ಶಿರಾಡಿ : ನಿಲ್ಲಿಸಿದ್ದ ಲಾರಿಯಿಂದ ರಬ್ಬರ್ ಶೀಟ್ ಕಳವು ,ಆರೋಪಿಗಳ ಬಂಧನ

ಕಡಬ : ಕಡಬ ತಾಲೂಕಿನ ಶಿರಾಡಿ ಗ್ರಾಮದ ಗುಂಡ್ಯ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ಬದಿಯಲ್ಲಿ ನಿಲ್ಲಿಸಿದ್ದ ಲಾರಿಯಿಂದ ರಬ್ಬರ್ ಶೀಟ್ ಕಳವು ಮಾಡಿದ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

 

ರಬ್ಬರ್ ಹೇರಿಕೊಂಡಿದ್ದ ಲಾರಿಯನ್ನು ರಾತ್ರಿ ವೇಳೆ ಶಿರಾಡಿ ಗ್ರಾಮದ ಗುಂಡ್ಯ ಬಳಿ ನಿಲ್ಲಿಸಲಾಗಿತ್ತು.ನಿಲ್ಲಿಸಿದ್ದಲಾರಿ ಮೇಲೆ ಹಾಕಲಾದ ಟರ್ಪಾಲ್ ಸರಿಸಿ ಲಾರಿಯಲ್ಲಿ ಲೋಡ್ ಮಾಡಿದ್ದರಬ್ಬರ್ ಶೀಟ್‌ಗಳಿರುವ ಬಂಡಲ್‌ಗಳ ಪೈಕಿ ತಲಾ 25 ಕೆ ಜಿ ತೂಕದ ರಬ್ಬರ್ ಶೀಟ್‌ಗಳಿರುವ ಸುಮಾರು 35 ಬಂಡಲ್‌ಗಳನ್ನು ಸುಮಾರು 1.45 ಲಕ್ಷ ಮೌಲ್ಯದ ರಬ್ಬರ್ ಕಳವು ಮಾಡಿಕೊಂಡು ಮಾಡಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಬಾಬು ಎಂಬವರು ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಆರೋಪಿಗಳನ್ನು ತೋಮಸ್, ಇ.ಪಿ ವರ್ಗೀಸ್, ಶೀನಪ್ಪಎಂಬವರನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.

ರಬ್ಬರ್ ಹೇರಿಕೊಂಡಿದ್ದಲಾರಿಯನ್ನು ರಾತ್ರಿ ವೇಳೆ ಶಿರಾಡಿ ಗ್ರಾಮದ ಗುಂಡ್ಯಬಳಿ ನಿಲ್ಲಿಸಲಾಗಿತ್ತು. ನಿಲ್ಲಿಸಿದ್ದ ಲಾರಿ ಮೇಲೆ ಹಾಕಲಾದ ಟರ್ಪಾಲ್ ಸರಿಸಿ ಲಾರಿಯಲ್ಲಿ ಲೋಡ್ ಮಾಡಿದ್ದರಬ್ಬರ್ ಶೀಟ್‌ಗಳಿರುವ ಬಂಡಲ್‌ಗಳ ಪೈಕಿ ತಲಾ 25 ಕೆ ಜಿ ತೂಕದ ರಬ್ಬರ್ ಶೀಟ್‌ಗಳಿರುವ ಸುಮಾರು 35 ಬಂಡಲ್‌ಗಳನ್ನು ಸುಮಾರು 1.45 ಲಕ್ಷ ಮೌಲ್ಯದ ರಬ್ಬರ್ ಕಳವು ಮಾಡಿಕೊಂಡು ಮಾಡಿರುವ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಬಾಬು ಎಂಬವರು ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಮೂವರು ಆರೋಪಿಗಳನ್ನು ಸೆರೆ ಹಿಡಿದಿದ್ದಾರೆ. ಆರೋಪಿಗಳನ್ನು ತೋಮಸ್, ಇ.ಪಿ ವರ್ಗೀಸ್, ಶೀನಪ್ಪ ಎಂಬವರನ್ನು ಬಂಧಿಸಿ ಕ್ರಮ ಕೈಗೊಂಡಿದ್ದಾರೆ.

ಪ್ರಕರಣ ದ ಪತ್ತೆಯ ಕಾರ್ಯಾಚರಣೆಯು ಪೊಲೀಸ್ ಅಧೀಕ್ಷಕ ರು ದ.ಕ ಮಂಗಳೂರು ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ದ.ಕ ಜಿಲ್ಲೆ ಮಂಗಳೂರು ಅವರ ನಿರ್ದೇಶನದಲ್ಲಿ ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ, ಮಾರ್ಗದರ್ಶನದಲ್ಲಿ ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಉಮೇಶ್ ಉಪ್ಪಳಿಕೆ ಹಾಗೂ ಉಪ್ಪಿನಂಗಡಿ ಠಾಣಾ ಪಿಎಸ್‌ಐ ಕುಮಾರ್ ಕಾಂಬ್ಳೆ ಸಿಬ್ಬಂಧಿಗಳಾದ ಎಎಸ್‌ಐ ಸೀತಾರಾಮ್ ಗೌಡ, ಮತ್ತು ಸಿಬ್ಬಂದಿಗಳಾದ ಹಿತೋಷ್ ಕುಮಾರ್, ಕೃಷ್ಣಪ್ಪ ನಾಯ್ಕ, ಯೋಗರಾಜ್ ಪ್ರಕರಣದ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದರು.

Leave A Reply

Your email address will not be published.