ಪುತ್ತೂರು | ಹನಿಟ್ರ್ಯಾಪ್ ಬಲೆಗೆ ಬಿದ್ದು ಒದ್ದಾಡುತ್ತಿರುವ ರಾಜಕಾರಣಿ | ದೂರು ನೀಡಿದರೆ ಹೆಸರು ಬಹಿರಂಗವಾಗುವ ಆತಂಕ
ಪುತ್ತೂರು : ಹನಿಟ್ರ್ಯಾಪ್ ಈಗ ಒಂದು ದಂಧೆ ಯಾಗಿ ಪರಿಣಮಿಸಿದೆ. ಈ ದಂಧೆಗೆ ಬೀಳದವರು ಬಹಳ ಕಡಿಮೆ. ತಿಂಗಳ ಹಿಂದೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಗಾಳಿಮುಖದಲ್ಲಿ ಇಂಥದೊಂದು ಘಟನೆ ನಡೆದಿತ್ತು ಬಳಿಕ ಮಂಗಳೂರಿನಲ್ಲಿ,ನಿನ್ನೆ ಕಡಬದ ಬಿಳಿನೆಲೆಯಲ್ಲೂ ನಡೆದಿತ್ತು. ಎರಡೂ ಪ್ರಕರಣದಲ್ಲಿ ಆರೋಪಿಗಳ ಬಂಧನವಾಗಿದೆ.ಬಿಳಿನೆಲೆಯ ಪ್ರಕರಣದ ಕುರಿತು ಯುವಕ ದೂರು ನೀಡಿದರೆ ಪೊಲೀಸ್ ತನಿಖೆಯಾಗಬಹುದು.
ಇದೀಗ ಪುತ್ತೂರು ತಾಲೂಕಿನ ಕುಂಬ್ರ ಸಮೀಪ ಹನಿಟ್ರ್ಯಾಪ್ ನಡೆದಿದ್ದು, ಮೂವರು ಯುವಕರು ಸೇರಿದಂತೆ ಒಬ್ಬ ಪ್ರಭಾವಿ ರಾಜಕಾರಣಿ ಆಂಟಿಯ ಬಲೆಗೆ ಬಿದ್ದು ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಬಹು ಚರ್ಚಿತ ವಿಷಯ ಹೊರಬಿದ್ದಿದೆ.
ಸಹಾಯ ಕೇಳುವ ನೆಪದಲ್ಲಿ ಆಂಟಿ ಯುವಕರನ್ನು ಪರಿಚಯ ಮಾಡಿಕೊಂಡು ಬಳಿಕ ಅವರ ಜೊತೆ ಸಲುಗೆಯಿಂದ ವರ್ತಿಸಿ ಅವರ ಜೊತೆ ಕಚೇರಿಯಲ್ಲಿ ಸರಸ ಸಲ್ಲಾಪ ನಡೆಸುವ ಇವರ ಕುತಂತ್ರಕ್ಕೆ ಮೂವರು ಯುವಕರು ಬಲಿಯಾಗಿದ್ದಾರೆ ಎನ್ನಲಾಗಿದೆ.
ಆಂಟಿಯ ಸಲುಗೆಯಿಂದ ಹಣ ಕಳೆದುಕೊಂಡ ಯುವಕರು ಮೌನಕ್ಕೆ ಶರಣಾಗಿದ್ದರೆ, ಪುತ್ತೂರಿನ ಪ್ರಭಾವಿ ರಾಜಕಾರಣಿಯೊಬ್ಬರು ಇನ್ನೂ ಖೆಡ್ಡಾದಿಂದ ಹೊರಗೆ ಬರಲು ಹರಸಾಹಸಪಡುತ್ತಿದ್ದಾರೆ ಎನ್ನಲಾಗಿದೆ.
ಕಳೆದ ಎರಡು ವರ್ಷದಿಂದ ಆಂಟಿಯ ಬಲೆಗೆ ಬಿದ್ದು ಹೊರಳಾಡುತ್ತಿರುವ ರಾಜಕಾರಣಿ ಹೊರಗೆ ಬರಲಾಗದೆ ಚಡಪಡಿಸುತ್ತಿದ್ದು, ತನ್ನನ್ನು ಬಚಾವ್ ಮಾಡುವಂತೆ ತನ್ನ ಆಪ್ತರಲ್ಲಿ ಕೇಳಿಕೊಂಡಿದ್ದು, ಪೊಲೀಸರಿಗೆ ದೂರು ನೀಡಿದರೆ ಮಾನ ಹರಾಜಾಗಬಹುದು ಎಂಬ ಕಾರಣಕ್ಕೆ ದೂರು ನೀಡಲು ಹಿಂಜರಿಯುತ್ತಿದ್ದಾರೆ ಎನ್ನಲಾಗಿದೆ.
ಈಗಾಗಲೇ ರಾಜಕಾರಣಿಯಿಂದ ಲಕ್ಷಾಂತರ ರೂ ಗಿಟ್ಟಿಸಿಕೊಂಡಿರುವ ಆಂಟಿ, ಇದೀಗ ದಿನಂಪ್ರತಿ ಬೆದರಿಕೆ ಒಡ್ಡಿ ಆತನಿಂದ ಮತ್ತೆ ಮತ್ತೆ ಹಣ ಗಿಟ್ಟಿಸುತ್ತಿದ್ದಾಳೆ ಎಂಬ ಮಾಹಿತಿ ಇದೆ.
ಅತ್ತ ಘನತೆಯ ಪ್ರಶ್ನೆ, ಇತ್ತ ಆರ್ಥಿಕ ನಷ್ಟದ ಪ್ರಶ್ನೆ ಒಟ್ಟಿನಲ್ಲಿ ಗೊಂದಲದ ಸ್ಥಿತಿ ಹನಿಟ್ರ್ಯಾಪ್ ಗೆ ಒಳಗಾದ ಹಲವರ ಪಡಿಪಾಟಲು.ಕೈಸುಟ್ಟು ಕೊಂಡು ಒದ್ದಾಡುವ ಬದಲು ಇನ್ನಾದರೂ ಇಂತಹ ಮೋಸದ ಜಾಲಕ್ಕೆ ಬೀಳದಂತೆ ಸಾರ್ವಜನಿಕರು ಎಚ್ಚರ ವಹಿಸಬೇಕಿದೆ.ಹನಿ ಹೀರಲು ಹೋಗಿ ಮನಿ ಕಳೆದುಕೊಂಡು ಮನೆ ಮಠ ಮಾರಾಟ ಮಾಡುವ ಪರಿಸ್ಥಿತಿ ತಂದೊಡ್ಡುವ ಬದಲು ಇಂತಹ ವ್ಯವಸ್ಥೆಗೆ ಬೀಳದಂತೆ ಜಾಗರೂಕರಾಗಬೇಕಿದೆ.