ರಸ್ತೆ ಬದಿ ತಳ್ಳು ಗಾಡಿ ವ್ಯಾಪಾರಿಗಳ ಆದಾಯ ಕಂಡು ನಿಬ್ಬೆರಗಾದ ಐಟಿ ಅಧಿಕಾರಿಗಳು | ಅಷ್ಟಕ್ಕೂ ಅವರ ಆದಾಯವೆಷ್ಟು?
ರಸ್ತೆ ಬದಿ ತಳ್ಳುಗಾಡಿಗಳಲ್ಲಿರುವ ಚಾಟ್ಸ್ ಗಳ ರುಚಿ ಬೇರೆಲ್ಲೂ ಸಿಗುವುದಿಲ್ಲ ಎಂಬುದು ತುಂಬಾ ಜನರ ಅಭಿಪ್ರಾಯ. ಹಾಗೆಯೇ ಸಂಜೆಯಾದರೆ ಸಾಕು ಆ ಗಾಡಿಗಳ ಸುತ್ತ ರಾಶಿ ರಾಶಿ ಜನ ಸೇರುತ್ತಾರೆ. ತಮಗಿಷ್ಟವಾದ ಚಾರ್ಟ್ಸ್ ಗಳನ್ನು ಚಪ್ಪರಿಸಿಕೊಂಡು ತಿನ್ನುತ್ತಾರೆ. ಈ ರೀತಿ ವ್ಯಾಪಾರ ಮಾಡುವವರ ಆದಾಯದ ಬಗ್ಗೆ ತಿಳಿದರೆ ನಿಮಗೆ ಶಾಕ್ ಆಗುತ್ತದೆ.
ಹೌದು, ರಸ್ತೆ ಬದಿ ಪಾನ್ ಮಾರುವವರಿಗೆ, ಚಾಟ್ಸ್ ಸೇಲ್ ಮಾಡೋರಿಗೆ ಅಬ್ಬಬ್ಬಾ ಅಂದ್ರೆ ಎಷ್ಟು ಲಾಭ ಇರಬಹುದು ? ಕೆಲವೊಮ್ಮೆ ನೂರು, ಕೆಲವೊಂದು ಸಾವಿರ ಅನ್ಕೊಂಡ್ರೆ ತಪ್ಪು. ಲಕ್ಷಗಳಲ್ಲಿ ಬ್ಯುಸಿನೆಸ್ ಮಾಡ್ತಾರೆ ಈ ಮುರುಕಲು ಗಾಡಿ ತಳ್ಳುವ ವ್ಯಾಪಾರಿಗಳು. ಇದನ್ನು ಕೇಳಿ ಶಾಕ್ ಆಗುತ್ತದೆ. ನಮಗೇ ಹೀಗಾದರೆ ಐಟಿ ಅಧಿಕಾರಿಗಳ ಸ್ಥಿತಿ ಹೇಗಿರಬೇಡ..! ಬರೀ ಸಿರಿವಂತರ ಮನೆ, ಆಫೀಸ್ ರೈಡ್ ಮಾಡ್ತಿದ್ದ ಅಧಿಕಾರಿಗಳಿಗೆ ತಳ್ಳುಗಾಡಿ ವ್ಯಾಪಾರಿಗಳ ಆದಾಯ ನೋಡಿ ಹಾರ್ಟ್ ಅಟ್ಯಾಕ್ ಆಗುವುದೊಂದೇ ಬಾಕಿ.
ಉತ್ತರ ಪ್ರದೇಶದ ಜನಪ್ರಿಯ ನಗರಗಳಲ್ಲಿ ಕಾನ್ಪುರ ಕೂಡ ಒಂದು. ಸದ್ಯ ಕೋಟ್ಯಾಧಿಪತಿಗಳಿಂದಾಗಿ ಕಾನ್ಪುರ ಸುದ್ದಿಯಲ್ಲಿದೆ. ಕಾನ್ಪುರದಲ್ಲಿ ಚಿಂದಿ ಆಯುವವರು, ರಸ್ತೆ ಬದಿ ಸಮೋಸ, ಪಕೋಡ ಮಾರುವವರು, ಸಾಧಾರಣ ಅಂಗಡಿಗಳನ್ನು ಇಟ್ಟುಕೊಂಡಿರುವವರ ಬಳಿಯೂ ಯಾರೂ ಊಹಿಸಲು ಸಾಧ್ಯವಾಗದಷ್ಟು ಆಸ್ತಿ-ಪಾಸ್ತಿ ಇರುವುದು ಪತ್ತೆಯಾಗಿದೆ. ಕಾನ್ಪುರ ನಗರವೊಂದರಲ್ಲೇ ಬರೋಬ್ಬರಿ 250ಕ್ಕೂ ಹೆಚ್ಚು ಮಂದಿ ಕೋಟ್ಯಾಧಿಪತಿಗಳಿದ್ದಾರಂತೆ. ರಸ್ತೆ ಬದಿ ವ್ಯಾಪಾರ ಮಾಡುವವರ ಬಳಿ ಐಷಾರಾಮಿ ಬಂಗಲೆ, ದುಬಾರಿ ಕಾರುಗಳು, ಜಮೀನು, ಚಿನ್ನಾಭರಣ ಇರುವುದು ಪತ್ತೆಯಾಗಿದೆ.
