ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಮತ್ತೊಬ್ಬ ನಟಿ | ಪಾರ್ಟಿ ಮೂಡ್ ನಲ್ಲಿದ್ದ ನಟಿಯ ಮನೆಗೆ ದಾಳಿ ಮಾಡಿ 40 ಗ್ರಾಂ ಗಾಂಜಾ ವಶಕ್ಕೆ ಪಡೆದ ಪೊಲೀಸರು

ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ, ಸೆಲೆಬ್ರಿಟಿ ಮಾಡೆಲ್ ಸೋನಿಯಾ ಅಗರ್ವಾಲ್ ಮನೆಯ ಮೇಲೆ ದಾಳಿ ನಡೆಸಿದ ಪೂರ್ವ ವಲಯದ ಪೊಲೀಸರು 40 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆದ ಘಟನೆ ಇಂದು ನಡೆದಿದೆ.

ಡಿಜೆ ಹಳ್ಳಿ ಇನ್ಸ್‍ಪೆಕ್ಟರ್ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ದಾಳಿಯ ಸಮಯದಲ್ಲಿ ಸೋನಿಯಾ ಅಗರ್ವಾಲ್ ಮನೆಯಲ್ಲಿ ಇರಲಿಲ್ಲ. ಭಾನುವಾರ ರಾತ್ರಿ ಪಾರ್ಟಿಗೆ ಹೋಗಿದ್ದ ಆಕೆ ಇನ್ನೂ ಮನೆಗೆ ಆಗಿರಲಿಲ್ಲ.

ದಾಳಿ ನಡೆದ ಹಿನ್ನೆಲೆಯಲ್ಲಿ ಪೊಲೀಸರು ಆಕೆಗೆ ಕರೆ ಮಾಡಿದ್ದಾರೆ. ಈ ವೇಳೆ ಆಕೆ ಕರೆಯನ್ನು ಸ್ವೀಕರಿಸಲಿಲ್ಲ. ಆ ಬಳಿಕ ಆಕೆಯ ತಂದೆಯಿಂದ ಫೋನ್ ಕರೆ ಮಾಡಿಸಿದ್ದಾರೆ. ಈ ವೇಳೆ ಆಕೆ ಮಧ್ಯಾಹ್ನ 12 ಗಂಟೆಗೆ ಬರುವುದಾಗಿ ಹೇಳಿದ್ದಾಳೆ. ಅಗರ್ವಾಲ್ ಮನೆಗೆ ಬಾರದ ಹಿನ್ನೆಲೆಯಲ್ಲಿ ಆಕೆಯ ತಂದೆಯಿಂದ ಕೀ ತೆಗೆಸಿ ಮನೆಯನ್ನು ಜಾಲಾಡಿದ್ದಾರೆ. ಈ ವೇಳೆ 40 ಗ್ರಾಂ ಗಾಂಜಾ ಪತ್ತೆಯಾಗಿದೆ.

Ad Widget
Ad Widget

Ad Widget

Ad Widget

ಆರ್ಗ್ಯಾನಿಕ್ ಕಾಸ್ಮೆಟಿಕ್ ಕಂಪನಿ ನಡೆಸುತ್ತಿದ್ದ ಸೋನಿಯಾ ಜೊತೆ ಡಜನ್‍ಗಟ್ಟಲೇ ಸೆಲೆಬ್ರಿಟಿಗಳ ಲಿಂಕ್ ಇರುವುದು ಗೊತ್ತಾಗಿದೆ. ಎಲ್ಲಾ ಪಾರ್ಟಿಗಳಲ್ಲಿ ಸೋನಿಯಾ ಅಗರ್ವಾಲ್ ಮುಖಾಂತರ ಸೆಲೆಬ್ರಿಟಿಗಳು ಎಂಟ್ರಿ ಕೊಡುತ್ತಿದ್ದರು.

