ಸುಳ್ಯದ ವಿವಾಹಿತೆ ಇಬ್ಬರು ಮಕ್ಕಳೊಂದಿಗೆ ನಾಪತ್ತೆ | ಪುತ್ತೂರಿನ ಯುವಕನ ಜತೆ ಪರಾರಿ ಶಂಕೆ?

ಸುಳ್ಯದ ಜಯನಗರದ ವಿವಾಹಿತ ಮಹಿಳೆ ತನ್ನ ಇಬ್ಬರು ಮಕ್ಕಳೊಂದಿಗೆ ಪರಾರಿಯಾಗಿದ್ದಾರೆ ಎಂದು ಪತಿ ಮತ್ತು ಮನೆಯವರು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

 

ಪತ್ನಿಯ ಪರಿಚಿತ ಪುತ್ತೂರಿನ ಯುವಕ ನೊಂದಿಗೆ ಆಕೆ ಪರಾರಿಯಾಗಿರಬಹುದು ಎಂದು ದೂರಿನಲ್ಲಿ ಶಂಕಿಸಲಾಗಿದೆ.

ಜಯನಗರದ ಕೊಯಿಂಗೋಡಿ ಸಮೀಪದ ಪತಿಯ ಮನೆಯಲ್ಲಿ ವಾಸಿಸುತ್ತಿದ್ದ ಈ ಮಹಿಳೆ ಮನೆಗೆ ಆಗಾಗ ಬರುತ್ತಿದ್ದ ಪುತ್ತೂರು ನಿವಾಸಿ ಪ್ರದೀಪ್ ಯುವಕನೊಂದಿಗೆ ತೆರಳಿರುವುದಾಗಿ ವದಂತಿ ಹಬ್ಬಿದೆ.

ಮಕ್ಕಳ ಜತೆ ನಾಪತ್ತೆಯಾಗಿದರೆಂದು ಹೇಳಲಾಗುತ್ತಿರುವ ಮಹಿಳೆ ಸ್ಥಳಿಯ ಸ್ವಸಹಾಯ ಸಂಘವೊಂದರ ಸದಸ್ಯೆಯಾಗಿದ್ದಾರೆ. ಆ ಸ್ವಸಹಾಯ ಸಂಘದಿಂದ ಆಕೆ ಸುಮಾರು 1 ಲಕ್ಷ ರೂ.ಗಳಷ್ಟು ಸಾಲ ತೆಗೆದಿದ್ದಾರೆನ್ನಲಾಗುತ್ತಿದೆ.

Leave A Reply

Your email address will not be published.