ಸಮೀಕ್ಷೆಯ ಅತ್ಯಂತ ಆಘಾತಕಾರಿ ಭಾಗವೆಂದರೆ ಡೇಟಾ ಸಾಫ್ಟ್‌ವೇರ್ ಮತ್ತು ಇತರ ತಾಂತ್ರಿಕ ಪರಿಕರಗಳ ಸಹಾಯದಿಂದ ಈ ಶ್ರೀಮಂತರು ಆದಾಯ ತೆರಿಗೆಯ ಹೆಸರಿನಲ್ಲಿ ಭಾರೀ ತೆರಿಗೆಯನ್ನು ಪಾವತಿಸುವುದಿಲ್ಲ ಅಥವಾ ಜಿಎಸ್‌ಟಿಗೆ ಯಾವುದೇ ಸಂಬಂಧವಿಲ್ಲ. ವರದಿಗಳ ಪ್ರಕಾರ, ಬೆಕೊಂಗಂಜ್‌ನಲ್ಲಿರುವ ಒಂದು ಸ್ಕ್ರ್ಯಾಪ್ ಡೀಲರ್ ಎರಡು ವರ್ಷಗಳಲ್ಲಿ 10 ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ ಮೂರು ಆಸ್ತಿಗಳನ್ನು ಖರೀದಿಸಿದ್ದಾರೆ.
ಆರ್ಯನಗರದಲ್ಲಿ ಎರಡು ಪಾನ್ ಅಂಗಡಿಗಳ ಮಾಲೀಕರು, ಸ್ವರೂಪ್ ನಗರದಲ್ಲಿ ಒಂದು ಮತ್ತು ಬಿರ್ಹಾನಾ ರಸ್ತೆಯಲ್ಲಿ ಕೋವಿಡ್ ಅವಧಿಯಲ್ಲಿ ಎರಡು 5 ಕೋಟಿ ಮೌಲ್ಯದ ಆಸ್ತಿಗಳನ್ನು ಖರೀದಿಸಿದ್ದಾರೆ. ಬಾಡಿಗೆ ಗಾಡಿಗಳಲ್ಲಿ ತಮ್ಮ ವ್ಯಾಪಾರವನ್ನು ನಡೆಸುತ್ತಿರುವವರು ಪ್ರತಿದಿನ ಕಷ್ಟಪಡುತ್ತಿದ್ದಾರೆ ಎಂದು ನೀವು ಭಾವಿಸಿದರೆ ತಪ್ಪು. ಮಾಲ್ ರಸ್ತೆಯ ತಿಂಡಿ ಮಾರಾಟಗಾರನು ಪ್ರತಿ ತಿಂಗಳು ವಿವಿಧ ಬಂಡಿಗಳಲ್ಲಿ 1.25 ಲಕ್ಷವನ್ನು ಬರೀ ಬಾಡಿಗೆಗೆ ನೀಡುತ್ತಿದ್ದಾನೆ.
ಮತ್ತೊಂದೆಡೆ, ಬಿರ್ಹಾನಾ ರಸ್ತೆ, ಮಾಲ್ ರಸ್ತೆಯ ಚಾಟ್ ಮಾರಾಟಗಾರರು ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಹೂಡಿಕೆಯಾಗಿ ರಿಯಲ್ ಎಸ್ಟೇಟ್‌ನಲ್ಲಿ ಸಾಕಷ್ಟು ಹೂಡಿಕೆ ಮಾಡಿದ್ದಾರೆ. ಈ ಮಾಹಿತಿಯು ಆದಾಯ ತೆರಿಗೆ ಇಲಾಖೆಯನ್ನು ದಿಗ್ಭ್ರಮೆಗೊಳಿಸಿದೆ.