ಮತಾಂತರ-ಮದುವೆ-ಮೋಸ ‘ಲವ್ ಜಿಹಾದ್’| ಲವ್ ಜಿಹಾದ್ ವಿರುದ್ಧ ತಂದಿದ್ದ ಕಾನೂನಿಗೆ ಹೈ ಕೋರ್ಟ್ ತಡೆ!! |ತಡೆಯಾಜ್ಞೆಯನ್ನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ ಸರ್ಕಾರ
ಕಳೆದ ಹಲವು ವರ್ಷಗಳಿಂದ ಲವ್ ಜಿಹಾದ್ ಎಂಬ ಪದವು ಹೆಚ್ಚು ಸದ್ದು ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಇದಕ್ಕೆ ಸಂಬಂಧಿಸಿದಂತೆ ಗಲಾಟೆ, ಚರ್ಚೆ, ದೊಂಬಿ ಗಲಭೆಗಳು ನಡೆಯುತ್ತಿರುವ ಬಗ್ಗೆಯೂ ಹಲವಾರು ಬಾರಿ ವರದಿಯಾಗಿದೆ. ಪ್ರೀತಿಸುವ ನೆಪದಲ್ಲಿ ಹಿಂದೂ ಹೆಣ್ಣುಮಕ್ಕಳನ್ನು ತಮ್ಮ ಬಲೆಗೆ ಬೀಳಿಸಿಕೊಳ್ಳುವ ಜಿಹಾದಿಗಳು, ಅವರನ್ನು ಮದುವೆಯಾಗುವ ನಾಟಕವಾಡಿ, ಮತಾಂತರ ಗೊಳಿಸಿ ಆ ಬಳಿಕ ಒಂಟಿಯಾನ್ನಾಗಿಸಿ ದಿಕ್ಕಿಲ್ಲದಂತೆ ಮಾಡುತ್ತಾರೆ ಎಂದು ಒಂದು ಬಣ ವಾದಿಸಿದರೆ, ಈ ರೀತಿಯ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಪ್ರಾಪ್ತ ಹೆಣ್ಣುಮಕ್ಕಳಿಗೆ ತನಗಿಷ್ಟ ಬಂದ ಧರ್ಮಕ್ಕೆ ಸೇರಲು,ಇಷ್ಟ ಬಂದವರನ್ನು ಮದುವೆಯಾಗುವ ಅವಕಾಶಗಳಿವೆ ಎಂದು ಇನ್ನೊಂದು ಬಣದ ವಾದ.ಸದ್ಯ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಈ ಪ್ರಕರಣದ ತೀರ್ಪಿಗೆ ಕಾತುರದಿಂದ ಕಾಯುತ್ತಿವೆ ಸರ್ಕಾರ ಸಹಿತ ಮತೀಯ ಧರ್ಮಗಳು.
ಸದ್ಯ ಮದುವೆಯಾದ ಬಳಿಕ ಬೇರೆ ಧರ್ಮಕ್ಕೆ ಮತಾಂತರಗೊಳ್ಳುವುದು ಹಾಗೂ ಒತ್ತಾಯಪೂರ್ವಕ ಮತಾಂತರಕ್ಕೆ ಪ್ರಯತ್ನ ಪಡುವುದು ಅಪರಾಧ ಉತ್ತರಪ್ರದೇಶ, ಮಧ್ಯಪ್ರದೇಶ, ಗುಜರಾತ್ ಸೇರಿದಂತೆ ಕೆಲ ರಾಜ್ಯಗಳು ಕಾನೂನು ರೂಪಿಸಿದ್ದು, ಈ ಕಾನೂನಿನ ವಿರುದ್ಧ ಸದ್ಯ ಇದೇ ವಿಚಾರವಾಗಿ ಕೆಲ ನೆಟ್ಟಿಗರು ಸಿಡಿದೆದ್ದಿದ್ದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತಾಂತರ ಕಾಯಿದೆಯ ವಿರುದ್ಧ ಕೆಲವರು ಗುಜರಾತ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಮತಾಂತರ ಶಿಕ್ಷರ್ಹ ಅಪರಾಧವಲ್ಲ ಎಂಬುವುದು ಸಾಬೀತು ಆಗಬೇಕೆಂಬುವುದು ಮತೀಯ ವಾದಿಗಳ ವಾದ. ಈ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಸೆಕ್ಷನ್ ಗಳಿಗೆ ತಡೆಯಾಜ್ಞೆ ವಿಧಿಸಿದ್ದು, ಸದ್ಯ ಗುಜರಾತ್ ಸರ್ಕಾರವು ಇದನ್ನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದೆ.
ಒಂದು ರೀತಿಯಲ್ಲಿ ನೋಡುವುದಾದರೆ ಮತಾಂತರ ದ ವಿರುದ್ಧ ತಂದ ಕಾನೂನು ಒಳ್ಳೆಯ ವಿಚಾರ. ಯಾಕೆಂದರೆ, ಅನ್ಯಮತೀಯರು ತಮ್ಮ ಒಪ್ಪತ್ತಿನ ಸುಖಕ್ಕಾಗಿ ಹಿಂದೂ ಹೆಣ್ಣುಮಕ್ಕಳನ್ನು ತಮ್ಮ ಬಲೆಗೆ ಕೆಡವಿಕೊಂಡು ಮದುವೆಯ ನಾಟಕವಾಡುವ ಅನೇಕ ಉದಾಹರಣೆಗಳಿವೆ. ಕಳೆದ ಬಾರಿ ಸುಳ್ಯದಲ್ಲಿ ಕೇರಳದ ಹಿಂದೂ ಯುವತಿಯೊಬ್ಬಳು ಧರಣಿ ಕೂತಿದ್ದ ನೈಜ ಘಟನೆ ಇನ್ನೂ ಮಾಸಿಲ್ಲ, ಈ ಮಧ್ಯೆಯೇ ಮತಾಂತರ ಸರಿ ಎಂದು ವಾದಿಸುವ ಮತೀಯ ವಾದಿಗಳು ಆಕೆಗೆ ಯಾವ ರೀತಿಯಲ್ಲಿ ಸಹಕರಿಸಿದ್ದೀರಿ? ಎಲ್ಲರೂ ತಮ್ಮವನ ಪರವಾಗಿ ನಿಂತದಲ್ಲದೇ, ಅನ್ಯಾಯಕ್ಕೊಳಗಾದ ಯುವತಿ ಬೆನ್ನಿಗೆ ಯಾವ ಮುಸ್ಲಿಂ ನಾಯಕರೂ ನಿಂತಿಲ್ಲ.
ಇನ್ನಾದರೂ ಇಂತಹ ಉತ್ತಮ ಕಾನೂನು ಜಾರಿಯಾಗಲಿ, ಆ ಮೂಲಕ ಮತಾಂತರ-ವಿವಾಹ-ಮೋಸ ಕ್ಕೆ ಬ್ರೇಕ್ ಬೀಳಲಿ. ಹೈ ಕೋರ್ಟ್ ತಡೆಯಾಜ್ಞೆ ಸದ್ಯ ಸುಪ್ರೀಂ ಅಂಗಳದಲ್ಲಿದ್ದು, ಎಲ್ಲರ ಚಿತ್ತ ಸುಪ್ರೀಂ ಕೋರ್ಟ್ ನ ತೀರ್ಪಿನತ್ತ ಇದೆ.