ಸವಣೂರು,ಆಲಂಕಾರು,ಉಪ್ಪಿನಂಗಡಿ,ಆರ್ಯಾಪು,ಕಬಕ ಗ್ರಾ.ಪಂ.ಅಮೃತ ಗ್ರಾಮ ಪಂಚಾಯತ್ ಯೋಜನೆಗೆ ಆಯ್ಕೆ

ಸವಣೂರು : ಕಡಬ ತಾಲೂಕಿನ ಸವಣೂರು,ಆಲಂಕಾರು, ಪುತ್ತೂರು ತಾಲೂಕಿನ ಉಪ್ಪಿನಂಗಡಿ,ಆರ್ಯಾಪು,ಕಬಕ ಗ್ರಾ.ಪಂ.ಗಳು ಅಮೃತ ಗ್ರಾಮ ಪಂಚಾಯತ್ ಯೋಜನೆಗೆ ಆಯ್ಕೆಯಾಗಿದೆ.

ಜಿ.ಪಂ.ಸಭಾಂಗಣದಲ್ಲಿ ಉಸ್ತುವಾರಿ ಸಚಿವ ಎಸ್.ಅಂಗಾರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಆಯ್ಕೆ ಮಾಡಲಾಗಿದೆ.

ಸಭೆಯಲ್ಲಿ ಶಾಸಕರಾದ ಭರತ್ ಶೆಟ್ಟಿ, ರಾಜೇಶ್ ನಾಯ್ಕ್,ಜಿ.ಪಂ.ಸಿಇಓ ಡಾ.ಕುಮಾರ್,ಉಪಕಾರ್ಯದರ್ಶಿ ಆನಂದ್ ಕುಮಾರ್ ಉಪಸ್ಥಿತಿಯಲ್ಲಿ ಈ ಆಯ್ಕೆ ಮಾಡಲಾಯಿತು.

ಯೋಜನೆಯ ಆಶಯಗಳು

*ಬೀದಿ ದೀಪಗಳ ಅಳವಡಿಕೆ

*ಪ್ರತಿ ಮನೆಗೆ ಕುಡಿಯುವ ನೀರಿನ ನಳ ಸಂಪರ್ಕ ಕಲ್ಪಿಸುವುದು

*ಶೇ 100 ರಷ್ಟು ಘನ ತ್ಯಾಜ್ಯ ವಿಂಗಡಣೆ ಹಾಗೂ ವಿಲೇವಾರಿ

*ತ್ಯಾಜ್ಯ ನೀರು ವೈಜ್ಞಾನಿಕವಾಗಿ ನಿರ್ವಹಿಸುವುದು

*ಗ್ರಾಮ ಪಂಚಯತ್ ಕಟ್ಟಡಗಳಿಗೆ ಸೌರ ವಿದ್ಯುತ್ ಅಳವಡಿಕೆ

*ಅಮೃತ್ ಉದ್ಯಾನವನಗಳ ನಿರ್ಮಾಣ.

*ಗ್ರಾಮ ಪಂಚಾಯತ್ ಗ್ರಂಥಾಲಯಗಳ ಡಿಜಿಟಲೀಕರಣ ಗೊಳಿಸುವುದು

*ಶಾಲೆಗಳು ಅಂಗನವಾಡಿಗಳಿಗೆ ಕುಡಿಯುವ ನೀರು, ಶೌಚಾಲಯ, ಶಾಲೆಗಳಲ್ಲಿ ಆಟದ ಮೈದಾನ ಹಾಗೂ ಅವರಣ ಗೋಡೆ ನಿರ್ಮಿಸುವುದು

*ಕೆರೆ ಮತ್ತು ಕಲ್ಯಾಣಿಗಳ ಪುನಶ್ಚೇತನ

*ಮನೆ ಮನೆಗಳಿಗೆ ನಳ ಸಂಪರ್ಕ

*ಬೀದಿ ದೀಪಗಳು/ಸೋಲಾರ್ ದೀಪಗಳು

*ಉದ್ಯಾನವನ

*ಶಾಲಾ ಕೊಠಡಿಗಳ ನಿರ್ಮಾಣ/ದುರಸ್ತಿ

*ಶಾಲೆ/ಅಂಗನವಾಡಿಗಳಲ್ಲಿ ಕುಡಿಯುವ ನೀರು, ಶೌಚಾಲಯಗಳು, ಆಟದ ಮೈದಾನ ಆವರಣ ಗೋಡೆಗಳ ನಿರ್ಮಾಣ

*ಗ್ರಾಮ ಪಂಚಾಯತ್ ಡಿಜಿಟಲ್ ಲೈಬ್ರೆರಿ

  • ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಯೋಜನೆ

Leave A Reply

Your email address will not be published.