ಮಂಗಳೂರು | ನಿಶ್ಚಿತಾರ್ಥವಾಗಿದ್ದ ಯುವತಿ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು , ಪ್ರೇಮಿಯೊಂದಿಗೆ ಓಡಿ ಹೋಗಲು ಕಾರಣವಾಯಿತೇ ಅಂತರ್ ಧರ್ಮೀಯ ವಿವಾಹದ ಪ್ರತೀಕಾರ??

ಮಂಗಳೂರು ನಗರದ ಬಳ್ಳಾಲ್‌ಭಾಗ್‌ನ ವಸತಿ ಸಮುಚ್ಚಯವೊಂದರ ನಿವಾಸಿ, ಮದುವೆ ನಿಶ್ಚಿತಾರ್ಥಗೊಂಡ ಯುವತಿ ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ.
ಈ ಪ್ರಕರಣ 22 ವರ್ಷಗಳ ಹಿಂದೆ ನಡೆದ ಅಂತರ್ ಧರ್ಮೀಯ ವಿವಾಹಕ್ಕೆ ಪ್ರತೀಕಾರ ಎನ್ನಲಾಗಿದ್ದು, ತಾಯಿಯ ಅಕ್ಕನ ಮಗನೇ ಯುವತಿಯನ್ನು ಲಪಟಾಯಿಸಿದ್ದಾನೆ. ನಾಪತ್ತೆಯಾದ ಯುವತಿಯ ತಾಯಿಯೂ ಅಂತರ್ ಧರ್ಮೀಯ ವಿವಾಹವಾಗಿದ್ದರು ಎಂದು ತಿಳಿದುಬಂದಿದೆ.
ಅಂತರ್ ಧರ್ಮದ ಯುವಕನ ಜೊತೆ ವಿವಾಹವಾದ ಯುವತಿಯ ಪುತ್ರಿಯನ್ನೇ ಅಂತರ್ ಧರ್ಮೀಯ ಪ್ರೀತಿಸಿ ವಿವಾಹವಾಗುವ ಮೂಲಕ ತವರು ಮನೆಯರು ಪ್ರತೀಕಾರ ತೀರಿಸಿಕೊಂಡಿದ್ದಾರೆ. ಕಳೆದ 22 ವರ್ಷಗಳ ಹಿಂದೆ ಮಂಗಳೂರಿನ ಯುವಕ ವೀರೇಶ್ ಎಂಬಾತನ ಜೊತೆ ಹಜರತ್ ಎಂಬಾಕೆ ವಿವಾಹವಾಗಿದ್ದರು. ಬಳಿಕ ಯಶೋದಾ ಎಂದು ಹೆಸರು ಬದಲಿಸಿಕೊಂಡು ಜೀವನ ನಡೆಸುತ್ತಿದ್ದರು. ವೀರೇಶ್-ಯಶೋದಾ ದಂಪತಿ ಪುತ್ರಿಯಾದ 21 ವರ್ಷದ ರೇಷ್ಮಾ ಕೆಲವು ದಿನಗಳ ಹಿಂದೆ ನಿಶ್ಚಿತಾರ್ಥವಾದ ಬಳಿಕ ಚಿನ್ನಾಭರಣದೊಂದಿಗೆ ದಿಢೀರನೆ ಪರಾರಿಯಾಗಿದ್ದಳು. ಈಕೆ ಅಕ್ಬರ್ ಎಂಬಾತನ ಜೊತೆ ಓಡಿಹೋಗಿರುವುದುಪತ್ತೆಯಾಗಿತ್ತು.
ಹಜರತ್ ಯಾನೆ ಯಶೋದಳ ಅಕ್ಕನ ಮಗ ಅಕ್ಬರ್ ಈಕೆಯನ್ನು ಪ್ರೀತಿಸಿ ಕರೆದೊಯ್ದಿದ್ದಾನೆ. ತವರು ಮನೆಯವರು ಯಶೋದಳ ಲವ್ ಮ್ಯಾರೇಜ್‌ಗೆ ಆಕೆಯ ಮಗಳನ್ನೇ ಮತ್ತೆ ಮುಸ್ಲಿಂ ಧರ್ಮದವನ ಜೊತೆ ವಿವಾಹ ಮಾಡಿಸಿ ಪ್ರತೀಕಾರ ತೀರಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪೊಲೀಸರು ಈ ಜೋಡಿಯನ್ನು ಪತ್ತೆಮಾಡಿದಾಗ ಇಬ್ಬರೂ ಪ್ರಾಯಕ್ಕೆ ಬಂದವರು ಎಂದು ಅವರನ್ನು ಬಿಟ್ಟು ಬಿಟ್ಟಿದ್ದಾರೆ.
ಆದರೆ, ಇದೊಂದು ಲವ್ ಜಿಹಾದ್ ಪ್ರಕರಣವಾಗಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿಂದೂ ಸಂಘಟನೆ ಳಗಳು ಒತ್ತಾಯಿಸಿವೆ.