ಹಾಸನದಲ್ಲಿ ರಸ್ತೆ ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲು ನೆರವಾದ ನಳಿನ್ ಕುಮಾರ್

Share the Article

ಹಾಸನ : ರಾಜ್ಯ ಪ್ರವಾಸದಿಂದ ಮರಳಿ ಮಂಗಳೂರಿಗೆ ಬರುವಾಗ ಹಾಸನ ಬಳಿಯಲ್ಲಿ ರಸ್ತೆ ಅಪಘಾತದಲ್ಲಿ ಸಿಲುಕಿದ್ದ ಸಾರ್ವಜನಿಕರನ್ನು ಸುರಕ್ಷಿತವಾಗಿ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲು ಭಾಜಪಾ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ನೆರವಾದರು.

ಪಕ್ಷ ಸಂಘಟನೆಯ ಕುರಿತಾಗಿ ಬೆಂಗಳೂರಿನಲ್ಲಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಅಲ್ಲಿಂದ ಹಾಸನ ಮಾರ್ಗವಾಗಿ ಮಂಗಳೂರಿಗೆ ಬರುವಾಗ ಹಾಸನದಲ್ಲಿ ರಸ್ತೆ ಅಪಘಾತದಿಂದ ಗಾಯಾಳುಗಳಾಗಿದ್ದವರನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಲು ನೆರವಾದರು.

Leave A Reply