ತಾಯಿಯೇ ಮೊದಲ ಗುರು ಎಂಬ ಮಾತನ್ನು ಸಾರಿ ಹೇಳುತಿದೆ ಈ ವಿಡಿಯೋ | ತಾಯಿ ತನ್ನ ಮಗುವಿಗೆ ಪಾಠ ಹೇಳಿಕೊಡುವ ವಿಡಿಯೋ ನೋಡಿ ಫಿದಾ ಆದ ನೆಟ್ಟಿಗರು !! |
ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಎಂಬ ಮಾತಿದೆ. ಮಗು ಹುಟ್ಟಿದಾಗಿನಿಂದ ತಾಯಿ ಮಗುವಿಗೆ ಪ್ರತಿಯೊಂದು ಚಟುವಟಿಕೆಯನ್ನೂ ಸಹ ಹೇಳಿಕೊಡುತ್ತಾಳೆ. ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದರ ಜೊತೆಗೆ ವಿದ್ಯಾಭ್ಯಾಸವನ್ನು ಮೊದಲ ಅಕ್ಷರದಿಂದ ಹೇಳಿಕೊಡುತ್ತಾಳೆ. ಮಕ್ಕಳಿಗೆ ತಮ್ಮ ಮಾತು ಕೇಳಿಸುವುದು ಅಷ್ಟು ಸುಲಭದ ಮಾತಲ್ಲ. ಮಗು ತಾನಾಗಿಯೇ ಶಿಕ್ಷಣದ ಬಗೆಗೆ ಆಸಕ್ತಿ ಹೊಂದುವಂತೆ ಓಲೈಸಬೇಕು. ಅಂಥಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಇಬ್ಬರು ಮಹಿಳೆಯರು ಸೇರಿ ಒಂದು ಉಪಾಯ ಮಾಡಿದ್ದಾರೆ. ಮಗು ತಾನಾಗಿಯೇ ಕಲಿಕೆಗೆ ಬಂದು ಕುಳಿತುಕೊಂಡಿದೆ. ಆಸಕ್ತಿಯಿಂದ ಪಾಠ ಕಲಿಯುತ್ತಿರುವ ಮಗುವಿಗೆ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ. ಅಮ್ಮನ ಉಪಾಯ ಮೆಚ್ಚಿ ನೆಟ್ಟಿಗರು ಹೊಗಳಿದ್ದಾರೆ.
ಮಕ್ಕಳು ದೊಡ್ಡವರಂತೆಯೇ ನಕಲು ಮಾಡುವುದು ಸಾಮಾನ್ಯ. ನಾವು ಮಾಡಿದಂತೆಯೇ ಮಕ್ಕಳು ಕೂಡಾ ಗ್ರಹಿಕೆಯ ಮೂಲಕ ಕಲಿಯುತ್ತಾರೆ. ಹಲವು ವಿವಿಧ ಚಿತ್ರ ಪುಸ್ತಕಗಳನ್ನು ಹಿಡಿದುಕೊಂಡು ತಾಯಿ ಉಚ್ಛಾರಣೆ ಮಾಡುತ್ತಾಳೆ. ಎದುರು ಕುಳಿತಿರುವ ಮಹಿಳೆ ಆಕೆ ಹೇಳಿಕೊಟ್ಟಂತೆಯೇ ಸಣ್ಣ ಮಗುವಿನಂತೆಯೇ ಉಚ್ಚರಿಸುತ್ತಾಳೆ. ಆಟವಾಡುತ್ತಾ ಕುಳಿತಿರುವ ಮಗು ಇವರನ್ನು ನೋಡಿ ಇವರ ಬಳಿಯೇ ಬಂದಿದೆ. ಉತ್ತರ ಸರಿ ಹೇಳಿದಾಕ್ಷಣ ಹೈಫೈ ಕೊಡುತ್ತಾ ಸಂತೋಷಗೊಂಡಿದೆ. ಅಮ್ಮ ಹೇಳಿಕೊಟ್ಟಂತೆಯೇ ಮಗು ಕೂಡಾ ಉಚ್ಛರಿಸಲು ಪ್ರಯತ್ನಿಸಿದೆ.
ಇನ್ಸ್ಟಾಗ್ರಾಂನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.
ನಾನು ಇದನ್ನು ತುಂಬಾ ಇಷ್ಟಪಟ್ಟಿದ್ದೇನೆ ಎಂದು ಓರ್ವರು ಹೇಳಿದ್ದಾರೆ. ನಾನು ಕೂಡಾ ಈ ರೀತಿಯಾಗಿ ಪ್ರಯತ್ನಿಸುತ್ತೇನೆ, ನನ್ನ ಮಗು ಕೂಡಾ ಬಹುಬೇಗ ಕಲಿಯುತ್ತದೆ ಎಂದು ಓರ್ವರು ಹೇಳಿದ್ದಾರೆ. ಇದು ಒಳ್ಳೆಯ ಉಪಾಯ ಎಂದು ಇನ್ನೋರ್ವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಹೀಗೆ ಹಲವು ಮಂದಿ ಈ ವಿಡಿಯೋ ನೋಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.