ಅಂಕತ್ತಡ್ಕ : ಹಣ ತಂದು ಕೊಡುವಂತೆ ಪತ್ನಿಗೆ ಮಾನಸಿಕ, ದೈಹಿಕ ಕಿರುಕುಳ,ಹಲ್ಲೆ | ಮಗಳಿಗೂ ಕಿರುಕುಳ ,ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು
ಸವಣೂರು : ವ್ಯಕ್ತಿಯೋರ್ವ ತನ್ನ ಮೊದಲ ಪತ್ನಿಗೆ ಹಣ ತಂದು ಕೊಡುವಂತೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನಡೆಸಿ ಹಲ್ಲೆ ಹಾಗೂ ಅಪ್ರಾಪ್ತ ಮಗಳಿಗೂ ಕಿರುಕುಳ ನೀಡಿದ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ಪಾಲ್ತಾಡಿ ಗ್ರಾಮದ ಅಂಕತ್ತಡ್ಕದ ನಸೀಮ ಎಂಬವರು ಅಬ್ದುಲ್ ಕುಂಞ ಎಂಬವರ ವಿರುದ್ದ ದೂರು ನೀಡಿದ್ದಾರೆ.
ನಸೀಮಾ ಅವರು ಅಬ್ದುಲ್ ಕುಂಞ ಎಬಾತನ ಜನರೆ 23 ವರ್ಷಗಳ ಹಿಂದ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದು ಅಬ್ದುಲ್ ಕುಂಞಯವರು ಸುಮಾರು ವರ್ಷಗಳಿಂದ ಅಮಲು ಪದಾರ್ಥ ಸೇವಿಸಿಕೊಂಡು ಬಂದು ನಸೀಮಾರಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದು, ಮದುವೆಯ ಸಮಯದಲ್ಲಿ ಪತ್ನಿಯ ತವರಿನಿಂದ ನೀಡಿದ ಹಣ ಮತ್ತು 40 ಪವನ್ ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದಲ್ಲದೆ, ಆರೋಪಿ ಅಬ್ದುಲ್ ಕುಂಞಯು ಮೊದಲ ಪತ್ನಿಯ ಗಮನಕ್ಕೆ ಬಾರದೇ 2ನೇ ವಿವಾಹವಾಗಿದ್ದಾರೆ.
ಇದೀಗ ನಸೀಮಾರ ಹೆಸರಿನಲ್ಲಿರುವ ಮನೆ ಮತ್ತು ಜಮೀನನ್ನು ಮಾರಾಟ ಮಾಡಿ ಅಥವಾ ತವರಿನಿಂದ 12 ಲಕ್ಷ ರೂಪಾಯಿ ತಂದು ನೀಡುವಂತೆ ಪೀಡಿಸಿ ತಲೆಗೆ ಹೊಡೆದಿದ್ದು,ಅಶ್ಲೀಲ ಶಬ್ದಗಳಿಂದ ಬೈದು ಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.
ಅಲ್ಲದೆ ಆಕೆಯ ಅಪ್ರಾಪ್ತ ವಯಸ್ಸಿನ ಮಗಳ ಕುರಿತು ನೀನು ಶಾಲೆಗೆ ಹೋಗುವುದು ಬೇಡ, ಅನ್ಯ ಪುರುಷರಿಗೆ ಮೆಸೇಜ್ ಮಾಡು ಎಂದು ಬೈದು ದೈಹಿಕ ಹಲ್ಲೆ ನಡೆಸಿದ್ದು ಈ ಕುರಿತು ಠಾಣೆಯಲ್ಲಿ ಪೋಕ್ಸೋ ಸಹಿತ ಇತರ ಕೇಸು ದಾಖಲಾಗಿದೆ.