ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ | ಫ್ಲೈ ಓವರ್‌ನಿಂದ ಬಿದ್ದು ಇಬ್ಬರು ಯುವತಿಯರು ಮೃತ್ಯು

ಬೆಂಗಳೂರಿನಲ್ಲಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಫ್ಲೈಓವರ್ ನಿಂದ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ.

 

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ನಲ್ಲಿ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಕೆಳಗೆ ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಅಪಘಾತದ ರಭಸಕ್ಕೆ ಫ್ಲೈಓವರ್ ಮೇಲಿಂದ ಬಿದ್ದು ಯುವಕ-ಯುವತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಓವರ್ ಟೇಕ್ ಮಾಡುವ ರಭಸದಲ್ಲಿ ಕಾರು ಬೈಕ್ ಗೆ ಡಿಕ್ಕಿ ಹೊಡೆದಿದ್ದರಿಂದ ಯುವತಿಯರು ಫ್ಲೈಓವರ್ ನಿಂದ ಕೆಳಗೆ ಬಿದ್ದಿದ್ದಾರೆ.

ಇನ್ನು ಅಪಘಾತದಲ್ಲಿ ಕಾರು ಸಹ ಜಖಂಗೊಂಡಿದ್ದು ಫೈಓವರ್ ನ ತುದಿಗೆ ಬಂದು ನಿಂತಿದೆ. ಇನ್ನು ಸ್ವಲ್ಪ ವಾಲಿದ್ದರೂ ಕಾರು ಸಹ ಫ್ಲೈಓವರ್ ಮೇಲಿನಿಂದ ಕೆಳಗೆ ಬೀಳುವ ಸಂಭವವಿತ್ತು.

ಸ್ಥಳಕ್ಕೆ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿದ್ದಾರೆ.

Leave A Reply

Your email address will not be published.