‘ಕೆಣಕಿದ ಯುವಕನನ್ನು ಬೆನ್ನಟ್ಟಿದ ಹುಂಜ’ ಏನೀ ವಿಚಿತ್ರವಯ್ಯಾ? | ನಕ್ಕು ಹೊಟ್ಟೆ ಹುಣ್ಣಾಗಿಸುವ ಈ ವಿಡಿಯೋ ಫುಲ್ ವೈರಲ್ !!
ಈಗಿನ ಕಾಲದಲ್ಲಿ ಮನೋರಂಜನೆಗಳಿಗೇನು ಕಮ್ಮಿಯಿಲ್ಲ. ಸಾಮಾಜಿಕ ಜಾಲತಾಣಗಳು ಯಾವಾಗಲೂ ಒಂದಿಲ್ಲೊಂದು ವಿಷಯದಲ್ಲಿ ನಮ್ಮನ್ನು ಸೆಳೆಯುತ್ತಲೇ ಇರುತ್ತದೆ. ದಿನಪೂರ್ತಿ ಇವುಗಳಲ್ಲಿ ಮುಳುಗಿದ್ದರೂ ಸಹ ಮುಗಿಯದಷ್ಟು ವಿಡಿಯೋಗಳು, ಮೇಮ್ಸ್ ಗಳು ತುಂಬಿ ತುಳುಕುತ್ತಿರುತ್ತವೆ.
ಹಾಗೆಯೇ ಸಾಮಾಜಿಕ ಜಾಲಾತಾಣದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತದೆ. ಕೆಲವೊಂದು ಮನರಂಜನೆ ನೀಡಿದರೆ ಇನ್ನು ಕೆಲವೊಂದು ಕೋಪ ತರಿಸುತ್ತದೆ. ಆದರೆ ಹೆಚ್ಚಿನ ವಿಡಿಯೋಗಳು ನಗು ತರಿಸುವುದು ಸುಳ್ಳಲ್ಲ. ಕೆಲವೊಂದು ದೃಶ್ಯಗಳು ಬಹಳ ಹೊತ್ತು ನಮ್ಮನ್ನ ನಗೆಗಡಲಲ್ಲಿ ತೇಲಿಸುತ್ತದೆ. ಇಂಥಹುದೆ ವಿಡಿಯೋ ಒಂದು ವೈರಲ್ ಆಗಿದ್ದು, ಇದೀಗ ನೆಟ್ಟಿಗರ ಮನಗೆದ್ದಿದೆ.
ಸಾಮಾನ್ಯವಾಗಿ ಮನುಷ್ಯರು ಪ್ರಾಣಿಗಳನ್ನು ಆಟವಾಡಿಸುವುದನ್ನು ಹಾಗೂ ತೊಂದರೆ ಮಾಡಲು ಬಂದಾಗ ಓಡಿಸಿಕೊಂಡು ಹೋಗುವುದನ್ನು ನೋಡಿರುತ್ತೇವೆ. ಆದರೆ ಇಲ್ಲಿ ಸಣ್ಣ ಹುಂಜವೊಂದು ಯುವಕನನ್ನು ಬೆನ್ನಟ್ಟಿ ಹೋಗಿದ್ದು, ಎಲ್ಲರ ಮುಖದಲ್ಲಿ ನಗು ಮೂಡಿಸಿದೆ. ಕಾಟ ಕೊಡುತ್ತಿದ್ದ ಯುವಕನೊಬ್ಬನನ್ನು ಹುಂಜ ಬೆನ್ನಟ್ಟಿಕೊಂಡು ಹೋಗಿದ್ದು, ಹುಂಜಗಳು ಸಹ ಅಪಾಯಕಾರಿ ಎಂಬುದನ್ನು ತೋರಿಸಿದೆ.
ಸಾಮಾನ್ಯವಾಗಿ ಮನುಷ್ಯ ನಾಯಿ ಮತ್ತು ಬೆಕ್ಕಿನ ಜೊತೆ ಆಟವಾಡುತ್ತಾನೆ. ಅದಕ್ಕೆ ಕಾಟ ಕೊಡುವುದು, ಹೀಗೆ ತಮಾಷೆ ಮಾಡುವುದು ಸಹ ಅವುಗಳೊಂದಿಗೆ. ಆದರೆ ಹೆಚ್ಚಿನ ಸಮಯದಲ್ಲಿ ಅವುಗಳು ಸಹ ಪೂರಕವಾಗಿ ಸ್ಪಂದನೆ ನೀಡುತ್ತವೆ. ಇಂಥಹ ವಿಡಿಯೋ ಕೂಡ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗುತ್ತವೆ, ಜನ ಅವುಗಳನ್ನು ನೋಡಿ ಅವುಗಳ ಮುದ್ದು ಮುಖಕ್ಕೆ ಮನಸೋಲುತ್ತಾರೆ. ಆದರೆ ಅತಿಯಾಗಿ ಕಾಡಿಸಿದರೆ ಯಾರೂ ಸುಮ್ಮನಿರುವುದಿಲ್ಲ ಎಂಬುದಕ್ಕೆ ಈ ವಿಡಿಯೋ ಉತ್ತಮ ಉದಾಹರಣೆ.
ತನ್ನ ಪಾಡಿಗೆ ತಾನು ಸುಮ್ಮನಿದ್ದ ಹುಂಜಕ್ಕೆ ಯುವಕನೊಬ್ಬ ಕಾಟ ಕೊಡುತ್ತಿದ್ದ. ಅದಕ್ಕೆ ಕೋಲನ್ನು ತೆಗೆದುಕೊಂಡು ಹೊಡೆಯುವಂತೆ ಮಾಡುತ್ತಿದ್ದ, ಆದರೆ ಸುಮಾರು ಸಮಯ ಗಮನಿಸಿದ ಆ ಹುಂಜ ಆತನ ವಿರುದ್ಧವೇ ತಿರುಗಿ ಬಿದ್ದಿದ್ದು ಮಾತ್ರ ಯುವಕನನ್ನು ದಂಗು ಬಡಿಸಿತ್ತು. ಇನ್ನು ನಂತರದ ದೃಶ್ಯ ಮಾತ್ರ ನಿಜಕ್ಕೂ ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತದೆ.
ಯುವಕನೊಬ್ಬ ಹುಂಜದ ಪಕ್ಕ ನಿಂತು ಕೋಲಿನಲ್ಲಿ ಹೊಡೆಯುವಂತೆ ಮಾಡುವ ದೃಶ್ಯದ ಮೂಲಕ 8 ಸೆಕೆಂಡಿನ ಈ ವಿಡಿಯೋ ಆರಂಭವಾಗುತ್ತದೆ. ಯುವಕ ತನಗೆ ಹೊಡೆಯಲು ಕೋಲು ಬೀಸುತ್ತಿದ್ದಂತೆಯೇ ಈ ಹುಂಜ ಆತನನ್ನು ಬೆನ್ನಟ್ಟಿಕೊಂಡು ಬಂದಿದೆ. ಹೀಗಾಗಿ, ಈ ಯುವಕ ಭಯದಲ್ಲಿ ಕಿರುಚಿಕೊಂಡು ಓಡುತ್ತಾನೆ. ಆತ ಓಡಿರುವ ರೀತಿ ಎಲ್ಲರಲ್ಲೂ ನಗು ತರಿಸುತ್ತದೆ. ಅಲ್ಲದೇ ಆತ ಓಡಿರುವ ರಭಸಕ್ಕೆ ಹತ್ತಿರವಿದ್ದ ಸಣ್ಣ ಮರದ ಕೊಂಬೆಗಳು ಸಹ ಮುರಿದು ಬೀಳುವ ಹಾಗೂ ಆತ ಹುಂಜದಿಂದ ತಪ್ಪಿಸಿಕೊಳ್ಳಲು ಪರದಾಡುವ ದೃಶ್ಯ ಪ್ರತಿಯೊಬ್ಬರನ್ನು ನಗಿಸುತ್ತದೆ.
ಇನ್ನು ಈ ವಿಡಿಯೋ ಸಹಜವಾಗಿಯೇ ಈಗ ನೆಟ್ಟಿಗರ ಗಮನ ಸೆಳೆದಿದ್ದು, ಸಾಮಾಜಿಕ ಜಾಲಾತಾಣದಲ್ಲಿ ಹೆಚ್ಚಿನ ಜನರು ಶೇರ್ ಮಾಡಿಕೊಂಡಿದ್ದಾರೆ. ಈಗಾಗಲೇ ಈ ವಿಡಿಯೋಗೆ ಹೆಚ್ಚು ಲೈಕ್ಸ್ ಸಹ ಬಂದಿದ್ದು, ಜನರು ಕಾಮೆಂಟ್ ಕೂಡ ಮಾಡುತ್ತಿದ್ದಾರೆ. ಜನರು ಈ ವಿಡಿಯೋವನ್ನು ಮತ್ತೆ ಮತ್ತೆ ನೋಡುತ್ತಿದ್ದು, ವಿಡಿಯೋ ಬಗ್ಗೆ ಸಾಕಷ್ಟು ತಮಾಷೆಯ ಕಾಮೆಂಟ್ಗಳನ್ನು ಮಾಡುತ್ತಿದ್ದಾರೆ. ಒಬ್ಬ ಬಳಕೆದಾರರು ಇದು ಖಂಡಿತವಾಗಿಯೂ ಅಫ್ಘಾನಿ ಪಠಾಣ್ ಆಗಿರುತ್ತದೆ ಎಂದು ಬರೆದರೆ, ಅದೇ ಸಮಯದಲ್ಲಿ, ಇನ್ನೊಬ್ಬ ಬಳಕೆದಾರರು ಚಿಕನ್ ಅಟ್ಯಾಕ್ ಎಂದು ಬರೆದಿದ್ದಾರೆ.
ಈ ವೀಡಿಯೊವನ್ನು ಈ ಹಿಂದೆ @TheGreatGujjar ಹೆಸರಿನ ಟ್ವಿಟರ್ ಪುಟದಲ್ಲಿ ಹಂಚಿಕೊಳ್ಳಲಾಗಿತ್ತು. ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ಅವರು ಕೂಡಾ ಈ ವಿಡಿಯೋವನ್ನು ರೀಟ್ವೀಟ್ ಮಾಡಿದ್ದಾರೆ. ಜೊತೆಗೆ, ಹಲವರು ವಾಟ್ಸಾಪ್ ಸ್ಟೇಟಸ್ ಆಗಿಯೂ ಈ ದೃಶ್ಯವನ್ನು ಬಳಕೆ ಮಾಡುತ್ತಿದ್ದಾರೆ.