ಮದುವೆಯಾಗದೆಯೇ ಮಗು ಹೆತ್ತ ಮಹಿಳೆ!!ಭೂಮಿಗೆ ಬರುತ್ತಲೇ ಹಸುಗೂಸು ಸಾವು ತೀವ್ರ ರಕ್ತಸ್ರಾವ ಗೊಂಡು ತಾಯಿಯೂ ಸಾವು

ಭೂಮಿಗೆ ಬರುವ ಮುನ್ನವೇ ಹಸುಗೂಸೊಂದು ಸಾವನ್ನಪ್ಪಿದ್ದು,ಮಗುವಿಗೆ ಜನ್ಮ ನೀಡಿದ ಅವಿವಾಹಿತ ತಾಯಿಯೂ ಹೆರಿಗೆಯ ಬಳಿಕ ತೀವ್ರ ರಕ್ತಸ್ರಾವ ಗೊಂಡು ಸಾವನ್ನಪ್ಪಿದ್ದು, ಮಗುವಿನ ಜನ್ಮಕ್ಕೆ ಕಾರಣಕರ್ತನಾದ ವ್ಯಕ್ತಿ ಯಾರೆಂಬುದು ಯಾರಿಗೂ ತಿಳಿಯದೆ, ಪ್ರಕರಣ ಇನ್ನೂ ನಿಗೂಢವಾಗಿಯೇ ಉಳಿದಿದೆ.
ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಇಂತಹದೊಂದು ಕರುನಾಜನಕ ಘಟನೆ ನಡೆದಿದ್ದು, ಮೃತ ಮಹಿಳೆಯನ್ನು ಕುಂಸಿ ಗ್ರಾಮದ ಉಪ್ಪಾರ ಕೇರಿಯ ಅಶ್ವಿನಿ ಎಂದು ಗುರುತಿಸಲಾಗಿದೆ.

 

ಘಟನೆ ವಿವರ:ಮೃತ ಅಶ್ವಿನಿ ಹಲವು ವರ್ಷಗಳಿಂದ ಹತ್ತಿರದ ಊರಿನ ಮಧುಸೂದನ್ ಎಂಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದೂ, ಆ ಬಳಿಕ ಮೈಸೂರಿಗೆ ಉದ್ಯೋಗಕ್ಕೆ ತೆರಳಿದ್ದಳು. ಉದ್ಯೋಗದ ಸ್ಥಳದಲ್ಲಿ ಈಕೆಗೆ ಇನ್ನೊಬ್ಬ ಯುವಕನ ಜೊತೆ ಪ್ರೇಮಾಂಕುರವಾಗಿದ್ದು, ಕಳೆದ ಲಾಕ್ ಡೌನ್ ಸಂದರ್ಭ ಆತನನ್ನು ಮನೆಗೂ ಕರೆದುಕೊಂಡು ಬಂದಿದ್ದಾಳೆ. ಮನೆಯಲ್ಲಿ ತನ್ನ ಸ್ನೇಹಿತನೆಂದು ಆತನನ್ನು ಪರಿಚಯಿಸಿದ್ದಾಳೆ.ಕೆಲ ದಿನಗಳ ಕಾಲ ಅಶ್ವಿನಿಯ ಮನೆಯಲ್ಲಿದ್ದ ಆತ ವಾಪಾಸ್ ಮೈಸೂರಿಗೆ ತೆರಳಿದ್ದಾನೆ. ಆ ಬಳಿಕ ಈಕೆಯ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಿಸಿದಾಗ ಗರ್ಭಿಣಿ ಎಂಬುವುದು ದೃಢಪಟ್ಟಿದ್ದು,ಹೆರಿಗೆಯ ವೇಳೆ ಮಗು ಮೃತಪಟ್ಟರೆ, ಆ ಬಳಿಕ ತೀವ್ರ ರಕ್ತಸ್ರಾವ ವಾಗಿ ಅಶ್ವಿನಿಯೂ ಮೃತಪಟ್ಟಿದ್ದಾಳೆ.

ಸದ್ಯ ಈಕೆಯ ಪ್ರೇಮಿಗಳಿಬ್ಬರಲ್ಲಿ ಮಗುವಿನ ತಂದೆ ಯಾರೆಂಬುದು ಪ್ರಶ್ನಾರ್ಥಕವಾಗಿ ಉಳಿದಿದ್ದು, ತಾಯಿ ಹಾಗೂ ಮಗುವಿನ ಮಾದರಿಗಳನ್ನು ಬೆಂಗಳೂರಿಗೆ ಪರೀಕ್ಷೆಗೆ ಕಳುಹಿಸಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Leave A Reply

Your email address will not be published.