ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದಲ್ಲಿ ಹೊಸ ನೇಮಕಾತಿಗೆ ಅರ್ಜಿ ಆಹ್ವಾನ | ಇದೇ ಸೆಪ್ಟೆಂಬರ್ 22 ಕ್ಕೆ ನೇರ ಸಂದರ್ಶನ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗದಲ್ಲಿ ಅಪ್ರೆಂಟೀಸ್ ತರಬೇತಿಗೆ ಆಸಕ್ತ, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ನೇರ ಸಂದರ್ಶನಕ್ಕೆ ಇದೇ ಸೆಪ್ಟೆಂಬರ್ 22ರಂದು ಹಾಜರಾಗಬಹುದು.
ಶಿಶಿಕ್ಷು ಅಧಿನಿಯಮ 1961ರ ಅನ್ವಯ ಪೂರ್ಣ ಅವಧಿಯ ತಾಂತ್ರಿಕ ವೃತ್ತಿಯಲ್ಲಿ ತರಬೇತಿ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಪುತ್ತೂರು ವಿಭಾಗ ಅರ್ಜಿಗಳನ್ನು ಆಹ್ವಾನಿಸಿದೆ.
ಹುದ್ದೆಗಳ ವಿವರ :
ಹುದ್ದೆಗಳು : ಎಲೆಕ್ಟ್ರೀಷಿಯನ್ 24 ಸ್ಥಾನಗಳು, ಫಿಟ್ಟರ್ 7 ಸ್ಥಾನಗಳು, ಮೆಕ್ಯಾನಿಕ್ ಡೀಸೆಲ್ 80 ಸ್ಥಾನಗಳು, ಎಂ. ವಿ. ಬಿ. ಬಿ. 4 ಸ್ಥಾನಗಳು, ವೆಲ್ಡರ್ 8 ಸ್ಥಾನಗಳು, ಮೆಕ್ಯಾನಿಕ್ ಆಟೊ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ 16 ಸ್ಥಾನಗಳು, ಮೋಟಾರ್ ಮೆಕ್ಯಾನಿಕ್ ವೆಹಿಕಲ್ 20 ಸ್ಥಾನಗಳು, ಮೆಕ್ಯಾನಿಕ್ ಆಟೊ ಮೊಬೈಲ್ (ಅಡ್ವಾನ್ಸ್‍ಡ್ ಡೀಸೆಲ್ ಎಂಜಿನ್) 1 ಸ್ಥಾನ
ಒಟ್ಟು ಹುದ್ದೆಗಳು : 30
ವಿದ್ಯಾರ್ಹತೆ : ಐಟಿಐ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಸೆಪ್ಟೆಂಬರ್ 20
ಮೀಸಲಾತಿ : ಪರಿಶಿಷ್ಟ ಜಾತಿಯವರಿಗೆ 1:8 ಮೀಸಲಾತಿ, ಪರಿಶಿಷ್ಟ ಪಂಗಡಕ್ಕೆ 1:20, ಅಂಗವಿಕಲರಿಗೆ 3 ಮತ್ತು ಮಾಜಿ ಸೈನಿಕರ ಮಕ್ಕಳಿಗೆ ಪ್ರತಿಶತ 3ರಷ್ಟು ಮೀಸಲಾತಿ
ವಯೋಮಿತಿ : 18 – 26 ವರ್ಷ
ನೇರ ಸಂದರ್ಶನದ ದಿನಾಂಕ : 22 ಸೆಪ್ಟೆಂಬರ್ 2021
ನೇರ ಸಂದರ್ಶನದ ವಿಳಾಸ : ವಿಭಾಗೀಯ ನಿಯಂತ್ರಣಾಧಿಕಾರಿ, ಕ.ರಾ.ರ.ಸಾ.ನಿಗಮ, ವಿಭಾಗೀಯ ಕಚೇರಿ, ಪುತ್ತೂರು ವಿಭಾಗ, ಮುಕ್ರಂಪಾಡಿ, ದರ್ಬೆ ಅಂಚೆ, ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ.
ಆಯ್ಕೆಗೊಂಡ ಅಭ್ಯರ್ಥಿಗಳ ತರಬೇತಿಯು ಒಂದು ವರ್ಷದ್ದಾಗಿದೆ. ನೀಡಲಾಗುವುದು. ಈಗಾಗಲೇ ಶಿಶಿಕ್ಷು ತರಬೇತಿ ಪಡೆದಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಷರತ್ತುಗಳು: ಆಸಕ್ತರು ಅರ್ಜಿಗಳನ್ನು ಆಯೋಗದ ಅಂತರ್ಜಾಲ www.apprenticeshipindia.org. ವೆಬ್‌ಸೈಟ್ ಮೂಲಕ ನೋಂದಣಿ ಮಾಡುವುದು ಹಾಗೂ ನೋಂದಣಿ ಪ್ರತಿಯನ್ನು ಸಲ್ಲಿಸುವುದು. (ನೋಂದಣಿ ಪ್ರತಿ ಸಲ್ಲಿಸದೇ ತರುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು).
