ಚಿರತೆಯೊಂದಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುವಾಗ ನಡೆದ ಅವಾಂತರ | ಅರೆಬಟ್ಟೆಯ ಮೃದು ಮೈ ಕಂಡು ಮೆಲ್ಲನೆ ಅಮುಕಿದ ಚಿರತೆ | ಗಂಭೀರ ಸ್ಥಿತಿಯಲ್ಲಿ ಮಾಡೆಲ್ !!?
ನಟಿಯರು, ಮಾಡೆಲ್ ಗಳು ತಮ್ಮ ತಮ್ಮ ಸಾಕುಪ್ರಾಣಿಗಳೊಂದಿಗೆ ಫೋಟೋ ಶೂಟ್ ಮಾಡುವುದು ಇತ್ತೀಚಿಗೆ ಮಾಮೂಲಾಗಿದೆ. ಆದರೆ ಇಲ್ಲೊಬ್ಬ ಮಾಡೆಲ್ ಚಿರತೆಗಳೊಂದಿಗೆ ಫೋಟೋಶೂಟ್ ಮಾಡಿ ಪೇಚಿಗೆ ಸಿಲುಕಿದ ಘಟನೆ ನಡೆದಿದೆ.
ಹೌದು, ಚಿರತೆಗಳೊಂದಿಗೆ ಫೋಟೋಶೂಟ್ ಮಾಡುವ ಪ್ರಯತ್ನದಲ್ಲಿ ಮಾಡೆಲ್ ಗಂಭೀರವಾಗಿ ಗಾಯಗೊಂಡಿರುವ ಪ್ರಸಂಗ ಜರ್ಮನಿಯಲ್ಲಿ ನಡೆದಿದೆ. ಜೆಸ್ಸಿಕಾ ಲೈಡಾಲ್ಫ್ ಎಂಬ 36 ವರ್ಷದ ರೂಪದರ್ಶಿಯು ದೇಶದ ಪೂರ್ವಪ್ರಾಂತ್ಯದಲ್ಲಿನ ಪ್ರಾಣಿ ಆಶ್ರಯ ತಾಣದಲ್ಲಿ ಎರಡು ಚಿರತೆಗಳಿಂದ ದಾಳಿಗೊಳಗಾದರು ಎನ್ನಲಾಗಿದೆ.
ಸ್ಯಾಕ್ಸ್ನಿ-ಅನ್ಹಾಲ್ಸ್ ರಾಜ್ಯದ ನೆಬ್ರಾದಲ್ಲಿ ಬಿರ್ಗಿಟ್ ಸ್ಟಾಜ್ ಎಂಬುವರು ಜಾಹೀರಾತುಗಳಲ್ಲಿ ಮತ್ತು ಪ್ರದರ್ಶನಗಳಲ್ಲಿ ಉಪಯೋಗಿಸಲ್ಪಡುವ ಪ್ರಾಣಿಗಳಿಗಾಗಿ ನಡೆಸುತ್ತಿರುವ ರಿಟೈರ್ಮೆಂಟ್ ಹೋಂನಲ್ಲಿ ಈ ಘಟನೆ ಸಂಭವಿಸಿದೆ.
ಒಂದು ಕಾಲದಲ್ಲಿ ಪಾನಾಸಾನಿಕ್ ಟಿವಿ ಜಾಹೀರಾತಿನಲ್ಲಿ ಪಾತ್ರ ವಹಿಸಿದ್ದ ಟ್ರಾಯ್ ಮತ್ತು ಪ್ಯಾರಿಸ್ ಎಂಬ ಹೆಸರಿನ ಚಿರತೆಗಳನ್ನಿರಿಸಲಾಗಿದ್ದ ಆವರಣದೊಳಕ್ಕೆ ಜೆಸ್ಸಿಕಾ ಸ್ವಯಂಪ್ರೇರಣೆಯಿಂದ ಪ್ರವೇಶಿಸಿದ್ದರು. ಆಗ ಆ ಚಿರತೆಗಳು ದಾಳಿ ನಡೆಸಿದ್ದು, ಅವರ ಕೆನ್ನೆ, ಕಿವಿ ಮತ್ತು ತಲೆಗಳನ್ನು ಕಚ್ಚಿದವು ಎನ್ನಲಾಗಿದೆ.
ಜೆಸ್ಸಿಕಾರನ್ನು ಕೂಡಲೇ ಹೆಲಿಕಾಪ್ಟರ್ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆಕೆಯ ತಲೆಗೆ ಗಂಭೀರ ಗಾಯಗಳಾಗಿದ್ದರಿಂದ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಇದೀಗ ಆಕೆಗೆ ಚಿಕಿತ್ಸೆ ಫಲಕಾರಿಯಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಗಾಯದ ಕಲೆಗಳು ಹಾಗೇ ಉಳಿಯಲಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಣಿಪ್ರಿಯರಾದ ಜೆಸ್ಸಿಕಾ, ಒಂದು ಕುದುರೆ, ಬೆಕ್ಕುಗಳು, ಪಾರಿವಾಳಗಳು ಮತ್ತು ಗಿಣಿಗಳ ಒಡತಿಯಾಗಿದ್ದಾರೆ ಎನ್ನಲಾಗಿದೆ.
ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸದೆ ಆಕೆ ಪ್ರಾಣಿಗಳ ಸಮೀಪ ತೆರಳಿದ್ದು ಘಟನೆ ಸಂಭವಿಸಲು ಕಾರಣವಾಗಿದೆ ಎಂದು ಹೇಳಲಾಗಿದೆ. ದೇಹದಲ್ಲಿ ಆದ ಗಾಯಗಳು ಹಾಗೇ ಉಳಿಯುವ ಕಾರಣ ಆಕೆ ಸದ್ಯಕ್ಕಂತೂ ಫೋಟೋಶೂಟ್ ಮಾಡುವುದು ದೂರದ ಮಾತೇ ಬಿಡಿ.