ಮಂಗಳೂರು | ಬಿರಿಯಾನಿ ಪಾರ್ಸೆಲ್ ಜೊತೆ ಪ್ಲೇಟ್ ಗೆ ಬೇಡಿಕೆಯಿಟ್ಟ ಗ್ರಾಹಕ | ಚಾರ್ಜ್ ಆಗುತ್ತದೆ ಎಂದು ಹೇಳಿದ್ದಕ್ಕೆ ಹೋಟೆಲ್ ಮಾಲೀಕನಿಗೆ ಹಲ್ಲೆ ನಡೆಸಿ, ಕೈ ಕಚ್ಚಿದ !!

ಹೋಟೆಲ್ ನಿಂದ ಫುಡ್ ಆರ್ಡರ್ ಮಾಡಿದ ವ್ಯಕ್ತಿಯೊಬ್ಬ ಅದರ ಜತೆಗೆ ಪ್ಲೇಟ್ ನೀಡುವಂತೆ ಕೇಳಿದ್ದು, ಅದಕ್ಕೆ ಚಾರ್ಜ್ ಆಗುತ್ತದೆ ಎಂದು ಹೇಳಿದಕ್ಕೆ ಗ್ರಾಹಕ ಹೋಟೆಲ್ ಮಾಲೀಕನ ಮೇಲೆಯೇ ಹಲ್ಲೆ ನಡೆಸಿರುವ ಘಟನೆ ಬೆಂದೂರ್‌ವೆಲ್‌ನಲ್ಲಿ ನಡೆದಿದೆ.

 

ನಗರದ ಬೆಂದೂರ್‌ವೆಲ್‌ನ ಅಬ್ದುಲ್ ರಶೀದ್
ಎಂಬುವವರು ಹಲ್ಲೆಗೊಳಗಾದ ಹೋಟೆಲ್ ಮಾಲೀಕ. ಅಬೂಬಕರ್ ಎಂಬ ಗ್ರಾಹಕ ಹೋಟೆಲ್‌ಗೆ ಬಂದು ಬಿರಿಯಾನಿ ಪಾರ್ಸೆಲ್ ಆರ್ಡರ್ ಮಾಡಿದ್ದಾನೆ. ಅದರ ಜೊತೆಗೆ ಖಾಲಿ ಪ್ಲೇಟ್ ನೀಡುವಂತೆ ಕೇಳಿದ್ದಾನೆ.

ಆದರೆ, ಆ ಪ್ಲೇಟ್‌ಗೆ ಚಾರ್ಜ್ ಮಾಡುವುದಾಗಿ
ಅಬ್ದುಲ್ ರಶೀದ್ ಹೇಳಿದ್ದಾರೆ. ಇದರಿಂದ ಕೋಪಗೊಂಡ ಆತ ಮರದ ಮಣೆಯಿಂದ ಮಾಲೀಕನಿಗೆ ಹೊಡೆದಿದ್ದಾನೆ.
ಮಾಲೀಕನ ಮೇಲಿನ ಹಲ್ಲೆ ತಡೆಯಲು ಬಂದ
ಮ್ಯಾನೇಜರ್‌ನ ಕೈಯನ್ನು ಅಬೂಬಕರ್ ಕಚ್ಚಿದ್ದಾನೆ. ಅಲ್ಲದೆ ಆರೋಪಿ ಸುಮಾರು 10 ಸಾವಿರ ಮೌಲ್ಯದ ವಸ್ತುಗಳಿಗೆ ಹಾನಿ ಮಾಡಿದ್ದಾನೆ ಎಂದು ಹೊಟೇಲ್ ಮಾಲಕರು ದೂರಿದ್ದಾರೆ.

ಈ ಬಗ್ಗೆ ಮಂಗಳೂರು ಪೂರ್ವ (ಕದ್ರಿ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.