ಮೈಸೂರು : ಯುವತಿ-ಯುವಕನ ರಂಗಿನಾಟ ಬಯಲಾಗುವ ಆತಂಕ | ಅತ್ಯಾಚಾರ ಕಥೆ ಕಟ್ಟಿದ ಹಾಸ್ಟೆಲ್‌ನಲ್ಲಿದ್ದ ಯುವತಿ

Share the Article

ಮೈಸೂರಿನಲ್ಲಿ ಹಾಸ್ಟೆಲ್ ‌ನಲ್ಲಿದ್ದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಯತ್ನ, ಹಲ್ಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಇದೊಂದು ಅತ್ಯಾಚಾರ ಯತ್ನವೇ ಅಲ್ಲ, ಪ್ರೇಮ ಪ್ರಕರಣ ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಿದೆ.

28 ವರ್ಷದ ಯುವತಿಗೂ 21 ವರ್ಷದ ಆರೋಪಿಗೂ ಮೊದಲೇ ಪರಿಚಯವಾಗಿತ್ತು. ಯುವಕ ಮತ್ತು ಯುವತಿ ನಡುವೆ ತುಂಬಾ ಸಲುಗೆ ಇದ್ದ ಕಾರಣ ಆರೋಪಿಯನ್ನು ಯುವತಿಯೇ ಹಾಸ್ಟೆಲ್‌ಗೆ ಕರೆಸಿಕೊಂಡಿದ್ದಳು.

ಯಾರೂ ಇಲ್ಲದ ವೇಳೆ ಈ ಇಬ್ಬರೂ ಪ್ರೇಮಿಗಳು ಹಾಸ್ಟೆಲ್‌ನಲ್ಲಿ ಒಟ್ಟಿಗೆ ಇರುತ್ತಿದ್ದರು. ಆದರೆ, ಸಹಪಾಠಿಗಳು ಬಂದ ಕೂಡಲೇ ಯುವಕ ಪರಾರಿಯಾಗಿದ್ದಾನೆ. ಕ್ರೈಸ್ತ ಸಮುದಾಯದವರ ಹಾಸ್ಟೆಲ್ ಆಗಿರುವುದರಿಂದ ಹಿರಿಯರಿಗೆ ಗೊತ್ತಾದರೆ ಮುಂದೆ ತೊಂದರೆ ಆಗುತ್ತದೆ ಎಂದು ಪೊಲೀಸ್ ಕೇಸ್ ದಾಖಲಿಸಿದ್ದಾರೆ.

ಪ್ರಕರಣ ದಾಖಲಿಸುವುದಕ್ಕಾಗಿ ಯುವತಿಯೇ ಅತ್ಯಾಚಾರ ಯತ್ನ ಹಾಗೂ ಹಲ್ಲೆಯ ಕತೆಯನ್ನು ಹೆಣೆದಿದ್ದಾಳೆ. ನಾನು ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ, ನೀನು ತಪ್ಪಿಸಿಕೋ ಎಂದು ಮೊದಲೇ ಆರೋಪಿಗೆ ಯುವತಿ ಸುಳಿವು ಕೊಟ್ಟಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರಿಗೆ ಇಬ್ಬರ ಕಾಲ್ ಲೀಸ್ಟ್ ಮತ್ತು ಗ್ರೂಪ್ ಮೆಸೇಜ್ ಲೀಸ್ಟ್ ನೋಡಿದಾಗ ಇಬ್ಬರ ರಂಗಿನಾಟ ಬಯಲಾಗಿದೆ.

Leave A Reply