ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಮೋದಿಕೆರ್ ನ ಡಿಸ್ಟ್ರಿಬ್ಯೂಶನ್ ಮಳಿಗೆ ಶುಭಾರಂಭ

ಪುತ್ತೂರು: ಆತ್ಮನಿರ್ಭರ ಯೋಜನೆಯ ಪರಿಕಲ್ಪನೆಯೊಂದಿಗೆ ನೇರಮಾರುಕಟ್ಟೆಯ ಹೆಸರಾಂತ ಸಂಸ್ಥೆ ಮೋದಿಕೆರ್ ಮಳಿಗೆಯು ಆ.27ರಂದು ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಶುಭಾರಂಭ ಗೊಂಡಿದೆ. SCDCC ಬ್ಯಾಂಕ್ ಮಂಗಳೂರು ಇದರ ನಿರ್ದೇಶಕ ಶ್ರೀ ಶಶಿಕುಮಾರ್ ಬಾಲ್ಯೊಟ್ಟು ಮಳಿಗೆಯನ್ನು ಉದ್ಘಾಟಿಸಿದರು.ಶ್ರೀ ನನ್ಯ ಅಚ್ಚುತ ಮೂಡಿತ್ತಾಯ ದೀಪ ಪ್ರಜ್ವಲನೆ ಮಾಡಿದರು.

SCDCC ಬ್ಯಾಂಕ್ ಮಂಗಳೂರು ಇದರ ನಿರ್ದೇಶಕ ಶ್ರೀ S B ಜಯರಾಮ ರೈ ಬಳಜ್ಜ ಪ್ರಥಮ ಗ್ರಾಹಕರಿಗೆ ಉತ್ಪನ್ನಗಳ ಹಸ್ತಾಂತರ ಮಾಡಿದರು.
ಮೋದಿ ಕೇರ್ ಸಂಸ್ಥೆಯ ಹಿರಿಯ ನಿರ್ದೇಶಕ ಶ್ರೀ ಕೃಷ್ಣ ಕುಮಾರ್ ಅತ್ರಿಜಾಲ್ ಆಲಂಕಾರುರವರು ಉತ್ಪನ್ನಗಳ ಗುಣಮಟ್ಟ ಮತ್ತು ವ್ಯವಹಾರದ ಸ್ವರೂಪವನ್ನು ವಿವರಿಸಿದರು, ಮೋದಿಕೆರ್ ನ ಇನ್ನೋರ್ವ ನಿರ್ದೇಶಕ ಶ್ರೀಗಣೇಶ್ ಪ್ರಾಸ್ತಾವಿಕ ಮತ್ತು ಕಾರ್ಯಕ್ರಮ ನಿರೂಪಣೆ ಮಾಡಿದರು.

Ad Widget
Ad Widget

Ad Widget

Ad Widget

ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರ, ಉಪಾಧ್ಯಕ್ಷ ಶ್ರೀ ಉಮೇಶ್ ಗೌಡ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ರಾಜೀವಿ ಯಸ್ ರೈ, ಸಂಘದ ನಿರ್ದೇಶಕರುಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ನಿರ್ದೇಶಕ ಸಂತೋಷ್ ಕೈಕಾರ ಧನ್ಯವಾದ ಅರ್ಪಿಸಿದರು, ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಸರಳರೀತಿಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮಳಿಗೆಯಲ್ಲಿ ಪರ್ಸನಲ್ ಕೇರ್, ಹೋಮ್ ಕೇರ್, ಮನೆಗೆ ದಿನಬಳಕೆಯ ಎಲ್ಲಾ ವಸ್ತುಗಳು, ಕೃಷಿಗೆ ಸಂಬಂಧಿಸಿದ ಉತ್ಪನ್ನಗಳು, ಹೆಲ್ತ್ ಕೇರ್ ಉತ್ಪನ್ನಗಳು 10 ರಿಂದ 20 ಶೇಕಡಾ ರಿಯಾಯಿತಿ ದರದಲ್ಲಿ ಲಭ್ಯವಿದ್ದು ಸಾರ್ವಜನಿಕ ಗ್ರಾಹಕ ಬಂಧುಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Leave a Reply

error: Content is protected !!
Scroll to Top
%d bloggers like this: