ಕೋವಿಡ್ 2ನೇ ಅಲೆಯಲ್ಲಿ ಹೆಚ್ಚಾದ ಮಾನಸಿಕ ಖಿನ್ನತೆ | ಅಧ್ಯಯನ ವರದಿ

ನವದೆಹಲಿ : ಕೋವಿಡ್ ಎರಡನೇ ಅಲೆಯಲ್ಲಿ ಹೆಚ್ಚು ಮಂದಿ ಖಿನ್ನತೆ ಮತ್ತು ಹತಾಶೆಯ ಸಮಸ್ಯೆಗಳಿಗೆ ತುತ್ತಾಗಿದೆ ಎಂದು ಸಾಕೇತ್‌ನ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರ ತಂಡ ನೆಡೆಸಿದ ಹೊಸ ಅಧ್ಯಯನ ವರದಿಯೊಂದು ಹೇಳಿದೆ.

ಕೋವಿಡ್ ಎರಡನೇ ಅಲೆಯ ನಂತರದ ಅಧ್ಯಯನದಲ್ಲಿ ಭಾರತದ ಶೇ 67.7ರಷ್ಟು ಮಂದಿ ಖಿನ್ನತೆಯ ಸಮಸ್ಯೆಗಳನ್ನು ಎದುರಿಸಿದ್ದಾರೆ. ಕೋವಿಡ್ ಮೊದಲಹಂತದಲ್ಲಿ ಅಧ್ಯಯನ ನಡೆಸಿದ 1069 ವ್ಯಕ್ತಿಗಳಲ್ಲಿ ಶೇ 50ರಷ್ಟು ಮಂದಿಯಲ್ಲಿ ಗಂಭೀರ ಹತಾಶೆಯ ಸಮಸ್ಯೆಗಳು ಕಂಡುಬಂದಿದ್ದು, ಅವರಲ್ಲಿಶೇ.25 ಭಾಗದಷ್ಟು ಮಂದಿಯಲ್ಲಿ ಖಿನ್ನತೆಯ ಚಿಹ್ನೆಗಳಿದ್ದವು. ಅವರಲ್ಲಿ ಸುಮಾರು ಶೇ.27ರಷ್ಟು ಮಂದಿ ಒಂದು ಹಂತದಲ್ಲಿ ಆತ್ಮಹತ್ಯೆಯ ಬಗ್ಗೆಯೂ ಯೋಚಿಸಿದ್ದಾಗಿ ತಿಳಿಸಿದ್ದರು ಎಂದು ಆಸ್ಪತ್ರೆಯ ನಿರ್ದೇಶಕರು ಮತ್ತು ಮಾನಸಿಕ ಆರೋಗ್ಯ ಮತ್ತು ನಡವಳಿಕೆ ವಿಜ್ಞಾನ ವಿಭಾಗದ ಮುಖ್ಯಸ್ಥರು ಹೇಳಿದ್ದಾರೆ.

ವರದಿಯ ಪ್ರಕಾರ ಹಿಂದಿನ ಸ್ಥಿತಿಗಳಿಗೆ ಹೋಲಿಸಿದಲ್ಲಿ ಲಾಕ್ ಡೌನ್ ನಂತರ 31ರಿಂದ 50 ವರ್ಷದ ನಡುವಿನ ವಯಸ್ಸಿನವರಲ್ಲಿ ಆತ್ಮಹತ್ಯೆಯ ಪ್ರಮಾಣ ಜನರಲ್ಲಿ ಹೆಚ್ಚಾಗಿದೆ.

Leave A Reply

Your email address will not be published.