ಅಡಿಕೆ ಬೇಯಿಸುವ ಹಂಡೆಗೆ ಬಿದ್ದಿದ್ದ ನಾಲ್ಕು ವರ್ಷದ ಬಾಲಕ ಸಾವು

Share the Article

ಅಡಿಕೆ ಬೇಯಿಸುವ ಹಂಡೆಯೊಳಗಿನ ಕುದಿಯುವ ನೀರಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಭದ್ರಾವತಿ ತಾಲೂಕಿನ ಅರಕೆರೆ ಗ್ರಾಮದ ನಾಲ್ಕು ವರ್ಷದ ಬಾಲಕ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.

ಅರಕೆರೆ ಗ್ರಾಮದ ಮಂಜುನಾಥ ಎಂಬುವರ ಪುತ್ರ ಧನರಾಜ್ ಮೃತಪಟ್ಟ ಬಾಲಕ.

ಆ.29ರಂದು ಮನೆ ಹಿಂದೆ ಅಡಿಕೆ ಬೇಯಿಸುವಾಗ ಹಂಡೆಯ ಪಕ್ಕ ಧನರಾಜ್ ನಿಂತಿದ್ದ. ಈ ವೇಳೆ ಆಯತಪ್ಪಿ ಕುದಿಯುತ್ತಿದ್ದ ನೀರಿದ್ದ ಹಂಡೆಯೊಳಗೆ ಬಿದ್ದಿದ್ದ.

ತಕ್ಷಣವೇ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆತ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಹೊಳೆಹೊನ್ನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply