ಮತ್ತೆ ಅಫ್ಘಾನಿಸ್ತಾನದ ಪ್ರಜೆಗಳಿಗೆ ಮುಂದುವರಿದಿದೆ ತಾಲಿಬಾನಿಗಳ ಉಪಟಳ | ಸರ್ಕಾರಕ್ಕೆ ಸೇರಿದ ವಸ್ತುಗಳನ್ನು ಮರಳಿಸುವಂತೆ ಆದೇಶ ನೀಡಿದ ತಾಲಿಬಾನಿಗಳು!!ಹಿಂದಿರುಗಿಸದಿದ್ದಲ್ಲಿ ಕಠಿಣ ಕ್ರಮದ ಎಚ್ಚರಿಕೆ
ಅಫ್ಘಾನಿಸ್ತಾನದಲ್ಲಿ ಪ್ರಜೆಗಳಿಗೆ ಮತ್ತೆ ಎಚ್ಚರಿಕೆಯ ಸಂದೇಶಗಳು ಹೆಚ್ಚಾಗುತ್ತಿದ್ದು, ಇದೀಗ ಸರ್ಕಾರಕ್ಕೆ ಸೇರಿದ ಎಲ್ಲಾ ವಸ್ತುಗಳನ್ನು ಮರಳಿಸುವಂತೆ ತಾಲಿಬಾನ್ ಆದೇಶ ನೀಡಿದೆ.
ತಾಲಿಬಾನಿಗಳು ಸರ್ಕಾರ ರಚನೆಗೆ ಈಗಾಗಲೇ ತಯಾರಿ ನಡೆಸುತ್ತಿದ್ದು,ಇದರ ನಡುವೆ ಸರ್ಕಾರಿ ವಾಹನ, ಶಸ್ತ್ರಾಸ್ತ್ರ ಹಾಗೂ ಮದ್ದು ಗುಂಡುಗಳನ್ನು ಹಿಂತಿರುಗಿಸುವಂತೆ ತಾಲಿಬಾನ್ ವಕ್ತರಾ ಝಬಿಹುಲ್ಲಾ ಮುಜಾಹಿದ್ ಕಾಬುಲ್ ನಿವಾಸಿಗಳಿಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.
ಸರ್ಕಾರಿ ಆಸ್ತಿಗಳು ಸೇರಿದಂತೆ ಯಾವೆಲ್ಲ ವಸ್ತುಗಳು ಸರ್ಕಾರಕ್ಕೆ ಸೇರಿದೆವೆಯೋ ಅದನ್ನೆಲ್ಲ ಮರಳಿಸುವಂತೆ ತಾಲಿಬಾನ್ ಕರೆ ನೀಡಿದ್ದು, ಒಂದು ವೇಳೆ ಹಿಂತಿರುಗಿಸದಿದ್ದಲ್ಲಿ ಕಠಿಣ ಕ್ರಮದ
ಎಚ್ಚರಿಕೆಯನ್ನು ಸಹ ತಾಲಿಬಾನಿಗಳು ನೀಡಿದ್ದಾರೆ.
ಇದರೊಂದಿಗೆ ಎಲ್ಲ ಸರ್ಕಾರಿ ಅಧಿಕಾರಿಗಳು ಕಚೇರಿಗೆ ಮರಳಿ ಕೆಲಸ ಆರಂಭಿಸುವಂತೆಯೂ ಸಂದೇಶ ರವಾನೆಯಾಗಿದೆ.ಇನ್ನೇನು ಅಮೆರಿಕ ಸ್ಥಳಾಂತರ ಪ್ರಕ್ರಿಯೆ ಮುಗಿಯಲಿದ್ದು, ಅಮೆರಿಕ ಯೋಧರು ಆಫ್ಘಾನ್ ನೆಲವನ್ನು ಶಾಶ್ವತವಾಗಿ ತೊರೆಯಲಿದ್ದಾರೆ.ಬಳಿಕ ತಾಲಿಬಾನಿಗಳು ಸರ್ಕಾರ ರಚಿಸುವ ಪ್ಲಾನ್ ಮಾಡಿಕೊಂಡಿದೆ.
ಇನ್ನು ತಾಲಿಬಾನಿಗಳ ಆಡಳಿತವನ್ನು ನೆನೆದು ಭಯಭೀತಗೊಂಡಿರುವ ಆಫ್ಘಾನ್ನರು ಬೇರೆ ಬೇರೆ ದೇಶಗಳತ್ತ ಮುಖ ಮಾಡುತ್ತಿದ್ದಾರೆ. ಇನ್ನು ಲಕ್ಷಾಂತರ ಮಂದಿ ಕಾಬುಲ್ ವಿಮಾನ ನಿಲ್ದಾಣ ಮುಂದೆಯೇ ತಮ್ಮ ಜೀವನ ರಕ್ಷಿಸಲು ಪರದಾಡುತ್ತಿದ್ದಾರೆ.ಇದೇ ಸಂದರ್ಭದಲ್ಲಿ ಕಾಬುಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕ ಸೇನೆಯನ್ನು ಗುರಿಯಾಗಿರಿಸಿ ಐಎಸ್-ಕೆ ಉಗ್ರ ಸಂಘಟನೆ ಮತ್ತೊಮ್ಮೆ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಕಾಬುಲ್ನಲ್ಲಿ ಬಿಗುವಿನ ವಾತಾವರಣ ಮುಂದುವರಿದಿದೆ.