮ ಹಾಕಿಸಿಕೊಂಡು ತಲೆ ಮೇಲೆ ಕೈಯಿಟ್ಟು ಕುಳಿತ ಬ್ಯಾಂಕ್!!
ಯಾರದ್ದೋ ಹಣ ನಮ್ಮ ಬ್ಯಾಂಕ್ ಖಾತೆ ಸೇರಿದೆ ಎಂದರೆ ಯಾರು ತಾನೇ ಅದನ್ನು ಹಿಂದಿರಿಗಿಸುವನು. ಅಂತಹ ಒಳ್ಳೆಯ ಪ್ರಾಮಾಣಿಕ ಮಾತ್ರ ಹಿಂದಿರುಗಿಸಬಲ್ಲ. ಹೀಗೆಯೇ ವ್ಯಕ್ತಿಯೊಬ್ಬ ತಪ್ಪಾಗಿ ಜಮೆ ಮಾಡಿದ ಹಣವನ್ನು ಮೋದಿ ನೀಡಿದ ಹಣವೆಂದು ಖರ್ಚು ಮಾಡಿರುವ ಘಟನೆ ಪಾಟ್ನಾದಲ್ಲಿ ನಡೆದಿದೆ.
ಬಿಹಾರದ ಖಗರಿಯಾ ಜಿಲ್ಲೆಯ ವ್ಯಕ್ತಿಯೊಬ್ಬನ ಖಾತೆಗೆ ಬ್ಯಾಂಕ್ ದೋಷದಿಂದಾಗಿ 5.5 ಲಕ್ಷ ರೂಪಾಯಿಗಳು ಜಮಾ ಆಗಿದ್ದು,ಆದರೆ ಆತ ಮಾತ್ರ ಹಣವನ್ನು ಹಿಂದಿರುಗಿಸಲು ನಿರಾಕರಿಸಿ ಹಣವನ್ನು ‘ಪ್ರಧಾನಿ ನರೇಂದ್ರ ಮೋದಿ ಕಳುಹಿಸಿದ್ದಾರೆ’ ಎಂದು ನಂಬಿ ಅದನ್ನು ಪೂರ್ತಿ ಖರ್ಚು ಮಾಡಿದ್ದಾನೆ.
ಖಗರಿಯ ಗ್ರಾಮೀಣ ಬ್ಯಾಂಕ್ ತಪ್ಪಾಗಿ ಹಣವನ್ನು ಮಾಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಬಕ್ತಿಯಾರ್‌ಪುರ್ ಗ್ರಾಮದ ರಂಜಿತ್ ದಾಸ್‌ಗೆ ಕಳುಹಿಸಿದೆ, ಮತ್ತು ಹಲವು ಸೂಚನೆಗಳ ಹೊರತಾಗಿಯೂ, ದಾಸ್ ತಾನು ಅದನ್ನು ಖರ್ಚು ಮಾಡಿದ್ದೇನೆ ಎಂದು ಹೇಳಿ ವಾಪಾಸ್ ಮಾಡಲಿಲ್ಲ
ಈ ವರ್ಷದ ಮಾರ್ಚ್‌ನಲ್ಲಿ ನಾನು ಹಣವನ್ನು ಸ್ವೀಕರಿಸಿದಾಗ ನನಗೆ ತುಂಬಾ ಸಂತೋಷವಾಯಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ಠೇವಣಿ ಇಡುವ ಭರವಸೆ ನೀಡಿದ್ದರು, ಇದು ಅದರ ಮೊದಲ ಕಂತಾಗಿರಬಹುದು ಎಂದು ನಾನು ಭಾವಿಸಿದೆ. ನಾನು ಎಲ್ಲಾ ಹಣವನ್ನು ಖರ್ಚು ಮಾಡಿದ್ದೇನೆ. ಈಗ, ನನ್ನ ಬ್ಯಾಂಕ್ ಖಾತೆಯಲ್ಲಿ ಹಾಗೂ ನನ್ನ ಬಳಿ ಹಣವಿಲ್ಲ ಎಂದು ಬಂಧಿತನಾಗಿರುವ ದಾಸ್ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮಾನ್ಸಿ ಸ್ಟೇಷನ್ ಹೌಸ್ ಆಫೀಸರ್ ದೀಪಕ್ ಕುಮಾರ್,’ಬ್ಯಾಂಕಿನ ಮ್ಯಾನೇಜರ್ ನೀಡಿದ ದೂರಿನ ಮೇರೆಗೆ ನಾವು ರಂಜಿತ್ ದಾಸ್ ಅವರನ್ನು ಬಂಧಿಸಿದ್ದೇವೆ. ಮುಂದಿನ ತನಿಖೆ ನಡೆಯುತ್ತಿದೆ.’ ಎಂದು ಹೇಳಿದರು.
ಅಷ್ಟಕ್ಕೂ ಹಣ ಖರ್ಚು ಮಾಡಿದ್ದಾನೋ ಅಥವಾ ಸುಳ್ಳು ಹೇಳುತ್ತಿದ್ದಾನೋ ಎಂಬುದು ತಿಳಿಯಬೇಕಿದೆ. ನಂಬಿಸುವುದಕ್ಕಾಗಿ ಮೋದಿಯ ಹೆಸರು ಹೇಳಿಯೂ ಕೂಡ ಇರಬಹುದು. ಎಲ್ಲಾ ವಿವರಗಳು ತನಿಖೆಯ ಮೇಲಷ್ಟೇ ತಿಳಿದು ಬರಬೇಕಿದೆ.