ಮಂಗಳೂರು: ದೋಣಿ ದುರಂತ ,ಓರ್ವ ಕಣ್ಮರೆ,ನಾಲ್ವರ ರಕ್ಷಣೆ

ಮಂಗಳೂರಿನ ಕಡಲಿನಲ್ಲಿ ಇಂದು ಬೆಳಗ್ಗೆ ದೋಣಿ ಅವಗಢ ಸಂಭವಿಸಿದ್ದು, ಓರ್ವ ಮೀನುಗಾರ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

 

ಪಣಂಬೂರು ಬೀಚ್ ಸಮೀಪವೇ ಈ ಅವಗಢ ಬೆಳಗ್ಗೆ 7.30ರ ಸುಮಾರಿಗೆ ನಡೆದಿದೆ. ಮೀನು ಹಿಡಿಯುವ ವೇಳೆ ಬೀಸಿದ ಗಾಳಿಗೆ ಗಿಲ್‌ನೆಟ್ ಬೋಟ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.

ಅಝರ್ ಎಂಬವರ ಮಾಲೀಕತ್ವದ ಈ ದೋಣಿಯಲ್ಲಿ ಬೆಂಗ್ರೆಯ ಅಬ್ದುಲ್ ಅಜೀಜ್, ಇಮ್ಮಿಯಾಜ್, ಸಿನಾನ್, ಫೈರೋಜ್ ಹಾಗೂ ಶರೀಫ್ ಎಂಬವರಿದ್ದರು. ಇವರಲ್ಲಿ ಶರೀಫ್ ನೀರುಪಾಲಾಗಿದ್ದು ಅವರ ಶೋಧ ಕಾರ್ಯ ಮುಂದುವರೆದಿದೆ. ಉಳಿದ ನಾಲ್ವರನ್ನು ಸ್ಥಳೀಯರು ರಕ್ಷಣೆ ಮಾಡಿದ್ದು, ದೋಣಿಯನ್ನು ದಡಕ್ಕೆ ಎಳೆದು ತರಲಾಗಿದೆ ಎಂದು ತಿಳಿದುಬಂದಿದೆ.

Leave A Reply

Your email address will not be published.