ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾಗಕ್ಕೆ ಆವರಣ ಗೋಡೆ ನಿರ್ಮಿಸಲು ವ್ಯವಸ್ಥಾಪನ ಸಮಿತಿಗೆ ವಿಶ್ವ ಹಿಂದೂ ಪರಿಷತ್ ,ಭಜರಂಗದಳ ಮನವಿ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಆವರಣದಲ್ಲಿ ಇರುವ ದನಗಳ ಕಳ್ಳತನಕ್ಕೆ ಆನೇಕ ಬಾರಿ ಪ್ರಯತ್ನ ನಡೆದಿರುವುದು ಹಾಗೂ ದೇವಾಲಯದ ಜಾಗ ಅತಿಕ್ರಮಣ ನಡೆಯುತ್ತಿರುವ ಹಿನ್ನೆಲೆಯಲ್ಲಿ ದೇವಸ್ಥಾನದ ಜಾಗಕ್ಕೆ ಆವರಣಗೋಡೆ ನಿರ್ಮಿಸುವಂತೆ ವಿಶ್ವ ಹಿಂದೂ ಪರಿಷತ್ ,ಭಜರಂಗದಳ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಮನವಿ ಮಾಡಿದೆ.

 

ದೇವಸ್ಥಾನದ ವಠಾರದಲ್ಲಿ ನಡೆದ ಗೋಕಳ್ಳತನ ಪ್ರಯತ್ನಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ದೇವಾಲಯದ ಸ್ಥಳ ಅತಿಕ್ರಮಣ ತಡೆಯಲು ತಕ್ಷಣವೇ ಜಾಗವನ್ನು ಗುರುತಿಸಿ ಅವರಣ ಗೋಡೆ ನಿರ್ಮಾಣ ಮಾಡಿ ದೇವಾಲಯದ ಸೊತ್ತುಗಳನ್ನು ರಕ್ಷಣೆ ಮಾಡುವಂತೆ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಕೇಶವ ಪ್ರಸಾದ್ ಮುಳಿಯ ಮತ್ತು ವ್ಯವಸ್ಥಾಪನ ಸಮಿತಿ ಸದಸ್ಯರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಅಧ್ಯಕ್ಷರಾದ ಡಾ. ಕೃಷ್ಣ ಪ್ರಸನ್ನ,ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ.ಎಸ್,ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಶ್ರೀಧರ್ ತೆಂಕಿಲ,ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ ಉಪಾಧ್ಯಕ್ಷ ಸೇಸಪ್ಪ ಬೆಳ್ಳಿಪ್ಪಾಡಿ,ಬಜರಂಗದಳ ಪ್ರಖಂಡ ಸಂಚಾಲಕ್ ಹರೀಶ್ ಕುಮಾರ್ ದೊಳ್ಪಾಡಿ,ಭಜರಂಗದಳದ ನಗರ ಸಂಚಾಲಕ್ ಚೇತನ್ ಬೊಳ್ವಾರ್ ಉಪಸ್ಥಿತರಿದ್ದರು

Leave A Reply

Your email address will not be published.