ಪುತ್ತೂರು: ಕೋಣೆಯಲ್ಲಿ ಏನು ನಡೆಯುತ್ತಿದೆ ಎಂದು ಇಣುಕಿ‌ ನೋಡಿದ ಇತರ ಬಾಡಿಗೆದಾರರು | ಮೂವರ ಅಂಗಡಿ ಕೋಣೆ ಖಾಲಿ ಮಾಡಿಸಿದ ಮಾಲಿಕ | ಕೋಣೆಯಲ್ಲಿ ನಡೆದದ್ದಾದರೂ ಏನು?

ಪುತ್ತೂರು ತಾಲೂಕಿನ ಹೊರವಲಯದ ಒಂದು ಕಾಂಪ್ಲೆಕ್ಸ್ . ಈ ಕಾಂಪ್ಲೆಕ್ಸ್‌ನಲ್ಲಿ 15ಕ್ಕೂ ಮಿಕ್ಕಿ ಬಾಡಿಗೆ ಕೋಣೆಗಳಿವೆ. ಇದರಲ್ಲಿ ಕಟ್ಟಡ ಮಾಲಿಕನಿಗೆಂದೇ ಒಂದು ಕೋಣೆ, ಆ ಕೋಣೆಗೆ ಪ್ರತೀ ಭಾನುವಾರ ಮಾಲಿಕನ ಸ್ಪೆಷಲ್ ಆದ ಆಗಮನ. ಅದೇನೋ ಆತನಿಗೆ ಅದು ಸ್ಪೆಷಲ್ ಕೋಣೆಯಾಗಿತ್ತು.

ಈ ಕೋಣೆಯ ಕಾರಣಕ್ಕೆ ಈಗ ಕಟ್ಟಡದಲ್ಲಿದ್ದ ಮೂವರು ಬಾಡಿಗೆದಾರರು ತಮ್ಮ ಅಂಗಡಿ ಕೋಣೆಯನ್ನೇ ಖಾಲಿ ಮಾಡುವಂತಾಗಿದೆ. ಇದಕ್ಕೆ ಕಾರಣ ಏನದು ಕೇಳಿದರೆ ನೀವು ಬೆಚ್ಚಿ ಬೀಳುತ್ತೀರಿ.
ಅಂದಹಾಗೆ ಈ ಘಟನೆ ನಡೆದದ್ದು ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದಲ್ಲಿ.

ಕಟ್ಟಡ ಮಾಲಿಕ ಚೆನ್ನಿಗೆ ಆಂಟಿಯರೆಂದರೆ ಒಂಥರಾ ಹುಚ್ಚು. ಹಾಗೆಯೇ ಈತ ಸ್ವಲ್ಪ ಜೊಲ್ಲು ಸ್ವಭಾವದ ವ್ಯಕ್ತಿ. ಈತನ ಕಟ್ಟಡದಲ್ಲಿ ಒಂದು ಆಂಟಿಯ ಕೋಣೆಯೂ ಇದೆ. ಕೆಲಸವಿಲ್ಲದಿದ್ದರೂ ಈ ಆಂಟಿಯ ಕೋಣೆಗೆ ಕಟ್ಟಡ ಮಾಲಿಕ ಎಂಟ್ರಿ ಕೊಟ್ಟು ಸದಾ ಹಾಜರಿ ಕೊಡುತ್ತಿದ್ದ. ಮಾಲಿಕ ಯಾಕೆ ಭಾನುವಾರ ಮಾತ್ರ ಮಧ್ಯಾಹ್ನದ ವೇಳೆ ಬರುತ್ತಾನೆ ಎಂಬ ಸಂಶಯ ಹಲವರಿಗಿತ್ತು. ಆತನ ಅಂಗಡಿಯನ್ನು ಬಾಡಿಗೆಗೆ ಪಡೆದವರದು ತೀರದ ಕುತೂಹಲ. ಅದೇ ಈಗ ಬಾಡಿಗೆದಾರರನ್ನು ಪೇಚಿಗೆ ಸಿಲುಕುವಂತೆ ಮಾಡಿದೆ.

