ಬಾಲ್ಯದಿಂದಲೇ ಆಕೆಯ ಕಣ್ಣು ನಿದ್ದೆ ಕಂಡಿಲ್ಲವಂತೆ!! ಆಕೆಗೆ ನಿದ್ದೆ ಹಿಡಿಸಲು ಯಾವ ನಿದ್ದೆ ಮಾತ್ರೆಯಿಂದಲೂ ಸಾಧ್ಯವಿಲ್ಲವಂತೆ|ವೈದ್ಯರಿಂದಲೇ ವಿವರಣೆ ಸಿಗದ ಆ ಸ್ಟೋರಿ ಇಲ್ಲಿದೆ

ರಾತ್ರಿ ಸರಿಯಾಗಿ ನಿದ್ರೆ ಬರದ ಕಾರಣ ನಿದ್ದೆ ಮಾಡಲು ಕಷ್ಟಪಡುವ ಅನೇಕರನ್ನು ನಾವು ನೋಡಿದ್ದೇವೆ. ನಮ್ಮ ದಿನನಿತ್ಯದ ಜೀವನದಲ್ಲಿ ನಿದ್ದೆಯಿಲ್ಲದೆ ನರಳುವ ಅನೇಕ ಜನರನ್ನು ನಾವು ಭೇಟಿಯಾಗುತ್ತೇವೆ. ಇದಕ್ಕೆ ವಿರುದ್ಧವಾಗಿ ಸದಾಕಾಲ ಹೆಚ್ಚು ನಿದ್ರಿಸುವವರನ್ನೂ ಅಥವಾ ಎಷ್ಟೇ ಹೊತ್ತು ಮಲಗಿದರೂ ನಮಗೆ ನಿದ್ರೆಯೇ ಮುಗಿದಿಲ್ಲ ಎಂದು ಹೇಳುವ ಹಲವರನ್ನು ನಮ್ಮ ಸುತ್ತಮುತ್ತಲೂ ನೋಡುತ್ತೇವೆ.

 

ಆದರೆ ಚೀನಾದಲ್ಲಿ ವಾಸಿಸುತ್ತಿರುವ ಮಹಿಳೆಯೊಬ್ಬರು ಕಳೆದ 40 ವರ್ಷಗಳಿಂದ ತಾನು ಒಂದು ಕ್ಷಣವೂ ನಿದ್ದೆಯೇ ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ. ತಾನು ಬಾಲ್ಯದಿಂದಲೂ ಒಂದು ರಾತ್ರಿ ಕೂಡ ಮಲಗಿಲ್ಲ ಎಂದು ಹೇಳಿಕೊಳ್ಳುವ ಚೀನಾದ ಮಹಿಳೆಯ ನಿಗೂಢ ಸ್ಥಿತಿಯು ವೈದ್ಯರನ್ನು ಕಂಗೆಡಿಸಿದೆ.

ನಿದ್ರಾಹೀನತೆಯಿಂದ ಬಳಲುತ್ತಿರುವ ಮಹಿಳೆ:

ಪೂರ್ವ ಚೀನಾದ ಹೆನಾನ್ ಪ್ರಾಂತ್ಯದ ಲಿ ಜಾನಿಂಗ್ ಅವರಿಗೆ ಸದ್ಯ ಸುಮಾರು 45-46 ವರ್ಷ, ಆಕೆ ಐದು ವರ್ಷದವಳಿದ್ದಾಗ ಕೊನೆಯ ಬಾರಿಗೆ ಮಲಗಿದ್ದಳು ಎಂದು ಹೇಳಿದ್ದಾರೆ. ಲಿ ನಿದ್ದೆಯಿಲ್ಲದ ರಾತ್ರಿಗಳು ಅವಳ ಹಳ್ಳಿಯಲ್ಲಿ ಅವಳನ್ನು ಸೆಲೆಬ್ರಿಟಿಯನ್ನಾಗಿ ಮಾಡಿದೆ. ಆಷ್ಟೇ ಅಲ್ಲ ವೈದ್ಯಕೀಯ ಜಗತ್ತಿಗೆ ಒಂದು ಸವಾಲಾಗಿರುವ ಈ ಮಹಿಳೆ ಈಗ ಸಖತ್ ಫೇಮಸ್ ಆಗುತ್ತಿದ್ದಾರೆ.

