ಬೆಳ್ತಂಗಡಿ|ಚಾರ್ಮಾಡಿ ಘಾಟ್ 7ನೇ ತಿರುವಿನಲ್ಲಿ ಬಂಡೆ ಕುಸಿತ!!

ಬೆಳ್ತಂಗಡಿ: ಚಾರ್ಮಾಡಿ ಘಾಟಿ 7ನೇ ತಿರುವಿನ ಬಳಿ ಇಂದು ಮಧ್ಯಮ ಗಾತ್ರದ ಬಂಡೆ ಕುಸಿತಕ್ಕೊಳಗಾಗಿದೆ.

 

ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈ ಘಟನೆ ಸಂಭವಿಸಿದ್ದು,ಇದರಿಂದ ಘಾಟಿ ಪ್ರದೇಶದಲ್ಲಿ ಏಕಮುಖ ಸಂಚಾರಕ್ಕೆ ಯಾವುದೇ ಅಡ್ಡಿ ಇಲ್ಲ ಎಂದು ತಿಳಿದು ಬಂದಿದೆ.

ಮಂಜಿನ ವಾತಾವರಣ ಇರುವುದರಿಂದ ವಾಹನಗಳ ಓಡಾಟಕ್ಕೆ ಅಡ್ಡಿ ಆಗದಂತೆ ತಕ್ಷಣ ತೆರವು ಅಗತ್ಯವಿದ್ದು,ಈ ಬಗ್ಗೆ ಇಲಾಖೆಗೆ ಮಾಹಿತಿ ನೀಡಲಾಗಿದೆ.

Leave A Reply

Your email address will not be published.