ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಕಟ್ಟುನಿಟ್ಟಾಗಿ ಪಾಲಿಸುವಂತೆ ಎ.ಸಿ.ಡಾ.ಯತೀಶ್ ಉಳ್ಳಾಲ್ ಸೂಚನೆ
ಪುತ್ತೂರು ಉಪ ವಿಭಾಗದ ಎಲ್ಲಾ ತಾಲೂಕುಗಳಲ್ಲಿ ವೀಕೆಂಡ್ ಕರ್ಫ್ಯೂ ಮತ್ತು ನೈಟ್ ಕರ್ಪ್ಯೂ ಕಟ್ಟು ನಿಟ್ಟಾಗಿ ಪಾಲಿಸುವಂತೆ ,ತಪ್ಪಿದಲ್ಲಿ ದಂಡ,ಕಠಿಣ ಕ್ರಮ ಕೈಗೊಳ್ಳುವಂತೆ ಪುತ್ತೂರು ಸಹಾಯಕ ಕಮೀಷನರ್ ಡಾ.ಯತೀಶ್ ಉಳ್ಳಾಲ್ ಸೂಚಿಸಿದ್ದಾರೆ.
ವೀಕೆಂಡ್ ಕರ್ಪ್ಯೂ ಮತ್ತು ನೈಟ್ ಕರ್ಪ್ಯೂ ಯಿಂದ ವ್ಯಾಪಾರ ವ್ಯವಹಾರಕ್ಕೆ ಮತ್ತು ಸಾರ್ವಜನಿಕ ಸಂಚಾರಕ್ಕೆ ತೊಂದರೆ ಉಂಟಾಗುವುದರಿಂದ ವೀಕೆಂಡ್ ಕರ್ಪ್ಯೂ ಮತ್ತು ನೈಟ್ ಕರ್ಪ್ಯೂ ವನ್ನು ಪ್ರೋತ್ಸಾಹಿಸುವುದಿಲ್ಲ ಎಂಬುದಾಗಿ ಪುತ್ತೂರು ವರ್ತಕರ ಸಂಘ, ಮತ್ತಿತರ ಸಂಘಟನೆಯವರು ತಿಳಿಸಿರುತ್ತಾರೆ.
ವೀಕೆಂಡ್ ಕರ್ಪ್ಯೂ ಸಡಿಲಗೊಳಿಸಿ ವ್ಯಾಪಾರ ವಹಿವಾಟು, ಸಾರ್ವಜನಿಕ ಸಂಚಾರ , ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಾರಂಭಿಸಿದಲ್ಲಿ ಸಾರ್ವಜನಿಕವಾಗಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುವ ಸಂಭವ ಇರುವುದರಿಂದ ಮಾನ್ಯ ಜಿಲ್ಲಾಧಿಕಾರಿಯವರು ಹಾಗೂ ಜಿಲ್ಲಾ ದಂಡಾಧಿಕಾರಿಯವರು ಮುಂದಿನ ಆದೇಶದವರೆಗೆ ಪ್ರತೀ ಶನಿವಾರ ಹಾಗೂ ಭಾನುವಾರದಂದು ವೀಕೆಂಡ್ ಕರ್ಪ್ಯೂ ಮತ್ತು ನೈಟ್ ಕರ್ಪ್ಯೂ ನಿಯಮಾವಳಿಯಂತೆ ಜಾರಿಗೊಳಿಸಿದ್ದಾರೆ.
ವರ್ತಕರ ಸಂಘದವರು ಹಾಗೂ ಇನ್ನಿತರೇ ವ್ಯಾಪಾರಸ್ಥರು , ಸಾರ್ವಜನಿಕರು, ನಿಯಮಾವಳಿಗಳನ್ನು ಮೀರಿ ಕಾನೂನು ಉಲ್ಲಂಘನೆ ಮಾಡಿ ವ್ಯಾಪಾರ ವಹಿವಾಟು ನಡೆಸಿದಲ್ಲಿ ಕಟ್ಟುನಿಟ್ಟಿನ ಕ್ರಮ ಹಾಗೂ ದಂಡ ವಿಧಿಸುವಂತೆ ಎಲ್ಲಾ ತಾಲೂಕಿನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಆದ್ದರಿಂದ ಈ ಕುರಿತು ತಮ್ಮ ತಮ್ಮ ಅಧಿಕಾರ ವ್ಯಾಪ್ತಿಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪುತ್ತೂರು,ಕಡಬ,ಸುಳ್ಯ,ಬೆಳ್ತಂಗಡಿ ತಾಲೂಕಿನ ಅಧಿಕಾರಿಗಳಿಗೆ ಸೂಚಿಸಿದ್ದಾರೆ.