ಆರಂಭದಲ್ಲಿ, ನೆರೆಹೊರೆಯವರು ಆಕೆಯ ಹೇಳುತ್ತಿರುವುದು ಸುಳ್ಳು ಎಂದು ಭಾವಿಸಿದರು. ಅದಕ್ಕಾಗಿ ಅವರು ರಾತ್ರಿಯಿಡೀ ಅವಳೊಂದಿಗೆ ಎಚ್ಚರವಾಗಿರಲು ಪ್ರಯತ್ನಿಸಿದರು ಮತ್ತು ಅವಳೊಂದಿಗೆ ಕಾರ್ಡ್‌ ಇನ್ನಿತರ ಆಟಗಳನ್ನು ಆಡುತ್ತಿದ್ದರು. ಕೆಲವರು ಅಲ್ಲಿಯೇ ಮೇಜಿನ ಮೇಲೆ ಮಲಗಿದರೆ, ಕೆಲವರು ಮನೆಗೆ ಮರಳುತ್ತಿದ್ದರು. ಆದಾಗ್ಯೂ, ಲಿ ಕ್ಷಣ ಮಾತ್ರವೂ ನಿದ್ರೆ ಮಾಡುತ್ತಿರಲಿಲ್ಲ ಎಂದು ತಿಳಿದುಬಂದಿದೆ.

ಮದುವೆಯ ನಂತರ ಗಂಡನಿಗೂ ಆಶ್ಚರ್ಯವಾಯಿತು:

ಲಿ ಜಾನಿಂಗ್ ಅವರ ಈ ಸ್ಥಿತಿಯ ಬಗ್ಗೆ ಅವರ ಪತಿ ಲುಯಿ ಸುಕ್ವಿನ್ ಅವರು ದೃಢಪಡಿಸಿದ್ದಾರೆ. ತನ್ನ ಪತ್ನಿ ನಿದ್ರಿಸುವುದನ್ನು ಎಂದಿಗೂ ನೋಡಿಲ್ಲ ಎಂದು ಹೇಳಿರುವ ಲುಯಿ ಸುಕ್ವಿನ್, ಇದು ಮಾತ್ರವಲ್ಲ, ತನ್ನ ಪತ್ನಿ ಲೀ ರಾತ್ರಿಯಲ್ಲಿ ಸಮಯ ಕಳೆಯಲು ಮನೆಕೆಲಸ ಮಾಡುತ್ತಾರೆ ಎಂದಿದ್ದಾರೆ.

ಆರಂಭದಲ್ಲಿ ಲಿ ಜಾನಿಂಗ್ ಅವರ ಈ ನಿದ್ರಾಹೀನತೆ ಸಮಸ್ಯೆಯನ್ನು ನಿವಾರಿಸಲು ನಿದ್ರೆ ಮಾತ್ರೆಗಳನ್ನು ಸಹ ಖರೀದಿಸಿದೆ. ಹಲವು ವೈದ್ಯರನ್ನೂ ಸಂಪರ್ಕಿಸಿದೆವು. ಆದರೆ ಯಾವ ಔಷಧಿಯಿಂದಲೂ ಏನೂ ಪ್ರಯೋಜನವಾಗಲಿಲ್ಲ. ಇಲ್ಲಿಯವರೆಗೆ ಯಾವುದೇ ವೈದ್ಯರು ಲಿ ಯ ವಿಚಿತ್ರ ಕಾಯಿಲೆಯ ಚಿಕಿತ್ಸೆ ಅಥವಾ ಕಾರಣದ ಬಗ್ಗೆ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ ಎಂದು ಲುಯಿ ಸುಕ್ವಿನ್ ಪತ್ನಿಯ ಪರಿಸ್ಥಿತಿಯ ಬಗ್ಗೆ ವಿವರಿಸಿದ್ದಾರೆ.

ಲಿ ವೈದ್ಯರನ್ನು ಸಂಪರ್ಕಿಸಿದಾಗ, ಅವರಿಗೆ ವೈದ್ಯಕೀಯ ವಿವರಣೆ ನೀಡಲು ಸಾಧ್ಯವಾಗಲಿಲ್ಲ ಎಂದು ಚೀನಾದ ಸುದ್ದಿ ತಾಣ ಬಾಸ್ಟಿಲ್ಲೆ ಪೋಸ್ಟ್ ವರದಿ ಮಾಡಿದೆ. ಪ್ರಪಂಚದಲ್ಲಿ ಈ ರೀತಿಯೂ ನಡೆಯುತ್ತದೆ ಎಂಬುದನ್ನು ನಂಬಲು ಅಸಾಧ್ಯವಾಗಿದೆ. ಆದರೂ ಇದು ಸತ್ಯ ಎಂಬುದನ್ನು ನಾವು ಜೀರ್ಣಿಸಿಕೊಳ್ಳಲೇಬೇಕು.

Leave A Reply

Your email address will not be published.