ಮಂಗಳೂರು ವಿಮಾನ ನಿಲ್ದಾಣ : ಅಕ್ರಮ ಚಿನ್ನ ಸಾಗಾಟ, 16 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ

Share the Article

ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಾಟಕ್ಕೆ ಯತ್ನಿಸಿದ ಆರೋಪದಲ್ಲಿ ಒಬ್ಬನನ್ನು ವಶಕ್ಕೆ ಪಡೆದು, ಆತನಲ್ಲಿದ್ದ ಚಿನ್ನವನ್ನು ವಶಪಡಿಸಿಕೊಂಡ ಘಟನೆ ಶನಿವಾರ ನಡೆದಿದೆ.

ಕಾಸರಗೋಡು ಮುಳಿಯಾರ್ ನಿವಾಸಿ ಮುಹಮ್ಮದ್ ನವಾಝ್ ಎಂಬಾತನನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವುದಾಗಿದೆ.
ದುಬೈನಿಂದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಿಂದ ಬಂದಿಳಿದಿದ್ದು,ತಪಾಸಣೆ ವೇಳೆ ತೆರಿಗೆ ವಂಚಿಸಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದ್ದು, ಆರೋಪಿಯನ್ನು ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಆರೋಪಿಯಿಂದ 16,21,400 ರೂ. ಮೌಲ್ಯದ 335 ಗ್ರಾಂ ಚಿನ್ನವನ್ನು ವಶಪಡೆಯಲಾಗಿದೆ. ಈತ ಅನುಮಾನ ಬಾರದ ರೀತಿಯಲ್ಲಿ ಚಿನ್ನವನ್ನು ಸ್ಟೇಟಿಂಗ್ ಬೋರ್ಡ್ ಮತ್ತು ಅದರ ಚಕ್ರಕ್ಕೆ ಸಂಪರ್ಕ ಕಲ್ಪಿಸುವ ರಾಡ್ ಒಳಗೆ ಅಡಗಿಸಿಟ್ಟು ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ.

Leave A Reply