ಸಾರ್ವಜನಿಕ ಶ್ರೀಗಣೇಶೋತ್ಸವ ಆಚರಣೆ ಹೇಗೆ ಈ ಬಾರಿ : ಮಹತ್ವದ ಸಭೆ

ಕರ್ನಾಟಕದಲ್ಲಿ ಕೊರೋನಾ ವೈರಸ್ ಮೂರನೇ ಅಲೆ ಭೀತಿ ಹಿನ್ನೆಲೆ ಸಾರ್ವಜನಿಕ ಕರ್ನಾಟಕದಲ್ಲಿ ಕೊರೋನಾ ವೈರಸ್ ಮೂರನೇ ಅಲೆ ಭೀತಿ ಹಿನ್ನೆಲೆ ಸಾರ್ವಜನಿಕ ಗಣೇಶೋತ್ಸವ ಕುರಿತು ಇಂದು ರಾಜ್ಯ ಸರ್ಕಾರ ನಿರ್ಧರಿಸುವ ಸಾಧ್ಯತೆ ಇದೆ.
ಸಾಮೂಹಿಕ ಗಣೇಶ ಚತುರ್ಥಿ ಆಚರಣೆಗೆ ಸಂಬಂಧಿಸಿದಂತೆ ಈಗಾಗಲೇ ಪರ ವಿರೋಧ ಚರ್ಚೆ ಏರ್ಪಟ್ಟಿದ್ದು, ಸಾಮೂಹಿಕ ಗಣೇಶೋತ್ಸವ ಆಚರಣೆಗೆ ಅವಕಾಶ ಇದೆಯಾ ಅಥವಾ ಇಲ್ಲವಾ ಎನ್ನುವ ಮಾಹಿತಿ ಇಂದು ತಿಳಿಯಲಿದೆ.

ಗಣೇಶೋತ್ಸವ ಆಚರಣೆಗೆ ಕೆಲ ಹೊಸ ಮಾರ್ಗಸೂಚಿ ಬಿಡುಗಡೆ ಮಾಡುವ ಸಾಧ್ಯತೆಯೂ ಹೆಚ್ಚಿದೆ.
ಇಂದು ಸಿಎಂ ಬಸವರಾಜ ಬೊಮ್ಮಾಯಿ ಮಹತ್ವದ ಸಭೆ ಕರೆದಿದ್ದು, ತಾಂತ್ರಿಕ ಸಲಹಾ ಸಮಿತಿ ಜೊತೆ ಚರ್ಚಿಸಿ ನಿರ್ಧಾರಕ್ಕೆ ಬರಲಿದ್ದಾರೆ. ಸಭೆಯಲ್ಲಿ ಆರೋಗ್ಯ ಸಚಿವರು,ಬಿಬಿಎಂಪಿ ಆಯುಕ್ತರು ಹಾಗೂ ಪೊಲೀಸ್ ಆಯುಕ್ತರು ಕೂಡ ಭಾಗಿಯಾಗಲಿದ್ದಾರೆ.ಗಣೇಶೋತ್ಸವ ಕುರಿತು ಇಂದು ರಾಜ್ಯ ಸರ್ಕಾರ ನಿರ್ಧರಿಸುವ ಸಾಧ್ಯತೆ ಇದೆ.
ಸಾಮೂಹಿಕ ಗಣೇಶ ಚತುರ್ಥಿ ಆಚರಣೆಗೆ ಸಂಬಂಧಿಸಿದಂತೆ ಈಗಾಗಲೇ ಪರ ವಿರೋಧ ಚರ್ಚೆ ಏರ್ಪಟ್ಟಿದ್ದು, ಸಾಮೂಹಿಕ ಗಣೇಶೋತ್ಸವ ಆಚರಣೆಗೆ ಅವಕಾಶ ಇದೆಯಾ ಅಥವಾ ಇಲ್ಲವಾ ಎನ್ನುವ ಮಾಹಿತಿ ಇಂದು ತಿಳಿಯಲಿದೆ.

Leave A Reply

Your email address will not be published.