ಬಿಜೆಪಿ ಬೂತ್ ಸಮಿತಿ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಕೆ ಕಾರ್ಯಕ್ರಮಕ್ಕೆ ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಚಾಲನೆ

ಕಡಬ : ಭಾರತೀಯ ಜನತಾ ಪಾರ್ಟಿ ವತಿಯಿಂದ ಕರ್ನಾಟಕ ರಾಜ್ಯಾದ್ಯಂತ ಬೂತ್ ಸಮಿತಿ ಅಧ್ಯಕ್ಷರ ಮನೆಗೆ ನಾಮಫಲಕ ಅಳವಡಿಕೆಯ ಕಾರ್ಯಕ್ರಮದ ಅಂಗವಾಗಿ ಸುಳ್ಯ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬಳ್ಪ ಗ್ರಾಮದ ಬೂತ್ ಸಂಖ್ಯೆ 105 ರ ಅಧ್ಯಕ್ಷರಾದ ಶ್ರೀ ರತ್ನಾಕರ ಕುಂಜತ್ತಾಡಿ ಅವರ ಮನೆಯಲ್ಲಿ ನಾಮಫಲಕ ಅಳವಡಿಕೆ ಮುಖಾಂತರ ಕಾರ್ಯಕ್ರಮಕ್ಕೆ ಮಾನ್ಯ ಸಚಿವರಾದ ಎಸ್ ಅಂಗಾರ ರವರು ಚಾಲನೆ ನೀಡಿದರು.

 

ಬಳ್ಪ ಗ್ರಾಮದ ಬೂತ್ ಸಂಖ್ಯೆ 104 ಮತ್ತು 106 , ಕೇನ್ಯ ಗ್ರಾಮದ ಬೂತ್ ಸಂಖ್ಯೆ 103ರ ಅಧ್ಯಕ್ಷರುಗಳಿಗೆ ನಾಮಫಲಕ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ ಉಪಸ್ಥಿತರಿದ್ದರು .

ಬೂತ್ ಅಧ್ಯಕ್ಷರಾದ ಸುಂದರ ಗೌಡ, ಪ್ರಶಾಂತ್ ಎಣ್ಣೆ ಮಜಲು, ಹೊನ್ನಪ್ಪ ಎ, ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕುಸುಮ ರೈ, ಪ್ರಮುಖರಾದ ರಮಾನಂದ ಎಣ್ಣೆ ಮಜಲು , ಜಯರಾಮ ಅಲ್ಕಬೆ, ರಘುನಾಥ ರೈ, ವಿನೋದ್ ಬೊಲ್ಮಳೆ, ಶ್ರೀಕೃಷ್ಣಭಟ್ ,ಸದಾನಂದ ಕಾಜರ, ಪುಟ್ಟಣ್ಣ ಗೌಡ ,ತಾರಾ ರೈ ,ಯಮುನಾ ಕಾಜರ, ರಾಜೀವ, ತೀರ್ಥೇಶ್, ಪದ್ಮನಾಭ, ಹರ್ಷಿತ್ ,ಮತ್ತಿತರ ಕಾರ್ಯಕರ್ತರು ಭಾಗವಹಿಸಿದ್ದರು.

Leave A Reply

Your email address will not be published.