ನಾಣ್ಯ ನುಂಗಿದ ಮಗು ಸಾವು | ಚಿಕಿತ್ಸೆಗೆ ಸ್ಪಂದಿಸದೆ ಪ್ರಾಣಬಿಟ್ಟ 4 ವರ್ಷದ ಖುಷಿ

Share the Article

ಮೈಸೂರು : 5 ರೂಪಾಯಿ ನಾಣ್ಯ ನುಂಗಿ ಆಸ್ಪತ್ರೆಗೆ ದಾಖಲಾಗಿದ್ದ ಮಗು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಆಯರಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹುಣಸೂರು ತಾಲೂಕಿನ ಬಿಳಿಕೆರೆಯ ಆಯರಹಳ್ಳಿಯ ನಾಲ್ಕು ವರ್ಷದ ಖುಷಿ ಮೃತ ಬಾಲಕಿ.

ಈಕೆ ಮೈಸೂರಿನ ಹಿರಿಕ್ಯಾತನಹಳ್ಳಿಯ ಅಜ್ಜಿ ಮನೆಯಲ್ಲಿದ್ದು, ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ 5 ರೂ‌. ನಾಣ್ಯ ನುಂಗಿದ್ದಾಳೆ.

ಮಗುವನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ನಂತರ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ವೇಳೆಯೇ ಮಗು ಕೊನೆಯುಸಿರೆಳೆದಿದೆ.

Leave A Reply