ಉದನೆ : ಗಣಪತಿ ಕಟ್ಟೆಗೆ ಹಾನಿ | ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಡಬ ಪ್ರಖಂಡ | ಆರೋಪಿಗಳ ಬಂಧಿಸದಿದ್ದರೆ ಹೆದ್ದಾರಿ ತಡೆ ಎಚ್ಚರಿಕೆ
ಕಡಬ : ಕಿಡಿಗೇಡಿಗಳು ಉದನೆಯ ಗಣಪತಿ ಕಟ್ಟೆಗೆ ಹಾನಿ ಮಾಡಿರುವುದನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳ ಕಡಬ ಪ್ರಖಂಡ ಖಂಡಿಸಿದೆ.
ಈ ಘಟನೆಯು ಇಡೀ ಹಿಂದೂ ಸಮಾಜದ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಿದೆ.ತಪ್ಪಿತಸ್ಥರೂ ಯಾರೇ ಆಗಿರಲಿ ಅವರನ್ನು ಈ ಕೂಡಲೇ ಪತ್ತೆಹಚ್ಚಿ ಅತೀ ಶೀಘ್ರ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಹಿಂಪ ಕಡಬ ಪ್ರಖಂಡ ಅಧ್ಯಕ್ಷರಾದ ರಾಧಾಕೃಷ್ಣ ಕೋಲ್ಪೆ ಆಗ್ರಹಿಸಿದ್ದಾರೆ.
ಪೋಲಿಸ್ ಇಲಾಖೆಯವರು ಒಂದು ವಾರದ ಒಳಗೆ ಆರೋಪಿಗಳನ್ನು ಬಂಧಿಸಲುವಿಫಲರಾದರೆ ಈ ಭಾಗದ ಎಲ್ಲಾ ಹಿಂದೂ ಬಾಂಧವರನ್ನು ಒಗ್ಗೂಡಿಸಿ ಆ.21ರಂದು ಉದನೆ ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆಮಾಡಿ ಪ್ರತಿಭಟನೆ ಮಾಡುವುದಾಗಿ
ವಿ.ಹಿಂ.ಪ ಜಿಲ್ಲಾ ಸಹ ಕಾರ್ಯದರ್ಶಿ ನವಿನ್ ನೆರಿಯರವರು ಮುನ್ನೆಚ್ಚರಿಕೆ ನೀಡಿದ್ದಾರೆ.
ಈ ಸಂಧರ್ಭದಲ್ಲಿ ಕಡಬ ಪ್ರಖಂಡ ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ಬಜರಂಗದಳ ಸಂಚಾಲಕರಾದ ಮೂಲಚಂದ್ರ ಕಾಂಚನ, ಸುರಕ್ಷಾ ಪ್ರಮುಖ್ ಜಯಂತ ಕಲ್ಲುಗುಡ್ಡೆ ಹಾಗೂ ಗಣೇಶೊತ್ಸವ ಸಮಿತಿ ಅಧ್ಯಕ್ಷ ಬಾಲಕೃಷ್ಣ ಗೌಡ ಓರ್ಕಳ , ಮತ್ತುಪದಾಧಿಕಾರಿಗಳು,ವಿ.ಹಿಂ.ಪ.ಬಜರಂಗದಳ ಉದನೆ ಘಟಕ ದ ಅಧ್ಯಕ್ಷ ಶಿವರಾಜ್ ಬನಾರಿ , ಮಲೆನಾಡು ಜನಹಿತರಕ್ಷಣಾ ವೇದಿಕೆಯ ಸಂಚಾಲಕರಾದ ಕಿಶೋರ್ ಶಿರಾಡಿ , ಹಾಗೂ ಬಜರಂಗದಳ ದ ಕಾರ್ಯಕರ್ತರು ಉಪಸ್ಥಿತರಿದ್ದರು.