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು www.apprenticeshipindia.org ಹೋಂ ಪೇಜ್‍ನಲ್ಲಿ Registration-candidate Registration ನಲ್ಲಿ ವಿವರಗಳನ್ನು ಕಡ್ಡಾಯವಾಗಿ ನಮೂದಿಸುವುದು ನಂತರ ಇ-ಮೇಲ್ ನಲ್ಲಿ ಆಕ್ಟಿವೇಷನ್ (activation) ಮಾಡಿದ ನಂತರ ಇ-ಮೇಲ್ ಯೂಸರ್ ಐಡಿ ಮತ್ತು ಪಾಸ್‍ವರ್ಡ್- ಲಾಗಿನ್ ಪಾಸ್ ವರ್ಡ್ ಆಗಿರುತ್ತದೆ.
ಲಾಗಿನ್ ಆದ ನಂತರ candidate dashboardನಲ್ಲಿ ವಿವರಗಳನ್ನು ನಮೂದಿಸುವುದು. ಪೂರ್ಣ ವಿವರಗಳನ್ನು ನಮೂದಿಸಿ, ಸಂಬಂಧಿಸಿದ ದಾಖಲಾತಿಗಳನ್ನು ಆಪ್‍ಡೇಟ್ ಮಾಡಿರುವ ಅರ್ಜಿಗಳನ್ನು ಮಾತ್ರ ಪರಿಗಣಿಸಲಾಗುವುದು. ಅಪೂರ್ಣ ವಿವರಗಳುಳ್ಳ ಅರ್ಜಿಗಳನ್ನು ಪರಿಗಣಿಸುವುದಿಲ್ಲ.
ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಕಚೇರಿಯಿಂದ ನೀಡುವ ಅರ್ಜಿಯನ್ನು ಭರ್ತಿಗೊಳಿಸಿ ದಾಖಲಾತಿಗಳಾದ ಆಧಾರ್ ಕಾರ್ಡ್ ಪ್ರತಿ 2, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ 2, ಆಧಾರ್ ನಂಬರ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಬಗ್ಗೆ ಸಂಬಂಧಿಸಿದ ಬ್ಯಾಂಕ್‍ನಿಂದ ದೃಢೀಕರಣ ಪತ್ರ, ಇ-ಮೇಲ್ ಐಡಿ, ವಿದ್ಯಾರ್ಹತೆಯ ಮೂಲ ದಾಖಲಾತಿ ಮತ್ತು ಜೆರಾಕ್ಸ್ ಪ್ರತಿ ಮತ್ತು ಜಾತಿ ಪ್ರಮಾಣದ ಮೂಲ ಪ್ರತಿ ಮತ್ತು ಜೆರಾಕ್ಸ್ ಪ್ರತಿಯೊಂದಿಗೆ ನೇರ ಸಂದರ್ಶನಕ್ಕೆ ಹಾಜರಾಗಬೇಕು.
ಶಿಶಿಕ್ಷುಗಳು ಆನ್‍ಲೈನ್ ನೋಂದಣಿಗೆ ಆಧಾರ್ ಕಾರ್ಡ್ ಹಾಗೂ ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ ವಿವರಗಳು (ಹೆಸರು, ಹುಟ್ಟಿದ ದಿನಾಂಕ, ಪೋಷಕರ ಹೆಸರು) ಒಂದಕ್ಕೊಂದು ತಾಳೆಯಾಗುವಂತಿರಬೇಕು. ಇಲ್ಲವಾದಲ್ಲಿ ಆನ್‍ಲೈನ್ ನೋಂದಣಿಯಲ್ಲಿ ಅಡಚಣೆ ಉಂಟಾದರೆ ಸಂಸ್ಥೆ ಯಾವುದೇ ರೀತಿಯ ಹೊಣೆಗಾರಿಕೆ ಹೊಂದುವುದಿಲ್ಲ.
ಶಿಶಿಕ್ಷುಗಳು ಕಾಯಿದೆ 1961 ರನ್ವಯ ಈಗಾಗಲೇ ಶಿಶಿಕ್ಷು ತರಬೇತಿ ಪಡೆದಿರುವವರು ಅರ್ಜಿ ಸಲ್ಲಿಸಲು ಅರ್ಹರಲ್ಲ. ಒಂದು ವೇಳೆ ಅಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಲ್ಲಿ ಅವರ ವಿರುದ್ಧ ಪೊಲೀಸ್ ಮೊಕದ್ದಮೆ ದಾಖಲಿಸಬಹುದು.