Ad Widget / / Ad Widget

ಭಾನುವಾರದ ಮಧ್ಯಾಹ್ನದ ಸ್ಪೆಷಲ ರೂಮಿನ ರಹಸ್ಯವನ್ನು ಬೇಧಿಸಲು ಮಾಲೀಕನ ಬಳಿಯೇ ಬಾಡಿಗೆಗಿರುವ ಮೂವರು ಬಾಡಿಗೆದಾರರು ಪತ್ತೆದಾರರಂತೆ ತಯಾರಾಗಿದ್ದಾರೆ. ಇದನ್ನು ಪತ್ತೆ ಮಾಡಬೇಕು ಎಂದು ಕಟ್ಟಡದಲ್ಲಿ ಮೂವರು ಸ್ನೇಹಿತರು ಹೊಂಚು ಹಾಕಿ ಕೂತಿದ್ದಾರೆ. ಕಟ್ಟಡ ಮಾಲಿಕ ಆಂಟಿಯ ಕೋಣೆಗೆ ಹೋಗಿದ್ದೇ ತಡ, ಆ ಮೂವರು ಪತ್ತೇದರಿ ಮನಸ್ಥಿತಿಯ ಬಾಡಿಗೆದಾರರು ಏನಾಗುತ್ತಿದೆ ಎಂದು ಕೋಣೆಗೆ ಇಣುಕಿ ನೋಡಿದ್ದಾರೆ. ಇದು ಚಾಲಾಕಿ ಮಾಲಿಕ ಚೆನ್ನಿಯ ಗಮನಕ್ಕೆ ಬಂದಿದೆ. ತಕ್ಷಣ ತನ್ನ ಬಣ್ಣ ಬಯಲಾಗುತ್ತದೆ ಎಂದು ಭಯಗೊಂಡ ಕಟ್ಟಡ ಮಾಲಿಕ ಏನೂ ಗೊತ್ತಿಲ್ಲದಂತೆ, ಮುಗ್ಧನಂತೆ ಹೊರಗಡೆ ಬಂದಿದ್ದಾರೆ.

ಕೆಲವೇ ಹೊತ್ತಿನಲ್ಲಿ ಇದೇ ವಾಟ್ಸಪ್ಪಿನಲ್ಲಿ ಈ ವಿಚಾರ ಹರಿದಾಡಿದೆ. ಸಿಟ್ಟಾದ ಕಟ್ಟಡ ಮಾಲಿಕ ಇಣುಕಿ ನೋಡಿದ ಮೂವರನ್ನೂ ಕೋಣೆ ಖಾಲಿ ಮಾಡಿ ಇಲ್ಲಿಂದ ಜಾಗ ಬಿಡುವಂತೆ ಒಂದು ತಿಂಗಳ ಗಡು ವಿಧಿಸಿದ್ದಾನೆ. ನೀವು ಎಂದು ಗೊತ್ತಿಲ್ಲದೆ ನಾವು ಇಣುಕಿ ನೋಡಿದ್ದೇವೆ ಎಂದು ಬಾಡಿಗೆದಾರರು ಬೇಡಿಕೊಂಡರೂ ಮಾಲಕ ತಣ್ಣಗಾಗಲಿಲ್ಲ. ಈ ವಿಚಾರ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಕೋಣೆಯಿಂದ ಖಾಲಿ ಮಾಡಿಸುವಷ್ಟು ದ್ವೇಷ ಯಾಕೆ? ಮೂವರು ಇಣುಕಿ ನೋಡಿದ ವೇಳೆ ಕಟ್ಟಡದೊಳಗೆ ಏನು ನಡೆಯುತ್ತಿತ್ತು ಎಂಬುದನ್ನು ಪೊಲೀಸರು ತನಿಖೆ ಮಾಡಬೇಕಾಗಿದೆ.

ಅನೈತಿಕ ವ್ಯವಹಾರ ನಡೆಯುತ್ತಿದ್ದರೆ ಅದರ ಬಗ್ಗೆ ಪೊಲೀಸರು ನಿಗಾವಹಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

Leave a Reply

error: Content is protected !!
Scroll to Top
%d bloggers like this: