ಹುಡುಗಿಯರ ಆ ಬಟ್ಟೆಗಳು ಹುಡುಗರನ್ನು ಹಾಳುಮಾಡುತ್ತವೆ!!ಸಮವಸ್ತ್ರ ಧರಿಸದೆ ಶಾಲೆಗೆ ಬಂದ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಲು ಹೇಳಿದ ಮುಖ್ಯ ಶಿಕ್ಷಕ

Share the Article

ಶಾಲೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಮಾನರೆಂದು ಕಾಣಲು ಸಮವಸ್ತ್ರ ಅತ್ಯಗತ್ಯ. ಅದಕ್ಕೆಂದೇ ಸರ್ಕಾರ ಈ ಸಮವಸ್ತ್ರ ತೊಡುಗೆಯ ಕಾನೂನನ್ನು ರೂಪಿಸಿದ್ದು, ಸದ್ಯ ಎಲ್ಲಾ ಶಾಲೆಗಳಲ್ಲಿ ಸಮವಸ್ತ್ರಗಳಿಂದ ವಿದ್ಯಾರ್ಥಿಗಳು ಕಂಗೊಳಿಸುತ್ತಿದ್ದಾರೆ. ಆದರೆ ಅದೇ ಸಮವಸ್ತ್ರ ಧರಿಸದೇ ಶಾಲೆಗೆ ಬಂದರೆ ಯಾವ ಕ್ರಮ ಕೈಗೊಳ್ಳುವುದೆಂಬ ಅರಿವಿಲ್ಲಿದ ಮತಿಗೆಟ್ಟ ಶಾಲಾ ಮುಖ್ಯಶಿಕ್ಷಕನೋರ್ವ ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚುವಂತೆ ತಾಕಿತು ಮಾಡಿದ್ದು ಎಲ್ಲೆಡೆಯಿಂದಲೂ ಆಕ್ರೋಶ ವ್ಯಕ್ತವಾಗಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕಾರಣವೂ ದಾಖಲಾಗಿದೆ.

ಇಂತಹದೊಂದು ಘಟನೆ ಮಧ್ಯಪ್ರದೇಶದ ರಾಜಗರ್ ಜಿಲ್ಲೆಯ ಸರ್ಕಾರಿ ಶಾಲೆಯಲ್ಲಿ ನಡೆದಿದ್ದು, ಹುಡುಗಿಯರ ಬಣ್ಣಬಣ್ಣದ ಉಡುಪುಗಳು ಹುಡುಗರನ್ನು ಹಾಳುಮಾಡುತ್ತವೆ ಎಂಬ ನೆಪವೊಡ್ಡಿ, ಸಮವಸ್ತ್ರ ಧರಿಸದೇ, ಕಲರ್ ಬಟ್ಟೆಯಲ್ಲಿ ಬಂದಿದ್ದ ವಿದ್ಯಾರ್ಥಿನಿಯರ ಬಟ್ಟೆ ತೆಗೆಯಲು ಹೇಳಿದ್ದಾರೆ ಎಂದು ವಿದ್ಯಾರ್ಥಿನಿಯರು ಠಾಣೆ ಮೆಟ್ಟಿಲೇರಿದ್ದಾರೆ,ಸದ್ಯ ಮುಖ್ಯಶಿಕ್ಷಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಈ ಕುರಿತ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

Leave A Reply