ಥಾಮಸ್ ನಿಂದ ಡ್ರಗ್ಸ್ ಪಡೆದುಕೊಳ್ಳುತ್ತಿದ್ದ ಸೋನಿಯಾ ಆ ಬಳಿಕ ಬೇಕಾದ ಸೆಲೆಬ್ರಿಟಿಗಳಿಗೆ ಪೂರೈಸುತ್ತಿದ್ದ ಬಗ್ಗೆ ಪೊಲೀಸರಿಗೆ ಬಲವಾದ ಸಂಶಯ ಮೂಡಿದೆ. ಕೆಲ ರಾಜಕಾರಣಿಗಳ ಮಕ್ಕಳು ಮತ್ತು ಸ್ಯಾಂಡಲ್‍ವುಡ್‍ನವರ ಜೊತೆ ಸೋನಿಯಾಗೂ ಉತ್ತಮ ಸಂಬಂಧ ಇತ್ತು ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಡಿಜೆ ವಚನ್ ಚಿನ್ನಪ್ಪ, ಉದ್ಯಮಿ ಭರತ್, ಸೆಲೆಬ್ರಿಟಿ ಮಾಡೆಲ್ ಸೋನಿಯಾ ಅಗರ್ವಾಲ್ ಮನೆ ಮೇಲೆ ದಾಳಿ ನಡೆಸಿದ್ದಾರೆ. ರಾಜಾಜಿನಗರ, ಪದ್ಮನಾಭನಗರದ, ಬೆನ್ಸೆನ್ ಟೌನ್ ನಲ್ಲಿರುವ ಮನೆಗಳ ಮೇಲೆ ದಾಳಿ ನಡೆಸಿ ಹುಡುಕಾಟ ನಡೆಸುತ್ತಿದ್ದಾರೆ.

15 ದಿನ ಹಿಂದೆ ಡ್ರಗ್ ಪೆಡ್ಲರ್ ಆರೋಪಿ ಥಾಮಸ್‍ನನ್ನು ಗೋವಿಂದಪುರ ಪೊಲೀಸರು ಬಂಧಿಸಿದ್ದರು. ಆರೋಪಿ ಥಾಮಸ್ ಜೊತೆ ಈ ವ್ಯಕ್ತಿಗಳು ನಿರಂತರ ಸಂಪರ್ಕದಲ್ಲಿದ್ದ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.

ಬಂಧಿತ ವಿದೇಶಿ ಪ್ರಜೆ ಥಾಮಸ್ ಜೊತೆ ದಾಳಿಗೆ ಒಳಗಾದ ವ್ಯಕ್ತಿಗಳಿಗೆ ನೇರವಾದ ಸಂಪರ್ಕ ಇತ್ತು. ಹಲವು ಪಾರ್ಟಿಗಳಿಗೆ ಎಂಡಿಎಂಎ(ಮೀಥೈಲ್ ಎನೆಡಿಯಾಕ್ಸಿ ಮೆಥಾಂಫೆಟಮೈನ್ ನನ್ನು ಎಕ್‍ಸಸ್ಟಿ ಮಾತ್ರೆ ಎಂದು ಕರೆಯಲಾಗುತ್ತದೆ) ಮಾತ್ರೆಗಳು ಮತ್ತು ಎಲ್‍ಎಸ್‍ಡಿ(ಲೈಸರ್ಜಿಕ್ ಆಸಿಡ್ ಡೈಥೈಲಾಮೈಡ್) ಮಾತ್ರೆಗಳನ್ನು ಈತ ವಿತರಿಸಿದ್ದ. ವಿಚಾರಣೆ ವೇಳೆ ಥಾಮಸ್ ಸೆಲೆಬ್ರಿಟಿಗಳ ಒಂದಷ್ಟು ಹೆಸರುಗಳನ್ನು ಪ್ರಸ್ತಾಪಿಸಿದ್ದ ಎಂದು ತಿಳಿದುಬಂದಿದೆ.

ಇದೀಗ ಪೊಲೀಸರು ಐಟಿಸಿ ಗಾರ್ಡೇನಿಯಾ ಹೋಟೆಲ್ ನಲ್ಲಿ ಇದ್ದ ಸೋನಿಯಾಳನ್ನು ವಶಕ್ಕೆ ಪಡೆದಿದ್ದಾರೆ. ಕೊಠಡಿಯ ವಾಶ್ ರೂಮ್ ನಲ್ಲಿ ಅವಿತು ಕುಳಿತಿದ್ದ ಬಗ್ಗೆ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಇಂದು ಮಧ್ಯಾಹ್ನ ಹೋಟೆಲಿಗೆ ಹೋಗಿ ಆಕೆಯನ್ನು ವಶಕ್ಕೆ ಪಡೆಯಲಾಗಿದೆ.

Leave a Reply

error: Content is protected !!
Scroll to Top
%d bloggers like this: