ಮೈಸೂರು ದೇವಾಲಯವನ್ನು ಕೆಡವಿದ ಪ್ರಕರಣದ ಬಿಸಿ ಆರುವ ಮುನ್ನವೇ ಹೊಸ ಯೋಜನೆ ಜಾರಿಗೆ !!ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಅನಧಿಕೃತ ದೇವಾಲಯ,ಚರ್ಚ್,ಮಸೀದಿಗಳ ತೆರವಿಗೆ ಮುಂದಾದ ಬೊಮ್ಮಾಯಿ ಸರ್ಕಾರ

Share the Article

ರಾಜ್ಯದಲ್ಲೇ ಸಂಚಲನ ಸೃಷ್ಟಿಸಿದ, ಹಲವಾರು ಆಕ್ರೋಶ ಪ್ರತಿಭಟನೆಯ ಬಿಸಿ ತಟ್ಟಿರುವ ಮೈಸೂರು ಅನಧಿಕೃತ ದೇವಾಲಯವನ್ನು ಕೆಡವಿದ ಪ್ರಕರಣದ ಬೆನ್ನಲ್ಲೇ, ರಾಜ್ಯ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ದೇವಾಲಯಗಳ ತೆರವಿಗೆ ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿಯೊಂದು ಹರಿದಾಡುತ್ತಿದ್ದೂ, ಕೆಡವುವ ದೇವಾಲಯಗಳ ಪಟ್ಟಿ ಸಿದ್ಧಾವಾಗಿದೆ ಎಂದು ಹೇಳಲಾಗುತ್ತಿದೆ.

ಸರ್ಕಾರಕ್ಕೆ ಸಲ್ಲಿಕೆಯಾದ ವರದಿಯ ಪ್ರಕಾರ 2009 ರ ಹಿಂದಿನ ಸುಮಾರು 902 ಅನಧಿಕೃತ ಕಟ್ಟಡಗಳ ತೆರವಿಗೆ ಸಿದ್ಧತೆ ನಡೆಸಲಾಗುತ್ತಿದ್ದು, ಇದರಲ್ಲಿ ಹಲವಾರು ದೇವಾಲಯ, ಚರ್ಚ್, ಮಸೀದಿಯೂ ಸೇರಿದೆ ಎಂಬ ಶಾಕಿಂಗ್ ಮಾಹಿತಿ ಇದೆ.

ರಾಜ್ಯ ಸರ್ಕಾರದ ಪ್ರಕಾರ ಅನಧಿಕೃತ ಹಳೇ ಕಟ್ಟಡಗಳ ತೆರವು ಕಾರ್ಯವಾಗಿದ್ದರೆ,ಇದೊಂದು ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಕಾರ್ಯ ಎಂದು ಸಂಘಟನೆಗಳು ವಿರೋಧಿಸುತ್ತಿವೆ. ಅದರಲ್ಲೂ ಹಿಂದೂ ಪರ, ಹಿಂದುತ್ವದ ಸರ್ಕಾರವಾದ ಬಿಜೆಪಿ ಅಧಿಕಾರದಲ್ಲಿರುವಾಗಲೇ ಈ ರೀತಿಯ ಅಧಿಕಾರ ಜನರನ್ನು ಚಿಂತೆಗೀಡುಮಾಡಿದೆ.

Leave A Reply

Your email address will not be published.