ಈ ಗ್ರಾ.ಪಂ.ನಲ್ಲಿ ಸರ್,ಮೇಡಂ ಪದಬಳಕೆ ನಿಷೇಧ | ಐತಿಹಾಸಿಕ ನಿರ್ಣಯ ಕೈಗೊಂಡ ಆ ಗ್ರಾ.ಪಂ.ಯಾವುದು ? ಯಾಕೆ ನಿಷೇಧ ಹೇರಲಾಗಿದೆ

ಸರ್ ಮತ್ತು ‘ಮೇಡಂ’ ಪದಗಳ ಬಳಕೆಯನ್ನು ನಿಷೇಧಿಸಿದ ಮೊದಲ ಸ್ಥಳೀಯ ಸಂಸ್ಥೆ ಎನ್ನುವ ಹಿರಿಮೆಯನ್ನು ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿರುವ ಮಹೂರ್ ಗ್ರಾಮಪಂಚಾಯತ್ ಪಡೆದಿದೆ. ಪಂಚಾಯತ್‌ನ ವಿಶೇಷ ಸಭೆಯಲ್ಲಿ ಈ ಐತಿಹಾಸಿಕ ನಿರ್ಧಾರ ಕೈಗೊಂಡು ಅಧಿಕೃತ ಭಾಷಾ ಬಳಕೆಯ ಸುಧಾರಣೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದೆ.

 

ಸರ್ ಅಥವಾ ಮೇಡಂ ಎನ್ನುವ ಭಾಷಾ ಬಳಕೆಯು ಬ್ರಿಟಿಷರ ವಸಾಹತುಶಾಹಿ ಕಾಲದ ಉಳಿಕೆಯಾಗಿದೆ ಎಂದು ಪಂಚಾಯತ್ ಅಭಿಪ್ರಾಯಪಟ್ಟಿದೆ.

ಬ್ರಿಟಿಷರಿಂದ ಸ್ವತಂತ್ರರಾಗಿ 75 ವರ್ಷಗಳೇ ಕಳೆದಿರುವಾಗ, ಪ್ರಜಾಸತ್ತಾತ್ಮಕ
ಸರ್ಕಾರದಲ್ಲಿ ನಮ್ಮತನವನ್ನುತೋರಿಸಲೇಬೇಕಿದೆ ಎನ್ನುವುದು ಮಥರ್ ಗ್ರಾಮಪಂಚಾಯತ್ ಉಪಾಧ್ಯಕ್ಷ ಪಿಆರ್‌ ಪ್ರಸಾದ್ ಅಭಿಪ್ರಾಯ.

ಪ೦ಚಾಯತ್‌ಗೆ ವಿವಿಧ ಕೆಲಸಕ್ಕಾಗಿ ಆಗಮಿಸುವವರು ಅಧಿಕಾರಿಗಳನ್ನು ಸರ್ ಬದಲಾಗಿ, ಹುದ್ದೆ ಅಥವಾ ಹೆಸರುಗಳನ್ನು ಉಲ್ಲೇಖಿಸಿ ಕರೆಯಬಹುದಾಗಿದೆ. ಪ್ರತೀ ಅಧಿಕಾರಿಯೂ ಹೆಸರನ್ನು ತಮ್ಮ ಮೇಜಿನ ಮುಂದೆ ಬರೆದು ಪ್ರದರ್ಶಿಸಲಿದ್ದಾರೆ.

ಹಿರಿಯ ಅಧಿಕಾರಿಗಳನ್ನು ಹೆಸರು ಹಿಡಿದು ಕರೆಯಲು ಜನರಿಗೆ ಮುಜುಗರವಾದಲ್ಲಿ, ಚೇಟ (ಮಲಯಾಳಂನಲ್ಲಿ ಹಿರಿಯ ಸಹೋದರ) ಅಥವಾ ಚೇಚಿ (ಹಿರಿಯ ಸಹೋದರಿ) ಮೊದಲಾದ ಸ್ನೇಹಮಯಿ ಪದಗಳನ್ನು ಗೌರವಸೂಚಕವಾಗಿ ಬಳಸಬಹುದಾಗಿದೆ. ಅಧಿಕೃತ ಭಾಷಾ ಇಲಾಖೆಯನ್ನು ಸರ್ ಅಥವಾ ಮೇಡಂ ಪದಗಳ ಬದಲಿಗೆ ಬಳಸಬಹುದಾದ ಶಬ್ದಗಳನ್ನು ಸೂಚಿಸುವಂತೆ ಪಂಚಾಯತ್ ಕೇಳಿಕೊಂಡಿದೆ. ಪತ್ರಗಳಲ್ಲಿ ಅಪೇಕ್ಷಿಕುನ್ನು ಅಥವಾ ಅಭ್ಯರ್ಥಿಕುನ್ನು (ನಾನು ಬೇಡಿಕೆಯಿಡುತ್ತೇನೆ) ಮೊದಲಾದ ಪದಗಳನ್ನೂ ಕೈಬಿಡಲು ಪಂಚಾಯತ್ ನಿರ್ಧರಿಸಿದೆ.

ನಿಷೇಧಿತ ಪದಗಳ ಮಾಡದಿದ್ದುದಕ್ಕಾಗಿ ಅಧಿಕಾರಿಗಳು ನಿರಾಕರಿಸಿದಲ್ಲಿ ಪಂಚಾಯತ್ ಅಧ್ಯಕ್ಷರು ಅಥವಾ ಕಾರ್ಯದರ್ಶಿಗೆ ದೂರು ನೀಡುವಂತೆ ನೋಟಿಸ್ ಹಾಕಲಾಗಿದೆ.

Leave A Reply

Your email address will not be published.